ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ತಂಡದ ಪರಿಸ್ಥಿತಿ ಆರೋಗ್ಯಕರವಾಗಿಲ್ಲ: ಪೀಟರ್ಸನ್
ಲಂಡನ್, 5 ಜನವರಿ 2009   ( 12:14 IST )
ತಮ್ಮ ಮತ್ತು ಕೋಚ್ ಪೀಟರ್ ಮೂರ್ಸ್‌ ನಡುವೆ ಪ್ರಸಕ್ತ ನಡೆಯುತ್ತಿರುವ ಕಲಹದಿಂದ ತಂಡದಲ್ಲಿನ ಪರಿಸ್ಥಿತಿ ಆರೋಗ್ಯಕರವಾಗಿಲ್ಲ ಎಂದು ಒಪ್ಪಿಕೊಂಡಿರುವ ನಾಯಕ ಕೆವಿನ್ ಪೀಟರ್ಸನ್, ವೆಸ್ಟಿಂಡೀಸ್ ಪ್ರವಾಸ ಕೈಗೊಳ್ಳವ ಮುನ್ನ ಇಸಿಬಿ ಈ ಬಿಕ್ಕಟ್ಟನ್ನು ಬಗೆಹರಿಸುವ ಒಲವು ವ್ಯಕ್ತಪಡಿಸಿದ್ದಾರೆ.

ಖಂಡಿತವಾಗಿಯೂ ಈಗಿನ ಪರಿಸ್ಥಿತಿ ಆರೋಗ್ಯಕರವಾಗಿಲ್ಲ. ಈ ಬಿಕ್ಕಟ್ಟು ಆದಷ್ಟು ಬೇಗ ಬಗೆಹರಿಯುವುದನ್ನು ತಾವು ಖಚಿತ ಪಡಿಸಿಕೊಳ್ಳಬೇಕು. ವೆಸ್ಟಿಂಡೀಸ್‌ಗೆ ತೆರಳುವ ಮುನ್ನ ಇದು ಬಗೆಹರಿಯಬೇಕು ಎಂದು ಅವರು ತಿಳಿಸಿದ್ದಾರೆ.

ಇಂಗ್ಲೆಂಡ್ ತಂಡದ ಒಳ್ಳೆಯದಕ್ಕಾಗಿ ಪ್ರತಿಯೊಬ್ಬರು ತೃಪ್ತಿದಾಯಕರಾಗಿರಬೇಕು, ಪ್ರತಿಯೊಬ್ಬರು ಸಮಾನ ಗುರಿಯನ್ನು ಹಾಗೂ ಸಮಾನ ದಿಶೆಯನ್ನು ಹೊಂದಿರಬೇಕು ಎಂದು ಪೀಟರ್ಸನ್ ತಿಳಿಸಿದ್ದಾರೆ.

ಅದಾಗ್ಯೂ, ಇಸಿಬಿ ವ್ಯವಸ್ಥಾಪಕ ನಿರ್ದೇಶಕ ಹುಗ್ ಮೊರ್ರಿಸ್‌ರಿಗೆ ಪ್ರಸಕ್ತ ನಡೆಯುತ್ತಿರುವ ಬಿಕ್ಕಟ್ಟನ್ನು ಬಗೆಹರಿಸುವ ಜವಬ್ದಾರಿ ವಹಿಸಿದೆ. ಒಂದು ವೇಳೆ ನಾಯಕ ಮತ್ತು ಕೋಚ್ ತಮ್ಮ ನಡುವಿನ ವೈಮನಸ್ಸನ್ನು ಬಗೆಹರಿಸಲಾಗದಿದ್ದರೆ ಮೂರ್ಸ್ ಸ್ಥಾನ ತುಂಬುವ ನಿಟ್ಟಿನಲ್ಲಿ ಇಸಿಬಿ ಕೋಚ್‌ಗಳ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.

ವೆಸ್ಟಿಂಡೀಸ್ ಪ್ರವಾಸಕ್ಕೆ ಮಾಜಿ ಟೆಸ್ಟ್ ಆಟಗಾರ ಆಶ್ಲೇ ಗೈಲ್ಸ್ ತಾತ್ಕಾಲಿಕ ಕೋಚ್‌ರನ್ನಾಗಿ ನೇಮಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸ್ಮಿತ್ ಕಿರು ಬೆರಳು ಮುರಿತ, 6 ವಾರ ಹೊರಕ್ಕೆ
ಪೀಟರ್ಸನ್-ಮೂರ್ಸ್ ಕಲಹಕ್ಕೆ ಚೆನ್ನೈ ಟೆಸ್ಟ್ ಕಾರಣ: ವರದಿ
ಚೆನ್ನೈ ಒಪನ್: ಲೀ-ಭೂಪತಿ ಮೇಲೆ ಬಹು ನಿರೀಕ್ಷೆ
ಹೋಪ್‌ಮನ್ ಕಪ್: ರಷ್ಯಾ ಶುಭಾರಂಭ
ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸಾಧ್ಯತೆ
ಬಾಂಗ್ಲಾ ಟೆಸ್ಟ್ ಸ್ಥಾನಮಾನ ರದ್ದಿಗೆ ಮಾರ್ಗನ್ ಬಯಕೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...