|
| ಸ್ಮಿತ್ ಕಿರು ಬೆರಳು ಮುರಿತ, 6 ವಾರ ಹೊರಕ್ಕೆ |
| ಸಿಡ್ನಿ, 5 ಜನವರಿ 2009 ( 11:09 IST ) | |
ಭಾನುವಾರದಂದು ಆಸ್ಟ್ರೇಲಿಯಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದ ಆಟದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್ ತಮ್ಮ ಎಡ ಕಿರು ಬೆರಳು ಮುರಿತಕ್ಕೊಳಗಾದ ಕಾರಣ 6 ವಾರಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿರುವ ಮತ್ತು ಮೂರನೇ ಟೆಸ್ಟ್ ಬಳಿಕ ತಮ್ಮ ಗಾಯಗೊಂಡ ಬಲ ಮೊಣಕೈಗೆ ತಮ್ಮದೇ ರಕ್ತ ಸೇರಿಸಲು ತವರಿಗೆ ತೆರಳಲಿರುವ ಸ್ಮಿತ್ ಆಸಿಸ್ ವೇಗಿ ಮಿಚೆಲ್ ಜಾನ್ಸನ್ ಚೆಂಡಿಗೆ ತಮ್ಮ ಕಿರು ಬೆರಳು ಗಾಯ ಮಾಡಿಸಿಕೊಂಡರು.
ತಮ್ಮ 30ರನ್ನುಗಳನ್ನು ಪೂರೈಸಿದ ಸ್ಮಿತ್ ಭಾರೀ ನೋವಿನೊಂದಿಗೆ ಮೈದಾನದಿಂದ ಹೊರ ನಡೆದರು. ನಂತರ ಎಕ್ಸ್-ರೇಯಲ್ಲಿ ಅವರ ಕಿರು ಬೆರಳು ಮುರಿತಕ್ಕೊಳಗಾಗಿರುವುದು ಗೋಚರವಾಯಿತು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಬ್ಯಾಟಿಂಗ್‌ಗೆ ಇಳಿಯುವುದು ಅನುಮಾನವಾಗಿದೆ.
ದ.ಆಫ್ರಿಕಾ ತಂಡ ಆಡಳಿತ ಪ್ರಕಾರ, ಎರಡನೇ ಇನ್ನಿಂಗ್ಸ್ ಮುನ್ನ ಉಸ್ತುವಾರಿ ನಾಯಕನನ್ನು ನಿರ್ಧರಿಸಲಾಗುವುದು. ಉಪ ಕಪ್ತಾನ ಆಶ್ವೆಲ್ ಪ್ರಿನ್ಸ್ ಕೈ ಗಾಯದಿಂದ ಹೊರ ಗುಳಿದಿದ್ದು, ವಿಕೆಟ್ ಕೀಪರ್ ಮಾರ್ಕ್ ಬೌಚರ್ ಉಸ್ತವಾರಿ ನಾಯಕತ್ವ ವಹಿಸುವಾಗಿನ ಮುಂಚೂಣಿಯ ಅಭ್ಯರ್ಥಿಯಾಗಿದ್ದಾರೆ.
ಪೆಬ್ರವರಿ 26ರ ರಿಂದ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ತವರು ಟೆಸ್ಟ್ ಸರಣಿಗಾಗಿ ಸಿದ್ಧರಾಗಿರಲು ಸ್ಮಿತ್ ತಮ್ಮ ಎರಡೂ ಗಾಯಗಳಿಂದ ಚೇತರಿಸಿಕೊಳ್ಳುವ ಬಗ್ಗೆ ಯೋಜಿಸಲು ಮುಂದಿನ ವಾರ ತಂಡದ ವೈದ್ಯಕೀಯ ತಜ್ಞರನ್ನು ಭೇಟಿಯಾಗಲಿದ್ದಾರೆ.
ಸ್ಮಿತ್ ಯಾವುದೇ ಚಿಕಿತ್ಸೆಗೊಳಗಾಗುವ ಅಗತ್ಯವಿಲ್ಲ ಎಂಬುದು ವೈದ್ಯಕೀಯ ಅಭಿಪ್ರಾಯ ಮತ್ತು ಚೇತರಿಕೆಗೆ ಸುಮಾರು 6 ವಾರಗಳ ಕಾಲಾವಕಾಶ ಬೇಕು ಎಂದು ಕ್ರಿಕೆಚ್ ದಕ್ಷಿಣ ಆಫ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|