ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಚೆನ್ನೈ ಒಪನ್: ಲೀ-ಭೂಪತಿ ಮೇಲೆ ಬಹು ನಿರೀಕ್ಷೆ
ಚೆನ್ನೈ , 5 ಜನವರಿ 2009   ( 10:24 IST )
ಇಂದಿನಿಂದ 450,000 ಡಾಲರ್ ಮೊತ್ತದ ಚೈನ್ನೆ ಒಪನ್ ಟೂರ್ನಿ ಆರಂಭವಾಗಲಿದ್ದು, ಸಿಂಗಲ್ಸ್ ವಿಭಾಗದಲ್ಲಿ ರಷ್ಯಾದ ಅಗ್ರ ಶ್ರೇಯಾಂಕಿತ ನಿಕೊಲೇ ಡೇವಿಡೆಂಕೊ ಪ್ರಶಸ್ತಿ ಗೆಲ್ಲುವ ನೆಚ್ಚಿನವರಾಗಿ ಹೊರಹೊಮ್ಮಿದ್ದರೆ, ಡಬಲ್ಸ್ ವಿಭಾಗದಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ ಮೇಲೆ ಬಹುವಾದ ತವರು ನಿರೀಕ್ಷೆ ಇದೆ.

ಪ್ರೇಕ್ಷಕರು ಈ ಟೂರ್ನಿಯಲ್ಲಿ ಅಗ್ರ 50ರಲ್ಲಿ 7 ಆಟಗಾರರು ಸೇರಿದಂತೆ ಹಲವು ಅಂತಾರಾಷ್ಟ್ರೀಯ ತಾರೆಗಳನ್ನು ನೋಡಲಿದ್ದು, ಸ್ವಿಜ್ ಒಲಿಂಪಿಕ್ ಚಾಂಪಿಯನ್ ಸ್ಟನಿಸ್ಲಾಸ್ ವಾವ್ರಿಂಕರೂ ಇದರಲ್ಲಿ ಸೇರಿದ್ದಾರೆ. ವವ್ರಿಂಕ ಬೀಜಿಂಗ್ ಒಲಿಂಪಿಕ್ಸ್‌ನ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.

ನಾಲ್ಕನೇ ಶ್ರೇಯಾಂಕಿತ ಕ್ರೊಟ ಇವೊ ಕಾರ್ಲೊವಿಕ್ ಈ ಹಾರ್ಡ್ ಕೋರ್ಟ್ ಟೂರ್ನಿಯಲ್ಲಿ ನೋಡಬೇಕಾಗಿರುವ ಆಟಗಾರರಾಗಿದ್ದಾರೆ.

ಇತ್ತ ಭಾರತಕ್ಕೆ ಸಂಬಂಧಿಸಿದಂತೆ ಸೋಮ್ದೇವ್ ದೇವ್ವಾರಮನ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಆತಿಥೇಯ ದೇಶದ ಮುಂದಾಳತ್ವ ವಹಿಸಲಿದ್ದಾರೆ. ಪ್ರಕಾಶ್ ಅಮೃತ್‌ರಾಜ್ ಕೂಡ ಈ ಜಿದ್ದಾಜಿದ್ದಿನಿಂದ ಕೂಡಿದ ಟೂರ್ನಿಯಲ್ಲಿ ಕಾಣಿಸಲಿದ್ದಾರೆ.

ಅದಾಗ್ಯೂ, ಪ್ರೇಕ್ಷಕರು ಪೇಸ್ ಮತ್ತು ಭೂಪತಿ ಜೋಡಿ ಮೇಲೆ ತಮ್ಮ ಆಶಾವಾದವನ್ನು ಇಟ್ಟಿದ್ದಾರೆ. ಅವರಿಬ್ಬರೂ ಪ್ರತ್ಯೇಕ ಪಾಲುದಾರರೊಂದಿಗೆ ಆಡಲಿದ್ದು, ಫೈನಲಿನಲ್ಲಿ ಪರಸ್ಪರ ಮುಖಾಮುಖಿಯಾಗುವ ನಿರೀಕ್ಷೆ ಇದೆ. ಭೂಪತಿ ಮತ್ತು ಅವರ ಬಹರೈನ್ ಜೋಡಿ ಮಾರ್ಕ್ ನೋವೆಲ್ಸ್‌ಗೆ ಅಗ್ರ ಶ್ರೇಯಾಂಕ ನೀಡಲಾಗಿದ್ದರೆ, ಪೇಸ್ ಮತ್ತು ಜೆಕ್‌ನ ಲುಕಾಸ್ ಡ್ಲೌಹಿಗೆ ಎರಡನೇ ಶ್ರೇಯಾಂಕ ನೀಡಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹೋಪ್‌ಮನ್ ಕಪ್: ರಷ್ಯಾ ಶುಭಾರಂಭ
ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸಾಧ್ಯತೆ
ಬಾಂಗ್ಲಾ ಟೆಸ್ಟ್ ಸ್ಥಾನಮಾನ ರದ್ದಿಗೆ ಮಾರ್ಗನ್ ಬಯಕೆ
ಬಿಸಿಸಿಐಯಿಂದ ಅಂತರ್-ಕಾರ್ಪೊರೇಟ್ ಟೂರ್ನಿ ಅನಾವರಣ
ರಾತ್ರಿ ಟೆಸ್ಟ್‌ ಕುರಿತು ಪರಿಗಣಿಸಲಿರುವ ಐಸಿಸಿ
ಕಾದಿರ್ ಮಾಧ್ಯಮ ಹೇಳಿಕೆ: ಪಿಸಿಬಿ ಕೆಂಗಣ್ಣು
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...