|
| ಬಿಸಿಸಿಐಯಿಂದ ಅಂತರ್-ಕಾರ್ಪೊರೇಟ್ ಟೂರ್ನಿ ಅನಾವರಣ |
| ಮುಂಬೈ, ಶನಿವಾರ, 3 ಜನವರಿ 2009 ( 16:00 IST ) | |
ಆಟಗಾರರ ಉದ್ಯೋಗ ಅವಕಾಶ ವೃದ್ಧಿ ಮತ್ತು ತಮ್ಮ ಸಂಸ್ಥೆಗೆ ಕ್ರಿಕಟರುಗಳನ್ನು ನೇಮಕಾತಿ ಮಾಡುವಲ್ಲಿ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಿಸಿಸಿಐ ಅಂತರ್ ಕಾರ್ಪೊರೇಟ್ ನಗದು ಬಹುಮಾನ ಟೂರ್ನಮೆಂಟನ್ನು ಪ್ರಾರಂಭಿಸಲು ನಿರ್ಧರಿಸಿದೆ.
50 ಓವರ್ ಮತ್ತು ಟ್ವೆಂಟಿ20 ಆವೃತ್ತಿಗಳಲ್ಲಿ ನಡೆಸಲಾಗುವ ಈ ಪ್ರಸ್ತಾಪಿತ ಅಂತರ್-ಕಾರ್ಪೊರೇಟ್ ಟೂರ್ನಿಯಲ್ಲಿ ವಿಜೇತರಿಗೆ ಒಂದು ಕೋಟಿ ರೂಪಾಯಿ ಮತ್ತು ರನ್ನರ್ಸ್-ಅಪ್‌ಗೆ 50 ಲಕ್ಷ ರೂಪಾಯಿ ಹಾಗೂ ಸೋತ ಸೆಮಿ-ಫೈನಲಿಸ್ಟ್‌ಗಳಿಗೆ ತಲಾ 25 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು.
ಬಿಸಿಸಿಐಯ ಜಂಟಿ ಕಾರ್ಯದರ್ಶಿ ಮತ್ತು ಆಯ್ಕಾ ಸಮಿತಿಯ ಮಾಜಿ ಸದಸ್ಯ ಸಂಜಯ್ ಜಗ್ದಾಲೆಯವರನ್ನು ಅಂತರ್-ಕಾರ್ಪೊರೇಟ್ ಟೂರ್ನಿ ಆಯೋಜನೆಯ ಮೇಲ್ವಿಚಾರಣೆಗೆ ರಚಿಸಲಾಗಿರುವ ನೂತನ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಕೆಎಸ್ ವಿಶ್ವನಾಥನ್, ಪ್ರೊ. ಆರ್ ಎಸ್ ಶೆಟ್ಟಿ, ಚಾಂಮುಡೇಶ್ವರನಾಥ್, ರಂಜೀಬ್ ಬಿಸ್ವಾಲ್ ಮತ್ತು ಅನಿರುದ್ಧ್ ಚೌಧರಿ ಸಮಿತಿಯ ಇತರ ಸದಸ್ಯರಾಗಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಎನ್ ಶ್ರೀನಿವಾಸನ್ ಪತ್ರಿಕಾ ಬಿಡುಗಡೆಯಲ್ಲಿ ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|