ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಟೆಸ್ಟ್ ತಂಡ ಪ್ರಕಟ: ಯುವಿ, ಒಹ್ಜಾ ಇನ್, ಆರ್‌ಪಿ ಔಟ್
ನವದೆಹಲಿ, ಗುರುವಾರ, 4 ಡಿಸೆಂಬರ್ 2008   ( 16:50 IST )
ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗಾಗಿ ಕ್ರಿಶ್ ಶ್ರೀಕಾಂತ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ 15 ಸದಸ್ಯರ ಸ್ಕ್ವೇಡನ್ನು ಘೋಷಿಸಿದ್ದು, ಪ್ರಗ್ಯಾನ್ ಒಹ್ಜಾ ಹಾಗೂ ಯುವರಾಜ್ ಸಿಂಗ್ ವಾಪಸಾತಿ ಕಂಡಿದ್ದರೆ, ವೇಗಿ ಆರ್ ಪಿ ಸಿಂಗ್‌ರಿಗೆ ಕೋಕ್ ನೀಡಲಾಗಿದೆ.

ಇತ್ತೀಚಿಗಿನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲೂ ಬೌಲಿಂಗ್‌ನಲ್ಲೂ ಮಿಂಚಿದ ಯುವರಾಜ್ ಸಿಂಗ್ ನಿರೀಕ್ಷೆಯಂತೆಯೇ ಟೆಸ್ಟ್ ತಂಡಕ್ಕೆ ವಾಪಸಾತಿ ಕಂಡಿದ್ದಾರೆ. ಸೌರವ್ ಗಂಗೂಲಿ ನಿವೃತ್ತಿಯಿಂದ ತೆರವಾದ ಮಧ್ಯಮ ಕ್ರಮಾಂಕ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಇದು ಯುವರಾಜ್‌ಗಾಗಿನ ಒಂದು ಉತ್ತಮ ಅವಕಾಶವಾಗಿದೆ.

ಆಸಿಸ್ ವಿರುದ್ಧದ ದಿಲ್ಲಿ ಟೆಸ್ಟ್‌ನಲ್ಲಿ ವೇಗಿ ವಾಟ್ಸನ್‌ಗೆ ಮೊಣಕೈಯಿಂದ ತಳ್ಳಿ ಒಂದು ಟೆಸ್ಟ್ ನಿಷೇಧಕ್ಕೊಳಗಾದ ಗೌತಂ ಗಂಭೀರ್ ತಂಡಕ್ಕೆ ವಾಪಸಾತಿ ಕಂಡಿದ್ದಾರೆ.

ಹರ್ಭಜನ್ ಸಿಂಗ್ ಮತ್ತು ಅಮಿತ್ ಮಿಶ್ರಾ ಭಾರತದ ಸ್ಪಿನ್ ಜವಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಈ ಕಡೆ ವೇಗದ ಬೌಲಿಂಗ್ ದಾಳಿ ಹೊಣೆಯನ್ನು ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮಾ ವಹಿಸಲಿದ್ದಾರೆ. ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವೇಗಿ ಮುನಾಪ್ ಪಟೇಲ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡ ಇಂತಿದೆ: ಮಹೇಂದ್ರ ಸಿಂಗ್ ಧೋನಿ (ನಾಯಕ), ವಿರೇಂದ್ರ ಸೆಹ್ವಾಗ್, ಗೌತಂ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್, ಯುವರಾಜ್ ಸಿಂಗ್, ಎಂ ವಿಜಯ್, ಹರ್ಭಜನ್ ಸಿಂಗ್, ಬದ್ರಿನಾಥ್, ಜಹೀರ್ ಖಾನ್, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಮುನಾಪ್ ಪಟೇಲ್ ಮತ್ತು ಪ್ರಗ್ಯಾನ್ ಒಹ್ಜಾ.


(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
2010 ಸಿಜಿಗಾಗಿ ಹೋಟೆಲ್‌ಗಳ ಕೊರತೆ: ಸಂಪುಟ
ಲಂಕಾ ಬದಲಿಗೆ ವಿಂಡೀಸ್ ಇಂಗ್ಲೆಂಡ್‌ ಪ್ರವಾಸ
ಭಾರತ ಪ್ರವಾಸ: ಪ್ರೆಡ್ಡೀ ಮನವೊಲಿಸಿದ ಪೀಟರ್ಸನ್
ವೃತ್ತಿಜೀವನ ಆವೇಗ ಕಾಯ್ದುಕೊಳ್ಳುವತ್ತ ಬೆಕ್ಕಂ ಚಿತ್ತ
ಸಿಡ್ನಿ ಟೂರ್ನಿಯಲ್ಲಿ ಸೆರೆನಾ, ಟ್ಸೊಂಗ
ಅಭ್ಯಾಸಕ್ಕಾಗಿ ಅಬು ದಬಿ ತೆರಳಿದ ಇಂಗ್ಲೆಂಡ್ ತಂಡ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ರಾಜ್ಯದ ಎಂಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...