|
| 2010 ಸಿಜಿಗಾಗಿ ಹೋಟೆಲ್‌ಗಳ ಕೊರತೆ: ಸಂಪುಟ |
| ನವದೆಹಲಿ, ಗುರುವಾರ, 4 ಡಿಸೆಂಬರ್ 2008 ( 16:34 IST ) | |
2010 ಕಾಮನ್‌ವೆಲ್ತ್ ಕ್ರೀಡಾಕೂಟ (ಸಿಜಿ)ದ ವೇಳೆಗೆ ಸಾಕಷ್ಟು ಹೋಟೆಲ್ ವ್ಯವಸ್ಥೆ ಲಭ್ಯವಾಗದಿರಬಹುದು ಎಂಬುದಾಗಿ ಭಾರತೀಯ ಸಂಪುಟ ತಿಳಿಸಿದೆ.
ಹೆಚ್ಚುವರಿ 30,000 ಹೋಟೆಲ್ ಕೊಠಡಿಗಳ ಗುರಿಯನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗದಿರುವ ಬಗ್ಗೆ ಕ್ರೀಡಾ ಸಚಿವ ಎಂಎಸ್ ಗಿಲ್ ಆತಂಕ ವ್ಯಕ್ತಪಡಿಸಿರುವುದನ್ನು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಕಪಿಲ್ ಸಿಬಾಲ್ ತಿಳಿಸಿದ್ದಾರೆ.
ತುರ್ತುಗತಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದ್ದು. ಪ್ರತಿಯೊಂದು ಕಾಮಗಾರಿಯೂ ಕ್ಲಪ್ತ ಸಮಯದೊಳಗೆ ಪೂರ್ಣಗೊಳ್ಳಬೇಕಾಗಿದೆ ಎಂದು ಸಿಬಾಲ್ ವರದಿಗಾರರಲ್ಲಿ ತಿಳಿಸಿದ್ದಾರೆ.
ತದ ನಂತರ ಸಚಿವರುಗಳ ಗುಂಪಿಗೆ ಗೇಮ್ಸ್‌ಗೆ ಸಂಬಂಧಿಸಿದ ಪ್ರಮುಖ ಅಂಶಗಳು ಹಾಗೂ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭದಲ್ಲಿ ಏನನ್ನು ಪ್ರದರ್ಶಿಸ ಬೇಕು ಎಂಬುದರ ಬಗ್ಗೆ ಎರಡು ವಾರದೊಳಗೆ ವರದಿ ಸಲ್ಲಿಸುವಂತೆ ಸಂಪುಟ ನಿರ್ದೇಶನ ನೀಡಿದೆ.
ಈ ಸಚಿವರ ಗುಂಪಿನಲ್ಲಿ ನಗರಾಭಿವೃದ್ಧಿ ಸಚಿವ ಎಸ್ ಜೈಪಾಲ್ ರೆಡ್ಡಿ, ಪ್ರವಾಸೋದ್ಯಮ ಸಚಿವೆ ಅಂಬಿಕಾ ಸೋನಿ ಮತ್ತು ಸಿಬಾಲ್ ಇದ್ದಾರೆ.
ಮುಂಬೈ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ಗಾಗಿನ ಭದ್ರತಾ ವ್ಯವಸ್ಥೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸಿಬಾಲ್, ಅದರ ಬಗ್ಗೆ ನೀವು ಚಿಂತಿಸಬೇಡಿ, ಏನೆಲ್ಲಾ ಅಗತ್ಯವಿದೆಯೋ ಅದನ್ನೆಲ್ಲಾ ಮಾಡಲಾಗುವುದು ಎಂದು ಉತ್ತರಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|