ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಭಾರತ ಪ್ರವಾಸ: ಪ್ರೆಡ್ಡೀ ಮನವೊಲಿಸಿದ ಪೀಟರ್ಸನ್
ಲಂಡನ್, ಗುರುವಾರ, 4 ಡಿಸೆಂಬರ್ 2008   ( 13:12 IST )
ಕಳೆದ ವಾರದ ಮುಂಬೈ ಉಗ್ರರ ದಾಳಿಯಿಂದಾಗಿ ಆಟಗಾರರ ಮನದಲ್ಲಿ ಅಚ್ಚೊತ್ತಿರುವ ಆತಂಕಗಳ ಹೊರತಾಗಿಯೂ ಭಾರತ ಪ್ರವಾಸ ಕೈಗೊಳ್ಳುವಂತೆ ಆಲ್-ರೌಂಡರ್ ಆಂಡ್ರ್ಯೂ ಪ್ಲಿಂಟಾಪ್‌ರ ಮನವೊಲಿಸುವಲ್ಲಿ ಇಂಗ್ಲೆಂಡ್ ನಾಯಕ ಕೇವಿನ್ ಪೀಟರ್ಸನ್ ಯಶಸ್ವಿಯಾಗಿದ್ದಾರೆ.

ಬ್ರಿಟೀಷ್ ಪತ್ರಿಕೆಗಳ ಪ್ರಕಾರ, ಪೀಟರ್ಸನ್ ಪ್ಲಿಂಟಾಪ್‌ರಲ್ಲಿ ಮಾತುಕತೆ ನಡೆಸಿ, ತಮ್ಮ ಸುರಕ್ಷತಾ ಆಂತಕಗಳನ್ನು ಬದಿಗಿಟ್ಟು, ಡಿಸೆಂಬರ್ 11ರಿಂದ ಪ್ರಾರಂಭವಾಗಲಿರುವ ಎರಡು ಟೆಸ್ಟ್ ಪಂದ್ಯ ಸರಣಿಯಲ್ಲಿ ಪಾಲ್ಗೊಳ್ಳಲು ತತ್ವಶಃ ಒಪ್ಪಿಗೆ ನೀಡುವಂತೆ ಮನವೊಲಿಸಿದರು.

ವೇಗದ ಬೌಲರ್ ಸ್ಟೀವ್ ಹರ್ಮಿಸನ್ ಕೂಡ ಸರಣಿಯಲ್ಲಿ ಆಡಲು ಒಪ್ಪಿಕೊಂಡಿದ್ದಾರೆ. ಗಾಯಾಳು ವೇಗದ ಬೌಲರ್ ರಿಯಾನ್ ಸೈಡ್‌ಬಾಟಮ್ ಏಕಮಾತ್ರ ಗೈರು ಆಟಗಾರರಾಗಲಿದ್ದಾರೆ.

ಭಾನುವಾರ ಭದ್ರತಾ ವರದಿಯನ್ನು ಆಲಿಸಿದ ಬಳಿಕ ತಮ್ಮ ಅಂತಿಮ ಬದ್ಧತೆಯನ್ನು ನೀಡುವೆವು ಎಂಬುದಾಗಿ ಆಟಗಾರರು ತಿಳಿಸಿದ್ದಾರೆ. ಇಂದು ಇಂಗ್ಲೆಂಡ್ ತಂಡ ಅಭ್ಯಾಸಕ್ಕಾಗಿ ಅಬು ದಬಿಗೆ ತೆರಳಿದೆ.

ಕಳೆದ ಕೆಲ ದಿನಗಳಿಂದ ಪೀಟರ್ಸನ್ ಜತೆ ನಿರಂತರವಾಗಿ ದೂರವಾಣಿ ಸಂಭಾಷಣೆ ಮಾಡಿದ ಬಳಿಕ ಪ್ಲಿಂಟಾಪ್‌ರಿಂದ ಈ ನಡೆ ಹೊರಬಿದ್ದಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವೃತ್ತಿಜೀವನ ಆವೇಗ ಕಾಯ್ದುಕೊಳ್ಳುವತ್ತ ಬೆಕ್ಕಂ ಚಿತ್ತ
ಸಿಡ್ನಿ ಟೂರ್ನಿಯಲ್ಲಿ ಸೆರೆನಾ, ಟ್ಸೊಂಗ
ಅಭ್ಯಾಸಕ್ಕಾಗಿ ಅಬು ದಬಿ ತೆರಳಿದ ಇಂಗ್ಲೆಂಡ್ ತಂಡ
2009 ಕ್ಲೇಕೋರ್ಟ್ ಟೂರ್ನಿ ಕಡಿತಗೊಳಿಸಿದ ಪೆಡರರ್
ಮೋಹನ್ ಬಗಾನ್ ಗ್ರೌಂಡ್: ಮರಡೋನಾರಿಂದ ಕಾರ್ಯಾಗಾರ
ರಾಡಿಕ್ ಜತೆ ಸೋಮ್ದೇವ್ ತರಬೇತಿ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ರಾಜ್ಯದ ಎಂಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...