|
| ಸಿಡ್ನಿ ಟೂರ್ನಿಯಲ್ಲಿ ಸೆರೆನಾ, ಟ್ಸೊಂಗ |
| ಸಿಡ್ನಿ, ಗುರುವಾರ, 4 ಡಿಸೆಂಬರ್ 2008 ( 12:22 IST ) | |
ಅಗ್ರ 10 ಮಹಿಳಾ ಶ್ರೇಯಾಂಕಿತರಲ್ಲಿ 6 ಆಟಗಾರರು ಹಾಗೂ ಪುರುಷರ 20 ಅಗ್ರ ತಾರೆಗಳಲ್ಲಿ 5 ಮಂದಿ ಮುಂದಿನ ತಿಂಗಳು ನಡೆಯಲಿರುವ ಸಿಡ್ನಿ ಅಂತಾರಾಷ್ಟ್ರೀಯದಲ್ಲಿ ಪಾಲ್ಗೊಳ್ಳುವುದನ್ನು ದೃಢಪಡಿಸಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
9 ಬಾರಿಯ ಗ್ರಾಂಡ್ ಸ್ಲ್ಯಾಮ್ ವಿಜೇತೆ ಸೆರೆನಾ ವಿಲಿಯಮ್ಸ್ ಮತ್ತು ವಿಶ್ವ ನಂಬರ್ 6 ಡೊ ವಿಲ್‌ಪ್ರೈಡ್ ಟ್ಸೋಂಗ ಜನವರಿ 11- 17ರಂದು ನಡೆಯಲಿರುವ ಮಿಶ್ರ ಡಬ್ಲ್ಯುಟಿಎ/ಎಟಿಪಿ ಟೂರ್ನಿಗಾಗಿನ ಅಗ್ರ ಶ್ರೇಯಾಂಕಿತ ಆಟಗಾರರಾಗಿರುವರು.
ಮಹಿಳಾ ವಿಭಾಗದಲ್ಲಿ ವಿಲಿಯಮ್ಸ್ ಅಗ್ರ ಟೆನ್ನಿಸ್ ಆಟಗಾರರಾದ ದಿನಾರಾ ಸಪಿನಾ (3), ಎಲೆನಾ ಡೆಮೆಂಟೀವಾ (4), ವೆರ ಜ್ವೊನರೆವ (7), ಸ್ವೆಟ್ಲಾನಾ ಕುಜ್ನೆಟ್ಸೋವ (8) ಮತ್ತು ಅಗ್ನೀಸ್ಕ ರದ್ವನಸ್ಕ (10)ರ ಜತೆಗೂಡಲಿದ್ದಾರೆ.
ಉದಯೋನ್ಮುಖ ಡಬ್ಲ್ಯುಟಿಎ ತಾರೆಗಳಾದ ಕರೊಲೈನ್ ವೊಜ್ನೈಕಿ, ವಿಕ್ಟೋರಿಯಾ ಅಜರೆಂಕಾ, ಅಲಿಜೆ ಕೊರ್ನೆಟ್ ಮತ್ತು ಡೊಮಿನಿಕ ಸಿಬುಲ್ಕೊವ ಹಿರಿಯ ಆಟಗಾರರಾದ ಅಮೇಲಿ ಮೌರೆಸ್ಮೋ, ಡೇನಿಯಲ್ ಹಂಚಕೋವಾ ಮತ್ತು ಐ ಸುಗಿಯಾಮ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಟೂರ್ನಿ ನಿರ್ದೇಶಕ ಕ್ರೈಗ್ ವಾಟ್ಸನ್ ತಿಳಿಸಿದ್ದಾರೆ.
ಪುರುಷರ ವಿಭಾಗದಲ್ಲಿ ವಿಶ್ವ ನಂಬರ್ 7 ಗಿಲ್ಲೆಸ್ ಸಿಮೋನ್, ಆಸ್ಟ್ರೇಲಿಯಾ ಒಪನ್ ರನ್ನರ್ಸ್-ಅಪ್ ಟ್ಸೊಂಗ, ವಿಶ್ವ ನಂಬರ್ 11 ಡೇವಿಡ್ ನಲ್ಬಂದಿಯಾನ್, ಇಗೋರ್ ಆಂಡ್ರೀವ್ (19), ತೋಮಸ್ ಬೆರ್ಡಿಕ್ (20), ಟೋಮಿ ಪಿಶ್ (24) ಮತ್ತು ರಿಚರ್ಡ್ ಗಾಸ್ಕ್ವೆಟ್ (25) ಆಡಲಿದ್ದಾರೆ.
ರಷ್ಯಾದ ಹಾಲಿ ಚಾಂಪಿಯನ್ ಡ್ಮಿಟ್ರಿ ಟುರುಸ್ನೋವ್, ಸ್ಪೇನಿನ ಡೇವಿಸ್ ಕಪ್ ತಾರೆ ಪೆಲಿಸಿಯಾನೊ ಲೊಪೆಜ್ ಮತ್ತು ನಾಲ್ಕು ಬಾರಿತ ಸಿಡ್ನಿ ಚಾಂಪಿಯನ್ ಮತ್ತು ಆಸ್ಟ್ರೇಲಿಯಾ ನಂಬರ್ 1 ಲ್ಲೆಯ್ಟನ್ ಹೆವಿಟ್ ಕೂಡ ಕಣದಲ್ಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|