|
| ಅಭ್ಯಾಸಕ್ಕಾಗಿ ಅಬು ದಬಿ ತೆರಳಿದ ಇಂಗ್ಲೆಂಡ್ ತಂಡ |
| ಲಂಡನ್, ಗುರುವಾರ, 4 ಡಿಸೆಂಬರ್ 2008 ( 11:24 IST ) | |
ಭಾರತದಲ್ಲಿನ ತಮ್ಮ ಎರಡು ಟೆಸ್ಟ್ ಪಂದ್ಯಕ್ಕಾಗಿ ಆಗಮಿಸುವ ಮುನ್ನ ಪೂರ್ಣ ಸಾಮರ್ಥ್ಯದ ಇಂಗ್ಲೆಂಡ್ ಕ್ರಿಕೆಟ್ ತಂಡ ಅಭ್ಯಾಸಕ್ಕಾಗಿ ಗುರವಾರದಂದು ಅಬು ದಬಿಗೆ ತೆರಳಿದೆ.
ಇಂಗ್ಲೆಂಡ್ ತಂಡ ಅಬು ದಬಿಯಲ್ಲಿ ಅಭ್ಯಾಸ ಪಂದ್ಯವನ್ನು ಆಡಲಿದ್ದು, ಒಂದು ವೇಳೆ ಭದ್ರತಾ ಶಿಫಾರಸುಗಳನ್ನು ಅಳವಡಿಸಲಾಗಿದ್ದರೆ ಚೆನ್ನೆ ಹಾಗೂ ಮೊಹಾಲಿಯಲ್ಲಿ ನಡೆಯಲಿರುವ ತಮ್ಮ ಎರಡು ಟೆಸ್ಟ್ ಪಂದ್ಯಕ್ಕಾಗಿ ಮುಂದಿನ ವಾರ ತಂಡ ಭಾರತಕ್ಕೆ ಆಗಮಿಸಲಿದೆ ಎಂದು ಇಸಿಬಿ ತನ್ನ ವೆಬ್‌ಸೈಟಿನಲ್ಲಿ ಹೇಳಿದೆ.
ಎಲ್ಲಾ ಆಟಗಾರರು ಇಸಿಬಿ ಭದ್ರತಾ ತಂಡದ ವರದಿ ಹಾಗೂ ತಂಡದ ಭದ್ರತಾ ಸಲಹೆಗಾರ ರೆಗ್ ಡಿಕಸನ್ ಬಿಸಿಸಿಐಯಲ್ಲಿ ಅನುಷ್ಠಾನಗೊಳಿಸಲು ಹೇಳಿರುವ ಭದ್ರತಾ ಶಿಫಾರಸುಗಳನ್ನೂ ಪಡೆದಿದ್ದಾರೆ ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ 72 ತಾಸುಗಳ ಕಾಲ ಭದ್ರತಾ ಸಲಹೆಗಾರರು ಮತ್ತು ಸರಕಾರಿ ಏಜೆನ್ಸಿಗಳ ಜತೆ ಉನ್ನತ ಮಟ್ಟದ ಚರ್ಚೆ ನಡೆಸಿದ ಬಳಿಕ ಇಸಿಬಿ ಭಾರತ ಪ್ರವಾಸಕ್ಕೆ ಹಸಿರು ನಿಶಾನೆ ತೋರಿದೆ ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ತಂಡ ಅಬು ದಬಿಯಲ್ಲಿ ಅಭ್ಯಾಸ ನಡೆಸುತ್ತಿರುವ ವೇಳೆ ಮೊರ್ರಿಸ್ ಪ್ರಸಕ್ತ ಭಾರತದಲ್ಲಿರುವ ಇಸಿಬಿ ಭದ್ರತಾ ಸಲಹೆಗಾರ ಡಿಕಸನ್ ಜತೆಗೂಡಲಿದ್ದು, ಟೆಸ್ಟ್ ಪಂದ್ಯ ನಡೆಯಲಿರುವ ಚೆನ್ನೈ ಹಾಗೂ ಮೊಹಾಲಿಯಲ್ಲಿ ಅಗತ್ಯ ಎಲ್ಲಾ ಭದ್ರತಾ ವ್ಯವಸ್ಥೆಯ ಸಂಪೂರ್ಣ ಹಾಗೂ ಪರಿಣಾಮಕಾರಿ ಅಳವಡಿಕೆಯನ್ನು ಖಾತ್ರಿಗೊಳಿಸಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|