|
| 2009 ಕ್ಲೇಕೋರ್ಟ್ ಟೂರ್ನಿ ಕಡಿತಗೊಳಿಸಿದ ಪೆಡರರ್ |
| ಪ್ಯಾರಿಸ್, ಗುರುವಾರ, 4 ಡಿಸೆಂಬರ್ 2008 ( 11:01 IST ) | |
2009 ಋತುವಿನಲ್ಲಿ ರೋಜರ್ ಪೆಡರರ್ ತಮ್ಮ ಕ್ಲೇಕೋರ್ಟ್ ವೇಳಾಪಟ್ಟಿಯನ್ನು ಕಡಿತ ಗೊಳಿಸಲು ನಿರ್ಧರಿಸಿದ್ದಾರೆ.
ವಿಶ್ವ ನಂಬರ್ 2 ಪೆಡರರ್ ಮೊಂಟೆ ಕಾರ್ಲೊ ಟೂರ್ನಿಯಿಂದ ಹೊರಗುಳಿಯಲಿದ್ದು, ಕೇವಲ ರೋಮ್ ಮತ್ತು ಮ್ಯಾಡ್ರಿಡ್‌ನಲ್ಲಿ ನಡೆಯಲಿರುವ ಕ್ಲೇ ಕೋರ್ಟ್ ವಾರ್ಮ್-ಅಪ್‌ನಲ್ಲಿ ಆಡಲು ಯೋಜಿಸಿದ್ದಾರೆ.
ಪೆಡರರ್ 2008ರಲ್ಲಿ ಪ್ರೆಂಚ್ ಒಪನ್‌ಗೆ ತೆರಳುವ ಮುನ್ನ ಎಸ್ಟೊರಿಲ್, ಮೊಂಟೆ ಕಾರ್ಲೊ, ರೋಮ್ ಮತ್ತು ಹ್ಯಾಂಬರ್ಗ್‌ನಲ್ಲಿ ನಾಲ್ಕು ಕ್ಲೇ ಕೋರ್ಟ್ ಟೂರ್ನಿಯಲ್ಲಿ ಆಡಿದ್ದರು. 2008 ಋತು ತನಗೆ ತೃಪ್ತಿ ತಂದಿದ್ದು, ಉಲ್ಲಾಸಮಯ ವರ್ಷಕ್ಕಾಗಿ ತಾನು ಎದುರು ನೋಡುತ್ತಿದ್ದೇನೆ ಎಂದು ಪೆಡರರ್ ತಮ್ಮ ವೆಬ್‌ಸೈಟಿನಲ್ಲಿ ಹೇಳಿದ್ದಾರೆ.
ನವೋಕ್ ಡ್ಜೊಕೊವಿಕ್ ವಿರುದ್ಧ 2008ರ ಆಸ್ಟ್ರೇಲಿಯಾ ಒಪನ್ ಪ್ರಶಸ್ತಿಯನ್ನು ಕಳೆದುಕೊಂಡ ಪೆಡರರ್ ದೋಹಾದಲ್ಲಿ ತಮ್ಮ ಹೊಸ ವರ್ಷವನ್ನು ಆರಂಭಿಸಲಿದ್ದಾರೆ. ನಂತರ ಅಬು ದಬಿ ಹಾಗೂ ಮೆಲ್ಬೋರ್ನ್‌ನ ಕೂಯೋಂಗ್‌ನಲ್ಲಿ ಪ್ರದರ್ಶನಾ ಟೂರ್ನಿಯನ್ನು ಆಡಲಿದ್ದಾರೆ.
ಇದೇ ವೇಳೆ ಅವರು ಮಾರ್ಚ್‌ನಲ್ಲಿ ನಡೆಯಲಿರುವ ಅಮೆರಿಕ ವಿರುದ್ಧದ ಡೇವಿಸ್ ಕಪ್ ಮೊದಲ ಸುತ್ತಿನ ಪಂದ್ಯದಲ್ಲಿ ಸ್ವಿಜರ್ಲೆಂಡ್ ಪರ ಆಡಲು ಯೋಜಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|