ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಮೋಹನ್ ಬಗಾನ್ ಗ್ರೌಂಡ್: ಮರಡೋನಾರಿಂದ ಕಾರ್ಯಾಗಾರ
ಕೋಲ್ಕತಾ, ಗುರುವಾರ, 4 ಡಿಸೆಂಬರ್ 2008   ( 10:48 IST )
ಅರ್ಜೆಂಟೀನಾದ ಫುಟ್‌ಬಾಲ್ ದಿಗ್ಗಜ ಡಿಯೊಗೊ ಮರಡೋನಾ ಅವರು ಭಾನುವಾರದಂದು ಮೋಹನ್ ಬಗಾನ್ ಮೈದಾನದಲ್ಲಿ ನಡೆಯಲಿರುವ ಕಾರ್ಯಾಗಾರದ ವೇಳೆ ಮೋಹನ್ ಬಗಾನ್ ಮತ್ತು ಭೋವನಿಪೊರ್‌ನ 12 ವರ್ಷ ಕೆಳಗಿನ ಆಟಗಾರರಿಗೆ ಕೆಲ ಸಲಹೆಗಳನ್ನು ನೀಡಲಿದ್ದಾರೆ.

ಏಷಿಯಾದ ಅತ್ಯಂತ ಹಳೆಯ ಕ್ಲಬ್ ಎಂಬ ಹೆಸರು ಪಡೆದಿರುವ ಮೋಹನ್ ಬಗಾನ್‌‌ಗಾಗಿನ ತಮ್ಮ ನಿಗದಿತ ಭೇಟಿ ವೇಳೆ ಸಬ್-ಜ್ಯೂನಿಯರ್ ಆಟಗಾರರು 1986 ವಿಶ್ವಕಪ್ ಹಿರೋ ಜತೆ ಪರಸ್ಪರ ಮುಖಾಮುಖಿಯಾಗುವ ಅವಕಾಶವನ್ನು ಪಡೆಯಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಫುಟ್‌ಬಾಲ್ ಕಾರ್ಯಾಗಾರ ನಡೆಯಲಿದೆ. ವೇಳಾಪಟ್ಟಿಯಂತೆ ಮರಡೋನಾ ಕ್ಲಬ್ ಗ್ರೌಂಡಿನಲ್ಲಿ 45 ನಿಮಿಷ ಕಾಲ ವ್ಯಯಿಸಲಿದ್ದಾರೆ. ಒಂದು ವೇಳೆ ಅವರು ಬಯಸಿದರೆ ಹೆಚ್ಚಿನ ಕಾಲ ಅವರು ಅಲ್ಲಿ ತಂಗಬಹುದಾಗಿದೆ ಎಂದು ಸೆಲೆಬ್ರೆಟಿ ನಿರ್ವಹಣಾ ಸಮೂಹ (ಸಿಎಂಜಿ)ಯ ಕಾರ್ಯಕಾರಿ ನಿರ್ದೇಶಕ ಭಾಸ್ವಾರ್ ಗೋಸ್ವಾಮಿ ತಿಳಿಸಿದ್ದಾರೆ.

ತಮ್ಮ ಎರಡು ದಿನಗಳ ಭಾರತ ಭೇಟಿ ವೇಳೆ ಫುಟ್‌ಬಾಲ್ ಕಾರ್ಯಾಗಾರ ನಡೆಸುವಾಗಿನ ವಿಚಾರ ಸ್ವತಃ ಮರಡೋನಾರದ್ದೇ ಆಗಿತ್ತು ಎಂಬುದನ್ನು ಗೋಸ್ವಾಮಿ ಬಹಿರಂಗ ಪಡಿಸಿದ್ದಾರೆ.

ಪ್ರವಾಸ ಸ್ಥಳ ಅಖೈರುಗೊಂಡ ಸಂದರ್ಭ ಮರಡೋನಾ ಯುವ ಆಟಗಾರರ ಜತೆ ತುಸು ಕಾಲ ವ್ಯಯಿಸಲು ಫುಟ್‌ಬಾಲ್ ಕಾರ್ಯಾಗಾರಕ್ಕಾಗಿ ವೇಳಾಪಟ್ಟಿಯನ್ನು ಮೀಸಲಿಡಲು ಇಚ್ಚಿಸಿದ್ದರು. ಯುವ ಆಟಗಾರರಿಗೆ ಕೆಲ ಸಲಹೆ ನೀಡುವ ವಿಚಾರ ಸ್ವತಃ ಮರಡೋನಾರವರದ್ದೇ ಆಗಿದೆ. ಒಂದು ವೇಳೆ ಅವರು ಬಯಸಿದರೆ, ಅವರು ತಮ್ಮ ಕೆಲ ಪರಿಣತಿಯನ್ನೂ ಪ್ರದರ್ಶಿಸಬಹುದು ಎಂದು ಗೋಸ್ವಾಮಿ ಹೇಳಿದ್ದಾರೆ.

ಕ್ಲಬ್ ಗ್ರೌಂಡ್‌ನಲ್ಲಿ ನಡೆಯಲಿರುವ ಫುಟ್‌ಬಾಲ್ ಕಾರ್ಯಾಗಾರದಲ್ಲಿ 14,000 ಪ್ರೇಕ್ಷಕರು ಪಾಲ್ಗೊಳ್ಳುವ ಸಾಧ್ಯತೆ ಇದೆ ಮತ್ತು ಶುಕ್ರವಾರದಿಂದ 100 ರೂಪಾಯಿ ಮೌಲ್ಯದ ಟಿಕೆಟುಗಳ ಮಾರಾಟ ಪ್ರಾರಂಭವಾಗಲಿದೆ. ಮರಡೋನಾರ ಮೋಹನ್ ಬಗಾನ್ ಭೇಟಿಯಿಂದ ಉಲ್ಲಾಸಿತಗೊಂಡಿರುವ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಅಂಜನ್ ಮಿತ್ರಾ, ಇದರಿಂದ ತಮ್ಮೆಲ್ಲರ ಕನಸು ನನಸಾಗಲಿದೆ. ಮರಡೋನಾ ಕ್ಲಬ್‌ನಲ್ಲಿ 45 ನಿಮಿಷಗಳು ವ್ಯಯಿಸುವುದೇ ಒಂದು ದೊಡ್ಡ ವಿಷಯವಾಗಿದೆ ಎಂದು ಅವರು ಹೇಳಿದರು.

ಮರಡೋನಾ ಡಿಸೆಂಬರ್ 5ರಂದು ಇಲ್ಲಿಗೆ ಆಗಮಿಸಲಿದ್ದಾರೆ. ಮರುದಿನ ಬೆಳಗ್ಗೆ 10 ಗಂಟೆಗೆ ಮರಡೋನಾ ಕೋಲ್ಕತಾ ಸನಿಹದ ಮಹೆಶ್ಟಾಲಾದಲ್ಲಿ ಭಾರತೀಯ ಫುಟ್‌ಬಾಲ್ ಶಾಲೆಗೆ ಅಡಿಗಲ್ಲು ಹಾಕಲಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಾಡಿಕ್ ಜತೆ ಸೋಮ್ದೇವ್ ತರಬೇತಿ
ವಿಶ್ವಕಪ್ ಮೇಲಿನ ಅನುಮಾನ ನಿವಾರಿಸಿದ ಐಸಿಸಿ
ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯವಹಿಸುವುದು: ಸಿಜಿಎಫ್
'ಪಾಂಟಿಂಗ್ ಗಾಯ ವೃತ್ತಿಜೀವನ ಘಾತಕವಲ್ಲ'
ತನ್ವೀರ್ ಮೇಲೆ ಪಿಸಿಬಿ ಗರಂ, ಶಿಸ್ತು ಕ್ರಮ ಸಾಧ್ಯತೆ
ಕ್ರಿಕೆಟ್ ಪ್ರಕ್ಷುಬ್ಧತೆಯನ್ನು ಸೌಮ್ಯಗೊಳಿಸುವುದು: ಮಲಿಕ್
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ರಾಜ್ಯದ ಎಂಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...