|
| ವಿಶ್ವಕಪ್ ಮೇಲಿನ ಅನುಮಾನ ನಿವಾರಿಸಿದ ಐಸಿಸಿ |
| ನವದೆಹಲಿ, ಬುಧವಾರ, 3 ಡಿಸೆಂಬರ್ 2008 ( 16:57 IST ) | |
ಕಳೆದ ವಾರದ ಮುಂಬೈ ಉಗ್ರರ ದಾಳಿಯಿಂದಾಗಿ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಉಪಖಂಡ 2011ರ ವಿಶ್ವ ಕಪ್‌ನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬಾಗಿನ ವರದಿಗಳನ್ನು ಐಸಿಸಿ ತಳ್ಳಿ ಹಾಕಿದೆ.
ಇದೊಂದು ಮಾಧ್ಯಮ ಕಪೋಕಲ್ಪಿತವಾಗಿದ್ದು, ಅಂತಹ ವರದಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ವಕ್ತಾರ ತಿಳಿಸಿದ್ದಾರೆ. 2011ರ ವಿಶ್ವ ಕಪ್‌ನ್ನು ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಜಂಟಿಯಾಗಿ ಆಯೋಜಿಸುತ್ತಿದೆ.
ಪಾಕಿಸ್ತಾನ, ಭಾರತ ಮತ್ತು ನ್ಯೂಜಿಲ್ಯಾಂಡಿನಲ್ಲಿನ ಹಿರಿಯ ಕ್ರಿಕೆಟ್ ಅಧಿಕಾರಿಗಳೂ ಇಂತಹ ವರದಿ ಅಪಕ್ವವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ವಕ್ತಾರ ತಿಳಿದ್ದಾರೆ.
ಟೂರ್ನಮೆಂಟಿಗೆ ಇನ್ನೂ 2 ವರೆ ವರ್ಷ ಉಳಿದಿದ್ದು, ಅದರ ಬಗ್ಗೆ ಈಗ ಯೋಚಿಸುವ ಸಮಯವೂ ಅಲ್ಲ. ತಾವು ಈ ಅಭೂತಪೂರ್ವ ಟೂರ್ನಮೆಂಟ್ ನಡೆಯುವ ಬಗ್ಗೆ ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಖಂಡಿತವಾಗಿಯೂ ಸುರಕ್ಷತೆ ಮತ್ತು ಭದ್ರತೆ ಅತಿ ಮುಖ್ಯ ವಿಷಯವಾಗಿದ್ದು, ಇದು ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಸಂಬಂಧಿಸಿದ ವಿಷಯವಾಗಿದೆ ಎಂದು ಅವರು ವಿವರಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|