ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯವಹಿಸುವುದು: ಸಿಜಿಎಫ್
ನವದೆಹಲಿ , ಬುಧವಾರ, 3 ಡಿಸೆಂಬರ್ 2008   ( 13:50 IST )
2010ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತ ವಹಿಸಲಿದೆ ಎಂಬುದನ್ನು ದೃಢಪಡಿಸಿರುವ ಕಾಮನ್‌ವೆಲ್ಟ್ ಗೇಮ್ಸ್ ಒಕ್ಕೂಟ, ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಇದಕ್ಕಾಗಿ ಪರ್ಯಾಯ ಸ್ಥಳವೊಂದನ್ನು ಪರಿಗಣಿಸಲಾಗುತ್ತಿದೆ ಎಂಬಾಗಿನ ವದಂತಿಗಳನ್ನು ತಳ್ಳಿ ಹಾಕಿದೆ.

ಸಿಜಿಎಫ್ ಅಧ್ಯಕ್ಷ ಮೈಕೆಲ್ ಪೆನ್ನೆಲ್ ತಮ್ಮ ಹೇಳಿಕೆಯಲ್ಲಿ, ಮುಂಬೈ ದಾಳಿಯಲ್ಲಿ ಮಡಿದವರಿಗೆ ತಮ್ಮ ಸಹಾನುಭೂತಿ ಸಲ್ಲಿಸಿದ್ದು, ಒಕ್ಕೂಟ ಪರ್ಯಾಯ ಸ್ಥಳದತ್ತ ಯೋಚಿಸುತ್ತಿದೆ ಎಂಬಾಗಿನ ಮಾಧ್ಯಮ ವರದಿಯನ್ನು ತಳ್ಳಿ ಹಾಕಿದ್ದಾರೆ.

ಮಾಧ್ಯಮದಲ್ಲಿ ವರದಿಯಾದಂತೆ ದಿಲ್ಲಿಯಿಂದ ಈ ಕ್ರೀಡಾಕೂಟವನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಯಾವುದೇ ಹಂತದಲ್ಲೂ ಚರ್ಚೆಯಾಗಿಲ್ಲ ಎಂದು ಪೆನ್ನೆಲ್ ತಿಳಿಸಿದ್ದಾರೆ. ಮುಂಬೈಯಲ್ಲಿನ ಉಗ್ರರ ವಿವೇಚನಾರಹಿತ ಹಾಗೂ ಹೇಯ ಕೃತ್ಯ ತಮ್ಮನ್ನೆಲ್ಲಾ ಆಘಾತಕ್ಕೊಳಪಡಿಸಿದೆ ಮತ್ತು ಭಾರತದಲ್ಲಿನ ತಮ್ಮ ಸ್ನೇಹಿತರು ಮತ್ತು ಅವರ ಕುಟುಂಬದ ಪರ ತಮ್ಮ ಸಹಾನುಭೂತಿ ಇದೆ ಎಂದು ಹೇಳಿದ್ದಾರೆ.

ಈ ಕ್ರೀಡಾಕೂಡ ಎಲ್ಲೆಲ್ಲಾ ನಡೆಯುತ್ತದೆಯೋ ಅಲ್ಲೆಲ್ಲಾ ಸಿಜಿಎಫ್ ನಿರಂತರವಾಗಿ ಭದ್ರತಾ ವ್ಯವಸ್ಥೆಯನ್ನು ಪರಿವೀಕ್ಷಿಸುತ್ತದೆ ಮತ್ತು ತಾವು ಅದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಕಾಮನ್‌ವೆಲ್ತ್‌ನ ಅಥ್ಲೆಟುಗಳು ಸುರಕ್ಷಿತ ಹಾಗೂ ಸುಭದ್ರ ವಾತಾವರಣದಲ್ಲಿ ಸ್ಪರ್ಧಿಸುವುದನ್ನು ಖಾತ್ರಿಗೊಳಿಸಲು ಒಕ್ಕೂಟ ಭಾರತ ಸರಕಾರದ ಅಧಿಕಾರಿಗಳು ಹಾಗೂ ಏಜೆನ್ಸಿಗಳು, ದಿಲ್ಲಿ ಸರಕಾರ ಮತ್ತು ಆಯೋಜನಾ ಸಮಿತಿ ಜತೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
'ಪಾಂಟಿಂಗ್ ಗಾಯ ವೃತ್ತಿಜೀವನ ಘಾತಕವಲ್ಲ'
ತನ್ವೀರ್ ಮೇಲೆ ಪಿಸಿಬಿ ಗರಂ, ಶಿಸ್ತು ಕ್ರಮ ಸಾಧ್ಯತೆ
ಕ್ರಿಕೆಟ್ ಪ್ರಕ್ಷುಬ್ಧತೆಯನ್ನು ಸೌಮ್ಯಗೊಳಿಸುವುದು: ಮಲಿಕ್
ಭದ್ರತಾ ಪರಿಶೀಲನೆ: ಚೆನ್ನೈಗೆ ಆಗಮಿಸಿದ ಡಿಕ್ಕಸನ್
ಏಕದಿನ ರ‌್ಯಾಂಕಿಂಗ್: ಧೋನಿ ಅಗ್ರಗಣ್ಯ
ಪೆಡರರ್ ತನ್ನ ದಾಖಲೆ ಮುರಿಯಬಲ್ಲರು: ಸ್ಯಾಂಪ್ರಸ್
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...