|
| 'ಪಾಂಟಿಂಗ್ ಗಾಯ ವೃತ್ತಿಜೀವನ ಘಾತಕವಲ್ಲ' |
| ಮೆಲ್ಬೋರ್ನ್, ಬುಧವಾರ, 3 ಡಿಸೆಂಬರ್ 2008 ( 13:31 IST ) | |
ಅಭ್ಯಾಸ ಪಂದ್ಯದ ವೇಳೆ ಉಂಟಾದ ಮಣಿಕಟ್ಟು ಗಾಯ ರಿಕಿ ಪಾಂಟಿಂಗ್‌ರ ವೃತ್ತಿಜೀವನಕ್ಕೆ ಸಂಚಕಾರ ತುರುಬಲ್ಲುದಾಗಿನ ಆತಂಕಗಳಿಗೆ ಆಸ್ಟ್ರೇಲಿಯಾದ ದೈಹಿಕ ತಜ್ಞ ಅಲೆಕ್ಸ್ ಕೌಂಟೌರಿಸ್ ಪೂರ್ಣವಿರಾಮ ಹಾಕಿದ್ದಾರೆ.
ಇದು ಗಂಭೀರ ಸ್ವರೂಪದ ಗಾಯವಲ್ಲ ಎಂದು ಹೇಳಿರುವ ಕೌಂಟೌರಿಸ್, ಈ ವಿಷಯವನ್ನು ಉತ್ಪೇಕ್ಷಿಸಲಾಗಿದೆ ಎಂಬುದು ತನ್ನ ಅನಿಸಿಕೆ ಎಂದು ತಿಳಿಸಿದ್ದಾರೆ.
ಅವರು ಎಲ್ಲಾ ಪಂದ್ಯವನ್ನು ಆಡಿದ್ದು, ಯಾವುದೇ ಒಂದು ತರಬೇತಿ ಸೆಶನನ್ನು ತಪ್ಪಿಸಿಕೊಂಡಿಲ್ಲ. ಮಾಧ್ಯಮದವರಿಗೆ ಅವರ ಪ್ರದರ್ಶನದಲ್ಲಿ ಯಾವುದಾದರು ವ್ಯತ್ಯಾಸ ಕಂಡಿದೆಯೋ ಎಂಬುದು ತನಗೆ ತಿಳಿದಿಲ್ಲ, ಆದರೆ ಅವರು ಉತ್ತಮವಾಗಿ ಆಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಗಾಯದ ಕಾರಣ ಪಾಂಟಿಂಗ್ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯನ್ನೂ ಕೌಂಟೌರಿಸ್ ತಳ್ಳಿ ಹಾಕಿದ್ದಾರೆ. ಅವರು ತಮ್ಮ ಮಣಿಕಟ್ಟಿನಲ್ಲಿ ತುಸು ನೋವು ಹೊಂದಿದ್ದಾರೆ. ಅದರಿಂದ ಅವರು ಯಾವುದೇ ಪಂದ್ಯದಿಂದ ಹೊರಗುಳಿಯುವ ಅಗತ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|