|
| ಕಿವೀಸ್‌ನ ಕಿವಿ ಹಿಂಡಿದ ಆಸಿಸ್‌ಗೆ ಸರಣಿ ಗೆಲುವು |
| ಅಡಿಲೇಡ್, ಮಂಗಳವಾರ, 2 ಡಿಸೆಂಬರ್ 2008 ( 11:06 IST ) | |
ವೇಗಿ ಬ್ರೆಟ್ ಲೀಯವರ ಮಾರಕ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 62 ರನ್ನುಗಳ ಇನ್ನಿಂಗ್ಸ್ ಗೆಲುವು ಪಡೆದಿದ್ದು, 2-0ರಲ್ಲಿ ಸರಣಿಯನ್ನು ತನ್ನದಾಗಿಸಿದೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಪೇರಿಸಿದ 535 ರನ್ನುಗಳ ಬೃಹದಾಕಾರದ ಮೊತ್ತದ ಪ್ರತಿಯಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್ನು ಕಲೆ ಹಾಕಿ ಪಾಲೋ-ಆನ್ ಪಡೆದ ನ್ಯೂಜಿಲ್ಯಾಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 203ಕ್ಕೆ ಪೂರ್ಣ ಕುಸಿತ ಕಂಡು ಹೀನಾಯ ಸೋಲು ಒಪ್ಪಿಕೊಂಡಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ ಪರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕುಲ್ಲಮ್ (ಅಜೇಯ 84) ಮಾತ್ರ ಪ್ರತಿರೋಧ ತೋರಿದ್ದು ಬಿಟ್ಟರೆ, ಇತರ ಯಾವುದೇ ಬ್ಯಾಟ್ಸ್‌ಮನ್‌ಗಳು ಬ್ರೆಟ್ ಲೀ ಬೌಲಿಗೆ ನೆಲೆ ನಿಲ್ಲಲು ಸಾಧ್ಯವಾಗಲಿಲ್ಲ.
ಬ್ರಾಡ್ ಹೆಡ್ಡಿನ್‌ರನ್ನು ಪಂದ್ಯ ಪುರುಷರನ್ನಾಗಿ ಗೌರವಿಸಲಾದರೆ, ಉಪನಾಯಕ ಮೈಕೆಲ್ ಕ್ಲಾರ್ಕ್‌ರನ್ನು ಸರಣಿ ಪುರುಷರನ್ನಾಗಿ ಗೌರವಿಸಲಾಯಿತು.
ಭಾರತ ಪ್ರವಾಸದಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದ ಬ್ರೇಟ್ ಲೀ, ಇಲ್ಲಿ ವಿನಾಶಕಾರಿ ಬೌಲಿಂಗ್ ಪ್ರದರ್ಶ ನೀಡಿ ಈ ಪಂದ್ಯದಲ್ಲಿ ಒಟ್ಟು 9 ವಿಕೆಟುಗಳನ್ನು ಕಿತ್ತರು. ಬ್ರೆಟ್ ಲೀ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಿತ್ತರೆ, ಮಿಚೆಲ್ ಜಾನ್ಸನ್ ಮೂರು ವಿಕೆಟ್ ಕಬಳಿಸಿದರು.
ವಿಕೆಟ್ ನಷ್ಟವಿಲ್ಲದೆ 35 ರನ್ನುಗಳಿಂದ ನಾಲ್ಕನೇ ದಿನದ ಆಟ ಪ್ರಾರಂಭಿಸಿದ ಪ್ರವಾಸಿ ನ್ಯೂಜಿಲ್ಯಾಂಡ್ ತಂಡ, ಬ್ರೇಟ್ ಲೀಯವರ ಮಾರಕ ದಾಳಿ (5-105)ಗೆ ತನ್ನ ಅಗ್ರ ಕ್ರಮಾಂಕವನ್ನು ಕಳೆದುಕೊಂಡಿತು. ಕಿವೀಸ್ 84 ರನ್ನು ಕಲೆ ಹಾಕುವಷ್ಟರಲ್ಲೇ ತನ್ನ 6 ವಿಕೆಟ್ ಕಳೆದು ಕೊಂಡು ಸೋಲಿನ ದವಡೆಗೆ ಬಿದ್ದಿತ್ತು. ಇದರಲ್ಲಿ ಬ್ರೇಟ್ ಲೀ ನಾಲ್ಕು ವಿಕೆಟ್ ಕಿತ್ತಿದ್ದರು.
ಕಿವೀಸ್ ಪರ ಮೆಕ್ ಕುಲ್ಲಮ್ ಮಾತ್ರ ಆಕ್ರಮಣಕಾರಿ ಆಟವಾಡಿ 134 ಬೌಲುಗಳಲ್ಲಿ ಅಜೇಯ 84 ರನ್ನುಗಳನ್ನು ಪೇರಿಸಿದರು. ಇವರ ಈ ಆಟದಲ್ಲಿ 14 ಬೌಂಡರಿ ಹಾಗೂ ಎರಡು ಸಿಕ್ಸರ್ ಒಳಗೊಂಡಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|