|
| ಟೆಸ್ಟ್ ರ‌್ಯಾಂಕಿಂಗ್: ಭಾರತವನ್ನು ಹಿಂದಿಕ್ಕಿದ ದ.ಆಫ್ರಿಕಾ |
| ದುಬೈ, ಮಂಗಳವಾರ, 2 ಡಿಸೆಂಬರ್ 2008 ( 10:47 IST ) | |
ಬಾಂಗ್ಲಾದೇಶದ ವಿರುದ್ಧದ ಭಾರೀ ಎರಡು ಟೆಸ್ಟ್ ಗೆಲುವಿನಿಂದಾಗಿ ದಕ್ಷಿಣ ಆಫ್ರಿಕಾ ನೂತನ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಭಾರತವನ್ನು ಹಿಂದಿಕ್ಕಿ, ಎರಡನೇ ಸ್ಥಾನವನ್ನು ಮರಳಿ ಪಡೆದಿದೆ.
ಸರಣಿ ಪ್ರಾರಂಭವಾಗುವ ಮುನ್ನ ಕೇವಲ ಲವಲೇಶದಿಂದ ಹಿಂದೆ ಇದ್ದ ದ.ಆಫ್ರಿಕಾ ಯಾವತ್ತೂ ಎರಡನೇ ಸ್ಥಾನವನ್ನು ಮರಳಿ ಪಡೆಯುವ ಅವಕಾಶವನ್ನು ಹೊಂದಿತ್ತು. ಭಾರತ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯ ಸರಣಿಯನ್ನು 2-0ರಲ್ಲಿ ಗೆದ್ದುಕೊಂಡು, ಎರಡನೇ ಸ್ಥಾನ ಪಡೆದಿತ್ತು.
ಒಂದು ವೇಳೆ ಭಾರತ ಮುಂಬರುವ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿದರೆ, ತನ್ನ ಕಳೆದುಹೋದ ಎರಡನೇ ಸ್ಥಾನದ ಮೇಲೆ ಮತ್ತೆ ಪ್ರಭುತ್ವ ಸಾಧಿಸಬಹುದಾಗಿದೆ.
ಇದೇ ವೇಳೆ ಆಸ್ಟ್ರೇಲಿಯಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ 2-0ರಲ್ಲಿ ಸರಣಿ ಗೆಲ್ಲುವ ಮೂಲಕ ತನ್ನ ಅಗ್ರ ಸ್ಥಾನವನ್ನು ಭದ್ರಹಗೊಳಿಸಿದೆ. ದಕ್ಷಿಣ ಆಫ್ರಿಕಾ ಆಸಿಸ್ ತಂಡಗಿಂತ 13 ಸ್ಥಾನಗಳಷ್ಟು ದೂರ ಇದೆ.
ಈ ಕಡೆ ನ್ಯೂಜಿಲ್ಯಾಂಡ್ ವೆಸ್ಟಿಂಡೀಸ್‌ನಿಂದ ಕೆಳಗೆ 8ನೇ ಸ್ಥಾನಕ್ಕೆ ಜಾರಿದೆ. ಆಸಿಸ್ ವಿರುದ್ಧದ ಸರಣಿ ಪ್ರಾರಂಭವಾಗುವ ಮುನ್ನ ಕಿವೀಸ್ ವಿಂಡೀಸ್‌ಗಿಂತ ಕೇವಲ ಒಂದು ಅಂಕದಿಂದ ಮೇಲಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|