ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಮುಂಬೈ ದಾಳಿ ವೇಳೆ ನಿದ್ದೆ ಇರಲಿಲ್ಲ: ತೆಂಡುಲ್ಕರ್
ನವದೆಹಲಿ, ಮಂಗಳವಾರ, 2 ಡಿಸೆಂಬರ್ 2008   ( 10:34 IST )
ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಸಚಿನ್ ತೆಂಡುಲ್ಕರ್ ಅನೇಕ ಬೌಲರುಗಳ ನಿದ್ದೆಗೆಡಿಸಿರಬಹುದು ಆದರೆ, ಮುಂಬೈ ಉಗ್ರ ದಾಳಿಯಿಂದ ಅವರು ಎಷ್ಟು ತಲ್ಲಣಗೊಂಡಿದ್ದರೆಂದರೇ ಆ ದಿನ ರಾತ್ರಿ ಇಡೀ ಅವರಿಗೆ ನಿದ್ದೆ ಹತ್ತಿರಲಿಲ್ಲ.

ಇಂಗ್ಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯ ಮುಗಿದ ತತ್‌ಕ್ಷಣ ಮುಂಬೈಯಲ್ಲಿ ದಾಳಿ ನಡೆದಿರುವುದು ತಿಳಿದು ಬಂತು. ಅಲ್ಲಿಂದೀಚೆಗೆ ತನ್ನು ಮನಸ್ಸು ತಲ್ಲಣಗೊಂಡಿದೆ. ಆ ಭೀಕರ ರಕ್ತಪಾತದ ಚಿತ್ರಣವನ್ನು ತಾನು ಟಿವಿಯಲ್ಲಿ ನೋಡುತ್ತಿದ್ದೆ. ತನ್ನ ದೇಶದ ಜನರನ್ನು ಗುರಿಯಾಗಿಸುತ್ತಿರುವುದನ್ನು ನೋಡಿ ತನಗೆ ಬೇಸರವಾಯಿತು. ತಾನು ಸ್ತಬ್ಧಗೊಂಡಿದ್ದು, ಆ ಭಯಾನಕ ದೃಶ್ಯಗಳು ತನ್ನ ತಲೆಯಲ್ಲಿ ಸುಳಿದಾಡುತ್ತಿದೆ ಎಂದು ವಿವರಿಸಿದ್ದಾರೆ.

ಇದು ಕೇವಲ ಮುಂಬೈ ಮೇಲಿನ ದಾಳಿಯಲ್ಲ. ಇದು ಇಡೀ ಭಾರತದ ಮೇಲಿನ ದಾಳಿಯಾಗಿದೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

ಇದೇ ವೇಳೆ ಮುಂಬೈ ಜನರ ಜೀವ ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಭದ್ರತಾ ಸಿಬ್ಬಂದಿಗಳಿಗೆ ತೆಂಡುಲ್ಕರ್ ಧನ್ಯವಾದ ಸಲ್ಲಿಸಿದರು.

ತಾನು ಕೆಚ್ಚೆದೆಯ ಸೈನಿಕರು, ಎನ್ಎಸ್‌ಜಿ ಕಮಾಂಡೊ, ಮರೀನ್ ಕಮಾಂಡೊ, ಮುಂಬೈ ಪೊಲೀಸ್, ಅಗ್ನಿಶಾಮಕ ದಳ, ಬಾಧಿತ ಹೋಟೆಲ್‌ನ ಸಿಬ್ಬಂದಿಗಳು ಮತ್ತು ಸೇನಾ ಜವಾನರಿಗೆ ಧನ್ಯಾವಾದ ಸಲ್ಲಿಸುತ್ತೇನೆ ಮತ್ತು ಅವರಿಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಅವರು ಹೇಳಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎಸ್ಪನ್ಯೋಲ್‌ನಿಂದ ಕೋಚ್ ಮಾರ್ಕ್ಯುಜ್‌‌ ವಜಾ
ಅನುಮಾನಾಸ್ಪದ ಬೌಲಿಂಗ್: ಅಬ್ದುಲ್ ರಜಾಕ್‌ಗೆ ನಿಷೇಧ
ಇಸಿಬಿಯಿಂದ ಪರಿಹಾರ ಧನ: ಅಲ್ಲಗಳೆದ ಮೋದಿ
'ಭಾರತ ಪಾಕ್‌‌ನ '99ರ ನಿರ್ಭಯತೆಯನ್ನು ಪ್ರದರ್ಶಿಸಬೇಕು'
ಭಾರತೀಯ ಫುಟ್‌ಬಾಲ್ ಆವೇಗ ಪಡೆಯಲು ವಿಫಲ: ಭುಟಿಯಾ
ಉಗ್ರರ ದಾಳಿ: ಕ್ರಿಕೆಟ್ ವಿಶ್ವಕಪ್ ಮೇಲೆ ಕರಿ ಛಾಯೆ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...