|
|
ಅನುಮಾನಾಸ್ಪದ ಬೌಲಿಂಗ್: ಅಬ್ದುಲ್ ರಜಾಕ್‌ಗೆ ನಿಷೇಧ
|
| ಡಾಕಾ, ಸೋಮವಾರ, 1 ಡಿಸೆಂಬರ್ 2008 ( 16:15 IST ) | |
ಅಕ್ರಮ ಬೌಲಿಂಗ್ ಶೈಲಿ ಹೊಂದಿರುವ ಕಾರಣ ಬಾಂಗ್ಲದೇಶ ಸ್ಪಿನ್ನರ್ ಅಬ್ದುಲ್ ರಜಾಕ್‌ರನ್ನು ಬೌಲಿಂಗ್ ಮಾಡುವುದರಿಂದ ನಿಷೇಧಿಸಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧಿಕಾರಿ ತಿಳಿಸಿದ್ದಾರೆ.
ಅವರು ತಮ್ಮ ಬೌಲಿಂಗ್ ಶೈಲಿಯನ್ನು ಸರಿ ಪಡಿಸುವ ತನಕ ಈ ನಿಷೇಧ ಪರಿಣಾಮದಲ್ಲಿರುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ನವಂಬರ್ 17ರಂದು ಆಸ್ಟ್ರೇಲಿಯಾ ಕ್ರೀಡಾ ಸಂಸ್ಥೆ (ಎಐಎಸ್)ಯಲ್ಲಿ ಐಸಿಸಿಯ ಮಾನವ ಚಲನೆ ವಿಶೇಷಜ್ಞರ ಮಂಡಳಿ ಸದಸ್ಯರಾದ ಮಾರ್ಕ್ ಪೊರ್ಟುಸ ಅಬ್ದುಲ್ ರಜಾಕ್‌ರ ಬೌಲಿಂಗ್ ಶೈಲಿಯನ್ನು ಪರಾಮರ್ಶೆಗೊಳಪಡಿಸಿದ್ದರು.
ಅಕ್ಟೋಬರ್‌ನಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯದ ವೇಳೆ ಅಬ್ದುಲ್ ರಜಾಕ್ ಬೌಲಿಂಗ್ ಶೈಲಿ ಅನುಮಾನಾಸ್ಪದವಾಗಿ ಕಂಡುಬಂದಿರುವುದು ವರದಿಯಾಗಿತ್ತು. ವೇಗದ ಬೌಲಿಂಗ್ ಮಾಡುವಾಗ ಎಡಗೈ ಸ್ಪಿನ್ನರ್‌ನ ಶೈಲಿಯ ಕುರಿತಾಗಿ ಅನುಮಾನಗೊಂಡಿರುವ ಬಗ್ಗೆ ಅಂಪಾಯರ್ ಡರೆಲ್ ಹಾರ್ಪರ್ ಮತ್ತು ಅಸೋಕ ಡಿ ಸಿಲ್ವಾ ವರದಿ ಮಾಡಿದ್ದರು.
26 ವರ್ಷದ ರಜಾಕ್ 5 ಟೆಸ್ಟ್ ಪಂದ್ಯಗಳಲ್ಲಿ 7 ವಿಕೆಟ್ ಹಾಗೂ 81 ಏಕದಿನ ಪಂದ್ಯಗಳಲ್ಲಿ 111 ವಿಕೆಟನ್ನು ಕಿತ್ತಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|