ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಇಸಿಬಿಯಿಂದ ಪರಿಹಾರ ಧನ: ಅಲ್ಲಗಳೆದ ಮೋದಿ
ಲಂಡನ್, ಸೋಮವಾರ, 1 ಡಿಸೆಂಬರ್ 2008   ( 16:15 IST )
ಟೆಸ್ಟ್ ಸರಣಿಗಾಗಿ ಕೇವಿನ್ ಪೀಟರ್ಸನ್ ಮತ್ತು ಅವರ ಬಳಗ ಭಾರತಕ್ಕೆ ಮರಳುವ ಆಶಾವಾದ ವ್ಯಕ್ತಪಡಿಸಿರುವ ಬಿಸಿಸಿಐ ಉಪಾಧ್ಯಕ್ಷ ಲಲಿತ್ ಮೋದಿ, ಒಂದು ವೇಳೆ ಇಂಗ್ಲೆಂಡ್‌ ತಂಡ ಭಾರತಕ್ಕೆ ಮರಳದಿದ್ದರೆ ಬಿಸಿಸಿಐ ಇಸಿಬಿಯಿಂದ ಪರಿಹಾರ ಧನವನ್ನು ಕೋರುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಲಂಡನ್‌ನಲ್ಲಿ ಬಾಂಬ್ ಸ್ಫೋಟದ ಹೊರತಾಗಿಯೂ 2005ರಲ್ಲಿ ಆಷಸ್ ಸರಣಿ ನಡೆದ ಬಗ್ಗೆ ನೆನಪಿಸಿಕೊಂಡ ಮೋದಿ, ಇಂತಹ ಭಯೋತ್ಪಾದಕ ಘಟನೆಗಳು ತಮ್ಮ ಧೈರ್ಯ ಕುಂದಿಸಲು ಬಿಡಬಾರದು. ಈ ಪ್ರವಾಸ ನಡೆಯುವ ಬಗ್ಗೆ ತಾನು ಅಶಾವಾದದಿಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಇದು ಬಿಸಿಸಿಐ ಇಸಿಬಿ ಮತ್ತು ಆಟಗಾರರ ವಿರುದ್ಧವಾಗಿದೆ ಎಂದಲ್ಲ, ಅದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. 2005ರಲ್ಲಿ ಯುಕೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು, ಎರಡು ವಾರಗಳ ನಂತರ ಆಷಸ್ ಸರಣಿ ಪ್ರಾರಂಭಗೊಂಡಿತು ಎಂಬ ಮೋದಿ ಉಲ್ಲೇಖ ಡಿ ಟೈಮ್ಸ್‌ನಲ್ಲಿ ವರದಿಯಾಗಿದೆ.

ಪ್ರತಿಯೊಬ್ಬರು ವ್ಯಾವಹಾರಿಕವಾಗಿರುವ ಅಗತ್ಯವಿದೆ. ಒಂದು ವೇಳೆ ಭದ್ರತೆ ಸಾಧ್ಯವಾದರೆ ತಾವು ಮುಂದುವರಿಯಬೇಕು ಎಂದು ವಿವರಿಸಿದ್ದಾರೆ. ಇದು ಪರಿಹಾರ ಧನದ ವಿಷಯವಲ್ಲ. ಹಣಕಾಸು ವಿಷಯ ಇಲ್ಲಿ ಬರುವುದೇ ಇಲ್ಲ. ತಾವು ಯಾರನ್ನೂ ಒತ್ತಾಯ ಪಡಿಸುವುದಿಲ್ಲ ಮತ್ತು ಅದು ತಾವು ಕಾರ್ಯನಿರ್ವಹಿಸುವ ರೀತಿಯಲ್ಲ ಎಂದು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
'ಭಾರತ ಪಾಕ್‌‌ನ '99ರ ನಿರ್ಭಯತೆಯನ್ನು ಪ್ರದರ್ಶಿಸಬೇಕು'
ಭಾರತೀಯ ಫುಟ್‌ಬಾಲ್ ಆವೇಗ ಪಡೆಯಲು ವಿಫಲ: ಭುಟಿಯಾ
ಉಗ್ರರ ದಾಳಿ: ಕ್ರಿಕೆಟ್ ವಿಶ್ವಕಪ್ ಮೇಲೆ ಕರಿ ಛಾಯೆ
ಟೆಸ್ಟ್ ಸರಣಿ: ಭಾರತಕ್ಕೆ ಮರಳಲಿರುವ ಇಂಗ್ಲೆಂಡ್
ಬಿಟಿಎನ ಉಪಾಧ್ಯಕ್ಷರಾಗಿ ಪೇಸ್
ಭಾರತದ ಪಾಕ್ ಪ್ರವಾಸ ಇಲ್ಲ: ಮೂಲಗಳು
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...