ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
'ಭಾರತ ಪಾಕ್‌‌ನ '99ರ ನಿರ್ಭಯತೆಯನ್ನು ಪ್ರದರ್ಶಿಸಬೇಕು'
ಕರಾಚಿ, ಸೋಮವಾರ, 1 ಡಿಸೆಂಬರ್ 2008   ( 16:15 IST )
ಪಾಕಿಸ್ತಾನ ಕ್ರಿಕೆಟ್ ತಂಡ 1999ರಲ್ಲಿ ನಿರ್ಭಯವಾಗಿ ಭಾರತ ಪ್ರವಾಸ ಕೈಗೊಳ್ಳಲು ಸಾಧ್ಯವಾಗಿದ್ದರೆ, ಮಹೇಂದ್ರ ಸಿಂಗ್ ಧೋನಿ ಪಡೆಯೂ ಅದನ್ನೇ ಅನುಕರಿಸಬೇಕು ಎಂದು ಮಾಜಿ ಪಿಸಿಬಿ ಮುಖ್ಯಸ್ಥ ಶಹರ್ಯಾರ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.

ತಾವು 1999ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ತಮಗೆ ಬೆದರಿಕೆ ಇತ್ತು ಆದರೆ ಪ್ರವಾಸ ಯೋಜನೆಯಂತೆಯೇ ನಡೆಯಿತು ಮತ್ತು ಇದು ಎರಡು ದೇಶಗಳ ನಡುವಿನ ಪ್ರಕ್ಷುಬ್ದ ವಾತಾವರಣ ತಿಳಿಗೊಳಿಸಲು ನೆರವು ನೀಡಿತು ಎಂದು ಶಹರ್ಯಾರ್ ಖಾನ್ ತಿಳಿಸಿದ್ದಾರೆ.

ಮುಂಬರುವ ಸರಣಿಯನ್ನು ಮುಂದೂಡುವುದರಿಂದ ಆಥವಾ ರದ್ಧು ಪಡಿಸುವುದರಿಂದ ಪರಿಸ್ಥಿತಿಗೆ ಯಾವುದೇ ರೀತಿಯಲ್ಲೂ ನೆರವಾಗುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

1999ರ ಭಾರತಕ್ಕಾಗಿನ ಪ್ರವಾಸದಲ್ಲಿ ತಂಡದ ವ್ಯವಸ್ಥಾಪಕರಾಗಿದ್ದರ ಜತೆಗೆ, ಪಾಕ್‌ಗಾಗಿನ ಭಾರತ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದ ಶಹರ್ಯಾರ್, ಕ್ರಿಕೆಟ್ ಎರಡೂ ದೇಶಗಳನ್ನು ಒಟ್ಟಾಗಿಸುವ ಶಕ್ತಿಯಾಗಿದೆ ಎಂದು ಹೇಳಿದ್ದಾರೆ.

ಕ್ರಿಕೆಟ್ ಈ ಮುಂಚೆಯೂ ಎರಡೂ ದೇಶಗಳ ನಡುವಿನ ಭಿನ್ನತೆಯನ್ನು ಕಡಮೆ ಮಾಡಲು ಸಹಕರಿಸಿತ್ತು. ಇದು ಮತ್ತೆ ಸಕಾರಾತ್ಮಕ ಪಾತ್ರ ವಹಿಸುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ ವರ್ಷ ಆದಿಯಲ್ಲಿ ನಿಗದಿಯಾದಂತೆ ಭಾರತ ತಂಡ ಪಾಕ್ ಪ್ರವಾಸ ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಎರಡೂ ದೇಶಗಳಲ್ಲಿ ಕ್ರಿಕೆಟ್ ಒಂದು ದೊಡ್ಡ ವಿಷಯವಾಗಿದೆ. ತನ್ನ ಪ್ರಕಾರ ಎರಡೂ ಕ್ರಿಕೆಟ್ ಮಂಡಳಿಗಳು ಒಟ್ಟಾಗಿ ಕಾರ್ಯನಿರ್ವಹಿಸಿ, ಮುಂಬರುವ ಸರಣಿಯನ್ನು ಸಾಧ್ಯಗೊಳಿಸಬೇಕು ಎಂದು ಕರೆ ನೀಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭಾರತೀಯ ಫುಟ್‌ಬಾಲ್ ಆವೇಗ ಪಡೆಯಲು ವಿಫಲ: ಭುಟಿಯಾ
ಉಗ್ರರ ದಾಳಿ: ಕ್ರಿಕೆಟ್ ವಿಶ್ವಕಪ್ ಮೇಲೆ ಕರಿ ಛಾಯೆ
ಟೆಸ್ಟ್ ಸರಣಿ: ಭಾರತಕ್ಕೆ ಮರಳಲಿರುವ ಇಂಗ್ಲೆಂಡ್
ಬಿಟಿಎನ ಉಪಾಧ್ಯಕ್ಷರಾಗಿ ಪೇಸ್
ಭಾರತದ ಪಾಕ್ ಪ್ರವಾಸ ಇಲ್ಲ: ಮೂಲಗಳು
ಜಾರ್ಖಂಡ್: ಪೆಬ್ರವರಿಯಲ್ಲಿ ರಾಷ್ಟ್ರೀಯ ಗೇಮ್ಸ್
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...