ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಉಗ್ರರ ದಾಳಿ: ಕ್ರಿಕೆಟ್ ವಿಶ್ವಕಪ್ ಮೇಲೆ ಕರಿ ಛಾಯೆ
ಮೆಲ್ಬೋರ್ನ್ , ಸೋಮವಾರ, 1 ಡಿಸೆಂಬರ್ 2008   ( 11:07 IST )
ಉಪಖಂಡದಲ್ಲಿನ ನಿರಂತರ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಿಂದ ಜಂಟಿಯಾಗಿ ಆಯೋಜಿಸಲು ಉದ್ದೇಶಿಸಿರುವ 2011 ಕ್ರಿಕೆಟ್ ವಿಶ್ವಕಪ್‌ಗಾಗಿ ಐಸಿಸಿ ಪರ್ಯಾಯ ಸ್ಥಳವೊಂದರ ಬಗ್ಗೆ ಪರಿಗಣಿಸುತ್ತಿರುವುದರೊಂದಿಗೆ, ಈ ಮೆಗಾ ಟೂರ್ನಿ ಭಾರತ ಉಪಖಂಡದಲ್ಲಿ ನಡೆಯುವುದರ ಬಗ್ಗೆ ಅನುಮಾನಗಳು ಮೂಡಿವೆ.

ದಿ ಡೈಲಿ ಟೆಲಿಗ್ರಾಪ್‌ನಲ್ಲಿನ ವರದಿ ಪ್ರಕಾರ, ಐಸಿಸಿ ಮುಂದಿನ ವಾರ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ತನ್ನ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸುವ ನಿರೀಕ್ಷೆ ಇದೆ.

ಒಂದು ವೇಳೆ ಐಸಿಸಿ ವಿಶ್ವಕಪ್‌ನ್ನು ಸ್ಥಳಾಂತರಿಸಲು ನಿರ್ಧರಿಸಿದರೆ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಈ ಟೂರ್ನಿಯನ್ನು ಆಯೋಜಿಸುವಲ್ಲಿನ ಪ್ರಮುಖ ಸ್ಪರ್ಧಿಗಳಾಗಿದ್ದಾರೆ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯಕಾರಿಣಿ ಸೌದರ್ಲೇಂಡ್ ಈಗಾಗಲೇ ಐಸಿಸಿ ಸಭೆಯಲ್ಲಿ 2011 ವಿಶ್ವಕಪ್‌ಗೆ ಸಂಬಂಧಿಸಿದ ಸುರಕ್ಷತೆ ಹಾಗೂ ಭದ್ರತಾ ಅಂಶಗಳು ಚರ್ಚೆಗೆ ಬರುವುದು ಅನಿವಾರ್ಯ ಎಂಬುದಾಗಿ ಹೇಳುವುದರೊಂದಿಗೆ ಈ ನಿಟ್ಟಿನಲ್ಲಿನ ಚಿಂತನೆಗೆ ಮುನ್ನುಡಿ ಇಟ್ಟಿದ್ದಾರೆ.

ಮುಂಬೈ ಘಟನೆಯಿಂದ ಕ್ರಿಕೆಟ್ ವಿಶ್ವಕಪ್‌ಗಾಗಿನ ಯೋಜನೆಗಳು ಬದಲಾಗುವ ಸಾಧ್ಯತೆ ಇದೆ ಆದರೆ ಉಪಖಂಡದ ವಿವಿಧ ಭಾಗಗಳಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿಶ್ವಕಪ್ ಮತ್ತು ಇತರ ಟೂರ್ನಿಗಳು ಯೋಜನೆಯಂತೆಯೇ ನಡೆಯುವುದನ್ನು ಎಲ್ಲರೂ ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಟೆಸ್ಟ್ ಸರಣಿ: ಭಾರತಕ್ಕೆ ಮರಳಲಿರುವ ಇಂಗ್ಲೆಂಡ್
ಬಿಟಿಎನ ಉಪಾಧ್ಯಕ್ಷರಾಗಿ ಪೇಸ್
ಭಾರತದ ಪಾಕ್ ಪ್ರವಾಸ ಇಲ್ಲ: ಮೂಲಗಳು
ಜಾರ್ಖಂಡ್: ಪೆಬ್ರವರಿಯಲ್ಲಿ ರಾಷ್ಟ್ರೀಯ ಗೇಮ್ಸ್
ಪ್ಲಿಂಟಾಪ್, ಹರ್ಮಿಸನ್ ಭಾರತಕ್ಕೆ ಮರಳುವುದಿಲ್ಲ: ವರದಿ
ಸತತ 4ನೇ ಬಾರಿ ಮ್ಯಾರಿ ಕೋಮ್ ಮುಡಿಗೆ ಸ್ವರ್ಣ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...