|
| ಬಿಟಿಎನ ಉಪಾಧ್ಯಕ್ಷರಾಗಿ ಪೇಸ್ |
| ಕೋಲ್ಕತಾ, ಸೋಮವಾರ, 1 ಡಿಸೆಂಬರ್ 2008 ( 10:36 IST ) | |
ಭಾರತದ ಟೆನ್ನಿಸ್ ತಾರೆ ಲಿಯಾಂಡರ್ ಪೇಸ್‌ರನ್ನು ಬಂಗಾಳ ಟೆನ್ನಿಸ್ ಒಕ್ಕೂಟ (ಬಿಟಿಎ)ಯ 7 ಉಪಾಧ್ಯಕ್ಷರಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಲಾಗಿದೆ.
ಲಿಯಾಂಡರ್ ಪೇಸ್ ರಾಜ್ಯದಲ್ಲಿ ಟೆನ್ನಿಸ್ ಅಭಿವೃದ್ಧಿ ಪಡಿಸುವುದಕ್ಕಾಗಿ ಭಾರೀ ಉತ್ಸುಕತೆ ತೋರಿದ್ದು, ಈ ನಿಟ್ಟಿನಲ್ಲಿ ಅವರು ಒಮ್ಮತದ ಆಯ್ಕೆಯಾಗಿದ್ದಾರೆ ಎಂದು ಬಿಟಿಎ ಕಾರ್ಯದರ್ಶಿ ಹಿರೊನ್ಮೊಯ್ ಚಟರ್ಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕ್ರೀಡೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಪೇಸ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅವರು ವಿಭಿನ್ನ ವಿಚಾರಗಳನ್ನು ಹೊಂದಿದ್ದಾರೆ. ವಿಶ್ವ ದರ್ಜೆಯ ಆಟಗಾರರನ್ನು ಬೆಳೆಸುವ ತಮ್ಮ ಗುರಿಯತ್ತ ತಾವು ಒಟ್ಟಾಗಿ ಕಾರ್ಯನಿರ್ವಹಿಸಲಿದ್ದೇವೆ ಎಂದು ಚಟರ್ಜಿ ತಿಳಿಸಿದ್ದಾರೆ.
ತಮ್ಮ ಬಿಗಿ ವೇಳಾಪಟ್ಟಿಯ ಕಾರಣ ಪೇಸ್ ಯಾವ ರೀತಿ ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಲ್ಲರು ಎಂದು ಕೇಳಿದ ಪ್ರಶ್ನೆಗೆ ಚಟರ್ಜಿ, ಅವರು ಎಲ್ಲಾ ಸಮಯವೂ ಇಲ್ಲಿರಬೇಕೆಂಬುದನ್ನು ತಾವು ನಿರೀಕ್ಷಿಸುತ್ತಿಲ್ಲ. ಒಂದು ವೇಳೆ ಅತಿ ಪ್ರಮುಖ ಸಭೆ ಇದ್ದರೆ, ತಾವು ಬರುವುದಾಗಿ ಪೇಸ್ ತನಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|