|
| ಜಾರ್ಖಂಡ್: ಪೆಬ್ರವರಿಯಲ್ಲಿ ರಾಷ್ಟ್ರೀಯ ಗೇಮ್ಸ್ |
| ರಾಂಚಿ, ಭಾನುವಾರ, 30 ನವೆಂಬರ್ 2008 ( 14:10 IST ) | |
ರಾಷ್ಟ್ರೀಯ ಕ್ರೀಡಾಕೂಟವನ್ನು ಮತ್ತೆ ಮುಂದೂಡಲ್ಪಟ್ಟಿರುವುದಾಗಿ ಜಾರ್ಖಂಡ್ ಕ್ರೀಡಾ ಸಚಿವ ಬಂಧು ಟಿರ್ಕೆ ಘೋಷಿಸಿದ್ದು ಹೊಸ ವೇಳಪಟ್ಟಿಯಂತೆ ಈಗ ಕ್ರೀಡಾಕೂಟ ಪೆಬ್ರವರಿ 15 ರಿಂದ 28ರ ವರೆಗೆ ನಡೆಯಲಿದೆ.
ಕ್ರೀಡಾಕೂಟದ ಆಯೋಜನೆಗಾಗಿ ರಾಜ್ಯ ಸರಕಾರ ಕೇಂದ್ರ ಸರಕಾರದಿಂದ 10 ಬಿಲಿಯ ರೂಪಾಯಿ ಹಣಕಾಸು ನೆರವನ್ನು ಕೋರಲಿದೆ ಎಂದು ಟಿರ್ಕೆ ತಿಳಿಸಿದ್ದಾರೆ. ಜಾರ್ಖಂಡ್‌ಗೆ 2002ರಲ್ಲಿ 34ನೇ ರಾಷ್ಟ್ರೀಯ ಗೇಮ್ಸ್ ಆತಿಥ್ಯ ವಹಿಸುವ ಹಕ್ಕು ನೀಡಲಾಗಿತ್ತು ನಂತರ ಇದನ್ನು 2007ಕ್ಕೆ ನಿಗದಿ ಪಡಿಸಲಾಯಿತು.
ಡಿಸೆಂಬರ್ 1-13ರ ಕ್ರೀಡಾಕೂಟಕ್ಕಾಗಿ ಕ್ಲಪ್ತ ಸಮಯದಲ್ಲಿ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿ ಪಡಿಸುವಲ್ಲಿ ಜಾರ್ಖಂಡ್ ವಿಫಲರಾದ ಕಾರಣ ರಾಷ್ಟ್ರೀಯ ಗೇಮ್ಸ್ ಆಯೋಜನಾ ಸಮಿತಿ (ಎನ್‌ಜಿಒಸಿ) ಮನವಿ ಮೇರೆಗೆ ಭಾರತೀಯ ಒಲಿಂಪಿಕ್ ಒಕ್ಕೂಟ ಇದಕ್ಕೂ ಮುಂಚೆ ಈ ಗೇಮ್ಸನ್ನು ಮುಂದಕ್ಕೆ ಹಾಕಿತ್ತು.
ಅಗತ್ಯ ಮೂಲಭೂತ ಸೌಕರ್ಯ ಸಿದ್ಧವಾಗಿಲ್ಲದ ಕಾರಣ ರಾಷ್ಟ್ರೀಯ ಗೇಮ್ಸ್ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ. ಐಒಎ ದಿನಾಂಕ ಮುಂದೂಡುವ ಮನವಿಯನ್ನು ಸ್ವೀಕರಿಸಿದ್ದು, ಫೆಬ್ರವರಿಯಲ್ಲಿ ಕ್ರೀಡಾಕೂಟ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಆ ಹೊತ್ತಿಗೆ ಮೂಲಭೂತ ಸೌಕರ್ಯ ಸಿದ್ಧಗೊಳ್ಳುವುದು ಎಂದು ತಿಳಿಸಿದ್ದಾರೆ.
ಗೇಮ್ಸ್ ಆಯೋಜನೆಗೆ ಕೇಂದ್ರದಿಂದ 10 ಬಿಲಿಯ ರೂಪಾಯಿ ಕೋರಲು ಜಾರ್ಖಂಡ್ ಸರಕಾರ ಮತ್ತು ಎನ್‌ಜಿಒಸಿ ಒಪ್ಪಿಕೊಂಡಿದ್ದು, ರಾಜ್ಯ ಸರಕಾರದ ನಿಯೋಗ ಹಾಗೂ ಎನ್‌ಜಿಒಸಿ ಶೀಘ್ರದಲ್ಲೇ ಪ್ರಧಾನ ಮಂತ್ರಿಯನ್ನು ಭೇಟಿಯಾಗಲಿದೆ ಎಂದು ಟಿರ್ಕೆ ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|