|
| ದಾಖಲೆಗಳ ಸರದಾರ ಅನಿಲ್ ಕುಂಬ್ಳೆ ಯುಗಾಂತ್ಯ |
| ನವದೆಹಲಿ, ಸೋಮವಾರ, 3 ನವೆಂಬರ್ 2008 ( 11:50 IST ) | |
ದಿಲ್ಲಿ ಟೆಸ್ಟ್ ಬಳಿಕ ನಿನ್ನೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಗುಡ್ ಬಾಯ್ ಹೇಳಿದ ಭಾರತದ ಶ್ರೇಷ್ಠ ಸ್ಪಿನ್ನರ್ ಹಾಗೂ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ, ಭಾರತೀಯ ಕ್ರಿಕೆಟ್‌ನಲ್ಲಿ ಭರಿಸಲಾಗದ ಶೂನ್ಯವೊಂದನ್ನು ಸೃಷ್ಠಿಸಿ ಹೋಗಿದ್ದಾರೆ.
131 ಟೆಸ್ಟ್ ಹಾಗೂ 271 ಏಕದಿನ ಕ್ರಿಕೆಟ್‌ಗಳನ್ನೊಳಗೊಂಡ 18 ವರ್ಷಗಳ ಸುದೀರ್ಘ ವೃತ್ತಿಜೀವನ ಹೊಂದಿರುವ ಅನಿಲ್ ಕುಂಬ್ಳೆ, ತಮ್ಮ ನಿವೃತ್ತಿ ಘೋಷಣೆಗಾಗಿ ಹಲವು ಮೂಲೆಗಳಿಂದ ತೀವ್ರ ಒತ್ತಡಕ್ಕೆ ಗುರಿಯಾಗಿದ್ದರು. ಈ ನಿಟ್ಟಿನಲ್ಲಿ ಮಾಜಿ ಆಯ್ಕಾ ಸಮಿತಿ ಅಧ್ಯಕ್ಷ ದಿಲಿಪ್ ವೆಂಗ್ಸರ್ಕರ್‌ರ ಕುಂಬ್ಳೆ ನಿವೃತ್ತಿ ನೀಡುವಾಗಿನ ಆಗ್ರಹ ತೀರ ಇತ್ತೀಚಿಗಿನದ್ದಾಗಿತ್ತು.
1990ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ ಅನಿಲ್ ಕುಂಬ್ಳೆ, ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ತದನಂತರ ಹಿಂತಿರುಗಿ ನೋಡದ ಬೆಂಗಳೂರು ಹುಡುಗ, ಒಂದರ ಹಿಂದೊಂದರಂತೆ ದಾಖಲೆ ಸರಮಾಲೆಯನ್ನೇ ಸೃಷ್ಟಿಸುತ್ತಾ ಸಾಗಿದರು. ಇದರಲ್ಲಿ ಟೆಸ್ಟಿನಲ್ಲಿ (10 ಪಂದ್ಯ) ಅತ್ಯಂತ ವೇಗದಲ್ಲಿ 50 ವಿಕೆಟ್ ಕಬಳಿಸಿದ ಭಾರತೀಯ ಬೌಲರ್‌ನೆಂಬ ಹೆಗ್ಗಳಿಗೆ ಒಂದಾಗಿದೆ. ಈ ದಾಖಲೆ ಇನ್ನೂ ಅವರ ಹೆಸರಲ್ಲೇ ಇದೆ. ಇದಲ್ಲದೆ ಅವರು, (21 ಟೆಸ್ಟ್) ಅತ್ಯಂತ ವೇಗದಲ್ಲಿ 100 ವಿಕೆಟ್ ಕಿತ್ತ ಎರಡನೇ ಭಾರತೀಯ ಆಟಗಾರನ ಕೀರ್ತಿಯನ್ನೂ ಹೊಂದಿದ್ದಾರೆ.
ಚೆಂಡನ್ನು ಬಹುವಾಗಿ ತಿರುಗಿಸುವವರಲ್ಲ ಎಂಬ ಟೀಕೆಗಳಿಗೆ ನಿರಂತರವಾಗಿ ಗುರಿಯಾಗುತ್ತಿದ್ದ ಅನಿಲ್ ಕುಂಬ್ಳೆ 619 ವಿಕೆಟ್‌ಗಳ ಸರದಾರನಾಗಿದ್ದು, ಶ್ರೀಲಂಕಾದ ಮುತ್ತಯ್ಯ ಮಿರಳೀಧರನ್ ಹಾಗೂ ನಿವೃತ್ತ ಆಸಿಸ್‌ನ ಶೇನ್ ವಾರ್ನ್‌ರ ಬಳಿಕ ಸರ್ವಕಾಲೀನ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ. 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಕಬಳಿಸುವ ಮೂಲಕ ಅವರು ಏಕದಿನ ಕ್ರಿಕೆಟ್‌ನಲ್ಲೂ ಭಾರತದ ಮುಂಚೂಣಿಯ ವಿಕೆಟ್ ಸರದಾರರಾಗಿದ್ದಾರೆ.
ಇದೆಲ್ಲಕಿಂತ ಮಿಗಿಲಾಗಿ ಅನಿಲ್ ಕುಂಬ್ಳೆ, ಕಿಕ್ರೆಟ್ ಇತಿಹಾಸದಲ್ಲಿ ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ ಪೂರ್ಣ 10 ವಿಕೆಟ್ ಕಬಳಿಸಿದ ಏಕಮಾತ್ರ ಭಾರತೀಯ ಆಟಗಾರರಾಗಿದ್ದಾರೆ. ಅನಿಲ್ ಕುಂಬ್ಳೆ ಈ ಅದ್ಭುತ ಸಾಧನೆಯನ್ನು ಬದ್ಧ ವೈರಿ ಪಾಕಿಸ್ತಾನದ ವಿರುದ್ಧ 1999ರಲ್ಲಿ ಇದೇ ಪಿರೋಜ್‌ಶಾ ಕೋಟ್ಲಾ ಮೈದಾನದಲ್ಲೇ ಸಾಧಿಸಿದ್ದರು. ಭಾರತದ ಈ ಸ್ಪಿನ್ ಮಾಂತ್ರಿಕ 2007 ವಿಶ್ವಕಪ್ ಬಳಿಕ ತಮ್ಮ ಏಕದಿನ ಕ್ರಿಕೆಟಿಗೆ ವಿದಾಯ ಹೇಳಿದ್ದರು.
ಕ್ರಿಕೆಟ್‌ನಲ್ಲಿನ ಅದ್ಭುತ ಸಾಧನೆಗಳಿಗಾಗಿ 1995ರಲ್ಲಿ ಕುಂಬ್ಳೆಯವರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯಿಂದ ಗೌರವಿಸಲಾಗಿತ್ತು. ಕುಂಬ್ಳೆ 1996ರಲ್ಲಿ ವರ್ಷದ ವಿಸ್ಡನ್ ಕ್ರಿಕೆಟರ್‌ರ ಗೌರವವನ್ನೂ ಪಡೆದಿದ್ದರು. 2005ರಲ್ಲಿ ಭಾರತ ಸರಕಾರ ಅವರಿಗೆ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಇಂದು ನಿಮ್ಮ ಏಕಾಗ್ರತಾ ಶಕ್ತಿಗಳ ಮೂಲಕ ಕಲಿಯುತ್ತೀರಿ ಮತ್ತು ನೀವು ಕಲಿತಿರುವುದನ್ನು ಹೆಮ್ಮೆಯಿಂದ, ವಿಶಿಷ್ಟವಾಗಿ ಮತ್ತು ಸರಾಗವಾಗಿ ಹೇಳುತ್ತೀರಿ. ನಿಮ್ಮ ಜೀವನದಲ್ಲಿ ಹೊಸ ಆರಂಭ ಪಡೆಯಲು ಇದು ಅದ್ಭುತವಾದ ಸಮಯವಾಗಿದೆ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಸಂಗಮ ಚಿತ್ರದ ಮೂಲಕ ನಟ ಕೋಮಲ್ ಮತ್ತೊಮ್ಮೆ ಮಿಂಚಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದ ಬಹುತೇಕ ಚಿತ್ರಗಳಲ್ಲಿ ಕೋಮಲ್ ನಟಿಸಿರುವುದು ಮತ್ತೊಂದು ವಿಶೇಷ. |
| |
|
|
|
|
|
|
|