|
| ದಾಖಲೆ ಅಂಚಲ್ಲಿ ಸಚಿನ್ ಔಟ್, ಮಂದ ಬೆಳಕು ಆಟ ನಿಲುಗಡೆ |
| ಬೆಂಗಳೂರು, ಸೋಮವಾರ, 13 ಅಕ್ಟೋಬರ್ 2008 ( 15:44 IST ) | |
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸಿಸ್ ಒಡ್ಡಿದ 299 ರನ್ನುಗಳ ಪ್ರತಿಯಾಗಿ ಭಾರತ 148 ರನ್ನುಗಳಿಗೆ ತನ್ನ ನಾಲ್ಕು ವಿಕೆಟ್ ಕಳೆದು ಕೊಂಡು, ಡ್ರಾ ಸಾಧಿಸುವತ್ತ ಹರ ಸಾಹಸ ಪಡುತ್ತಿದೆ.
ಈ ಬೃಹದಾಕಾರದ ಸವಾಲನ್ನು ಬೆನ್ನಟ್ಟಲು ಪ್ರಾರಂಭಿಸಿದ ಭಾರತ ಸೆಹ್ವಾಗ್ (6) ಮತ್ತು ದ್ರಾವಿಡ್ (5) ರೂಪದಲ್ಲಿ ತನ್ನ ಎರಡು ವಿಕೆಟುಗಳನ್ನು ಬಹು ಬೇಗ ಕಳೆದುಕೊಂಡಿತು. ಸೆಹ್ವಾಗ್ ಸ್ಟುವರ್ಟ್ ಕ್ಲಾರ್ಕ್ ಬೌಲಿಗೆ ಬಲಿಯಾದರೆ, ದ್ರಾವಿಡ್ ಬ್ರೇಟ್ ಲೀ ಬಾಲಿಗೆ ವಿಕೆಟ್ ಒಪ್ಪಿಸಿದರು.
ತದ ನಂತರ ಗೌತಂ ಗಂಭೀರ್ ಮತ್ತು ಸಚಿನ್ ತೆಂಡುಲ್ಕರ್ ಭಾರತದ ಮುಳುಗುತ್ತಿರುವ ದೋಣಿಯನ್ನು ಮೇಲಕ್ಕೆತ್ತಲು ತುಸು ಮಟ್ಟಿನ ಪ್ರಯತ್ನ ಪಟ್ಟರು, ಆದರೆ ಗಂಭೀರ್ (29) ಜಾನ್ಸನ್ ಬೌಲಿಗೆ ಬಲಿಯಾಗುವುದರೊಂದಿಗೆ ಭಾರತಕ್ಕೆ ಮತ್ತೊಂದು ಪೆಟ್ಟು ಬಿದ್ದಿತು.
ತದನಂತರ ಜತೆಗೂಡಿದ ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಭಾರತ ಇನ್ನಷ್ಟು ಆಘಾತಕ್ಕೊಳಗಾಗದಂತೆ ನೋಡಿಕೊಂಡರು. ಈ ಇಬ್ಬರು ಅನುಭವಿ ಆಟಗಾರರು ಜವಬ್ದಾರಿಯುತ ಆಟ ಪ್ರದರ್ಶಿಸಿ 4ನೇ ವಿಕೆಟಿಗೆ 61 ರನ್ನುಗಳ ಜತೆಯಾಟ ನೀಡಿದರು. ಅಷ್ಟರಲ್ಲಿ ಸಚಿನ್ ತೆಂಡುಲ್ಕರ್ (49) ಕೆಮರೂನ್ ವೈಟ್‌ಗೆ ವಿಕೆಟ್ ಒಪ್ಪಿಸಿ, ಭಾರತ ಅತಿ ದೊಡ್ಡ ಆಘಾತ ಎದುರಿಸಿದೆ. ಅಲ್ಲದೆ ಸಚಿನ್ ತೆಂಡುಲ್ಕರ್ ಲಾರಾರ ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದ ದಾಖಲೆಯನ್ನು ಮುರಿಯಲು ಇನ್ನು ಕೇವಲ 15 ರನ್ನುಗಳಿರುವಂತೆಯೇ ಔಟಾಗಿದ್ದು, ನೆರೆದಿದ್ದ ಪ್ರೇಕ್ಷಕರಲ್ಲಿ ಭಾರೀ ನಿರಾಸೆಯನ್ನು ಮೂಡಿಸಿತು.
ಪ್ರಸಕ್ತ ಭಾರತದ ಪಾರಿಯ ಜವಬ್ದಾರಿಯನ್ನು ವಿವಿಎಸ್ ಲಕ್ಷ್ಮಣ್ (36) ಮತ್ತು ಸೌರವ್ ಗಂಗೂಲಿ (7) ವಹಿಸಿಕೊಂಡಿದ್ದಾರೆ. ಈ ಮಧ್ಯೆ ಮಂದ ಬೆಳಕಿನ ಕಾರಣ ಆಟವನ್ನು ನಿಲ್ಲಿಸಲಾಗಿದೆ. ಭಾರತದ ಬ್ಯಾಟ್ಸ್‌ಮನ್‌ಗಳು ಇನ್ನು 25 ಓವರುಗಳನ್ನು ಆಡಿದರೆ, ತಮ್ಮ ಸೋಲನ್ನು ತಪ್ಪಿಸುವಲ್ಲಿ ಸಫಲರಾಗಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|