ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಮೊದಲ ಟೆಸ್ಟ್: ಭಾರತದ ಎದುರು ಕಠಿಣ ಸವಾಲು
ಬೆಂಗಳೂರು, ಸೋಮವಾರ, 13 ಅಕ್ಟೋಬರ್ 2008   ( 11:53 IST )
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಆಸಿಸ್ ತಂಡ ತನ್ನ ಎರಡನೇ ಇನ್ನಿಂಗ್ಸನ್ನು 228/6ಕ್ಕೆ ಡಿಕ್ಲೇರ್ ಮಾಡಿಸಿಕೊಂಡಿದ್ದು, ಭಾರತ ವಿರುದ್ಧ 299 ರನ್ನುಗಳ ಪರ್ವತಸದೃಶ್ಯ ಸವಾಲನ್ನು ಒಡ್ಡಿದೆ.

ಈ ಕಡೆ ತನ್ನ ಎದುರಿಗಿರುವ ಬೃಹದಾಕಾರದ ಸವಾಲಿಗೆ ಪ್ರತ್ಯುತ್ತರವಾಗಿ ತನ್ನ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿರುವ ಭಾರತ, ಆರಂಭಿಕ ಆಟಗಾರರಾದ ಸೆಹ್ವಾಗ್ (5) ಮತ್ತು ಗಂಭೀರ್ (10) ರೂಪದಲ್ಲಿ 15 ರನ್ನುಗಳನ್ನು ಕಲೆ ಹಾಕಿದೆ.

ನಿನ್ನೆಯ 193/5 ರನ್ನಿಗೆ ತನ್ನ ಇಂದಿನ ಆಟವನ್ನು ಪ್ರಾರಂಭಿಸಿದ ಆಸಿಸ್ ವಾಟ್ಸನ್ ರೂಪದಲ್ಲಿ ತನ್ನ ಮೊದಲ ವಿಕೆಟನ್ನು ಕಳೆದು ಕೊಂಡಿತು. ವಾಟ್ಸನ್ (41) ಇಶಾಂತ್ ಶರ್ಮಾರ ಬೌಲಿಗೆ ಬಲಿಯಾದರು.

ನಂತರ ಹೇಡ್ಡಿನ್ (35) ಜತೆಗೂಡಿದ ಕೆಮರೂನ್ ವೈಟ್ (18) ಕೆಲ ಆಕ್ರಣಕಾರಿ ಆಟ ಪ್ರದರ್ಶಿಸಿ ತಂಡ ಒಂದು ಬೃಹತ್ ಸವಾಲನ್ನು ಪೇರಿಸುವಂತೆ ಮಾಡಿದರು. ತಂಡದ ಮೊತ್ತ 228 ರನ್ನುಗಳನ್ನು ಮುಟ್ಟುತ್ತಿದ್ದಂತೆಯೇ ನಾಯಕ ರಿಕಿ ಪಾಂಟಿಂಗ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.

ಪಿಚ್‌ನಲ್ಲಿ ದೊಡ್ಡ ಬಿರುಕುಗಳು ಕಾಣಿಸಿ ಕೊಂಡಿದ್ದು ಬ್ಯಾಟಿಂಗ್ ಅಷ್ಟೇನು ಸುಲಭ ಸಾಧ್ಯವಲ್ಲ. ಸೋಲನ್ನು ತಪ್ಪಿಸಲು ಭಾರತ ಬ್ಯಾಟ್ಸ್‌ಮನ್‌ಗಳು ದಿನ ಪೂರ್ತಿ ಎಚ್ಚರಿಕೆಯುತ ಆಟ ಪ್ರದರ್ಶಿಸ ಬೇಕಾಗಿದೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಲ್ಗೇರಿಯನ್ ಗ್ರಾಂಡ್ ಪ್ರಿಕ್ಸ್: ಜ್ವಾಲಗೆ ಉಭಯ ಕಿರೀಟ
ಕೆಟ್ಟ ಪ್ರದರ್ಶನ: ಕುಂಬ್ಳೆ ವಿರುದ್ಧ ವೆಂಗ್ಸರ್ಕರ್ ಗರಂ
ವಿಶ್ವ ಯುವ ಚಾಂಪಿಯನ್‌ಶಿಪ್: ಮಹಿಳಾ ಆರ್ಚೆರಿ ತಂಡಕ್ಕೆ ಬೆಳ್ಳಿ
ಎಟಿಪಿ ಚಾಲೆಂಜರ್: ಅಂತಿಮ ಸುತ್ತಿಗೆ ಬೋಪಣ್ಣಾ
ಮೊದಲ ಟೆಸ್ಟ್: ಸುಭದ್ರ ಸ್ಥಿತಿಯಲ್ಲಿ ಆಸಿಸ್
ಮೊದಲ ಟೆಸ್ಟ್: ನಿಧಾನವಾಗಿ ಮುನ್ನಡೆಯುತ್ತಿರುವ ಆಸಿಸ್
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಸಿದ್ದವಾಗಿದೆ ...
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...