|
| ಬಲ್ಗೇರಿಯನ್ ಗ್ರಾಂಡ್ ಪ್ರಿಕ್ಸ್: ಜ್ವಾಲಗೆ ಉಭಯ ಕಿರೀಟ |
| ನವದೆಹಲಿ, ಸೋಮವಾರ, 13 ಅಕ್ಟೋಬರ್ 2008 ( 11:52 IST ) | |
ಸೊಫಿಯಾದಲ್ಲಿನ ಬಲ್ಗೇರಿಯನ್ ಗ್ರಾಂಡ್ ಪ್ರಿಕ್ಸ್ ಬ್ಯಾಡ್‌ಮಿಂಟನ್ ಟೂರ್ನಿಯಲ್ಲಿ ಭಾರತದ ಜ್ವಾಲ ಗುಟ್ಟ ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಕಿರೀಟವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ.
ಮೊದಲಿಗೆ ಜ್ವಾಲ ವಿ ಡಿಜು ಜತೆಗೂಡಿ, 5ನೇ ಶ್ರೇಯಾಂಕಿತ ಇಂಡೊನೇಷ್ಯಾದ ಪ್ರಾನ್ ಕುರ್ನಿವಾನ್ ಮತ್ತು ಶೆಂಡಿ ಪುಸ್ಪ ಇರಾವತಿ ಜೋಡಿಯನ್ನು ಸೋಲಿಸಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ಭಾರತೀಯ ಜೋಡಿ ಪ್ರಾರಂಭಿಕ ಅಡೆತಡೆಗಳನ್ನು ಹಿಮ್ಮೆಟ್ಟಿ, ಚೇತರಿಕೆ ಕಂಡು, ಇಂಡೊನೇಷ್ಯಾ ಜೋಡಿಯನ್ನು 15-21, 21-18, 21-19ದಲ್ಲಿ 45 ನಿಮಿಷಗಳಲ್ಲಿ ಸೋಲಿಸಿದರು.
ನಂತರ 25 ವರ್ಷದ ಜ್ವಾಲ ತಮ್ಮ ಡಬಲ್ಸ್ ಜತೆಗಾರ್ತಿ ಶೃತಿ ಕುರಿಯನ್ ಜತೆಗೂಡಿ ಎದುರಾಳಿ ಇಂಡೊನೇಷ್ಯಾದ ಇರಾವತಿ ಮತ್ತು ಮೀಲಿಯಾನ ಜೌಹರಿ ಜೋಡಿಯನ್ನು ನೇರ ಪಂದ್ಯಗಳಿಂದ ಸೋಲಿಸಿ ತಮ್ಮ ಎರಡನೇ ಪ್ರಶಸ್ತಿಯನ್ನು ಗೆದ್ದುಕೊಂಡರು.
ಈ ಜೋಡಿ ಇರಾವತಿ-ಜೌಹರಿಯನ್ನು 21-11, 21-19ದಲ್ಲಿ ಕೇವಲ 28 ನಿಮಿಷಗಳಲ್ಲಿ ಸೋಲಿಸಿದರು.
ಅವಳಿ ಪ್ರಶಸ್ತಿ ವಿಜೇತೆ ನಂತರ ಮಾತನಾಡಿ, ತಾನು ಈ ಸಾಧನೆಯಿಂದ ಅತ್ಯಂತ ಸಂತೋಷಗೊಂಡಿದ್ದು, ತಾನು ತನ್ನ ಕೋಚ್ ಎಸ್ಎಂ ಆರಿಫ್‌ಗೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|