ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಶ್ವ ಯುವ ಚಾಂಪಿಯನ್‌ಶಿಪ್: ಮಹಿಳಾ ಆರ್ಚೆರಿ ತಂಡಕ್ಕೆ ಬೆಳ್ಳಿ
ಕೋಲ್ಕತಾ, ಸೋಮವಾರ, 13 ಅಕ್ಟೋಬರ್ 2008   ( 11:50 IST )
ಟರ್ಕಿಯ ಅಂಟಲ್ಯಾದಲ್ಲಿ ನಡೆದ ವಿಶ್ವ ಯುವ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ನಲ್ಲಿ ಬೆಲ್‌ಸ್ರಿ ನರ್ಜರಿ, ರಿಮಿಲ್ ಬಿರುಲಿ ಮತ್ತು ವಾರ್ಧಿನೆನಿ ಪ್ರನಿಥರನ್ನು ಒಳಗೊಂಡ ಭಾರತೀಯ ಕಿರಿಯರ ಮಹಿಳಾ ಬಿಲ್ಲುಗಾರಿಕೆ ತಂಡ ಬೆಳ್ಳಿ ಪದಕವನ್ನು ತನ್ನ ಮುಡಿಗೇರಿಸಿಕೊಂಡಿದೆ.

ಫೈನಲಿನಲ್ಲಿ ಭಾರತ ಚೀನಾ ವಿರುದ್ಧ 190-208ಕ್ಕೆ ಸೋಲು ಕಂಡು, ಬೆಳ್ಳಿಗೆ ತೃಪ್ತಿಪಡಬೇಕಾಯಿತು.

ವರದಿ ಬರುವ ವೇಳೆಗೆ, ಬೀಜಿಂಗ್ ಒಲಿಂಪಿಯನ್ ಪ್ರನಿಥ ವ್ಯಕ್ತಿಗತ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದು, ಮತ್ತೊಂದು ಪದಕವನ್ನು ಖಚಿತಗೊಳಿಸಿದ್ದಾರೆ.

ಆದರೆ ಈ ಕಡೆ ಹೆಮೆಂಥ ಪುರುಷರ ಕೆಡೆಟ್ ವ್ಯಕ್ತಿಗತ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಕೊರಿಯಾದ ಶಿನ್ ಜೇ ಹುನ್ ವಿರುದ್ಧ ಸೋಲು ಕಂಡು ಕಂಚಿನ ಪದಕವನ್ನು ಕಳೆದುಕೊಂಡರು. ಮಹಿಳೆಯರ ಸಂಯುಕ್ತ ತಂಡ ಕೆಡೆಟ್ ವಿಭಾಗದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು ಎಂದು ಭಾರತೀಯ ಬಿಲ್ಲುಗಾರಿಕೆ ಸಂಘಟನೆ ತಿಳಿಸಿದೆ.

ಕಿರಿಯರ ಬಿಲ್ಲುಗಾರಿಕೆ ಪುರುಷರ ತಂಡ ಕೊನೆಯದಾಗಿ 9ನೇ ಸ್ಥಾನವನ್ನು ಗಳಿಸಿತು. ಸಂಯುಕ್ತ ಪುರುಷರ ಮತ್ತು ಮಹಿಳೆಯರ ತಂಡ ಕ್ರಮವಾಗಿ 11ನೇ ಮತ್ತು 5ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಕೆಡೆಟ್ ವಿಭಾಗದಲ್ಲಿ, ಪುರುಷರ ತಂಡ ಸಮಗ್ರ 12ನೇ ಸ್ಥಾನ ಗಳಿಸಿದರೆ, ಮಹಿಳೆಯರ ತಂಡ 6ನೇ ಸ್ಥಾನಕ್ಕೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತು. ಸಂಯುಕ್ತ ಜ್ಯೂನಿಯರ್ ವಿಭಾಗದಲ್ಲೂ ಪುರುಷರ ತಂಡ 8 ಹಾಗೂ ಮಹಿಳೆಯರ ತಂಡ 4ನೇ ಸ್ಥಾನಕ್ಕೆ ತನ್ನ ಹೋರಾಟವನ್ನು ಮುಗಿಸಿತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎಟಿಪಿ ಚಾಲೆಂಜರ್: ಅಂತಿಮ ಸುತ್ತಿಗೆ ಬೋಪಣ್ಣಾ
ಮೊದಲ ಟೆಸ್ಟ್: ಸುಭದ್ರ ಸ್ಥಿತಿಯಲ್ಲಿ ಆಸಿಸ್
ಮೊದಲ ಟೆಸ್ಟ್: ನಿಧಾನವಾಗಿ ಮುನ್ನಡೆಯುತ್ತಿರುವ ಆಸಿಸ್
ಜಪಾನ್ ಗ್ರಾಂಡ್ ಪ್ರಿಕ್ಸ್ ಅಲೊನ್ಸೊ ಮುಡಿಗೆ
ಟೆಸ್ಟ್: ಜಹೀರ್ ಅರ್ಧಶತಕ, ಭಾರತ 360ಕ್ಕೆ ಆಲ್‌ಔಟ್
ಯಾವ ಪತ್ರಿಕೆಗೂ ಸಂದರ್ಶನ ನೀಡಿಲ್ಲ: ಗಂಗೂಲಿ ಸ್ಪಷ್ಟನೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮೈತ್ರಿಗೆ ಮುಂದು: ಪುನರುಚ್ಚರಿಸಿದ ಜೆಡಿಎಸ್
ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಸಿದ್ದವಾಗಿದೆ ...
ಕುತ್ತಿಗೆ ಹಿಸುಕಿ ಒಂಟಿ ಮಹಿಳೆ ಕೊಲೆ
ಭಾವಚಿತ್ರದ ಮತದಾರರ ಪಟ್ಟಿಗೆ ಚಿಂತನೆ
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...