|
| ಮೊದಲ ಟೆಸ್ಟ್: ಸುಭದ್ರ ಸ್ಥಿತಿಯಲ್ಲಿ ಆಸಿಸ್ |
| ಬೆಂಗಳೂರು, ಭಾನುವಾರ, 12 ಅಕ್ಟೋಬರ್ 2008 ( 17:30 IST ) | |
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಕಂಗಾರೂ ತಂಡ 5 ವಿಕೆಟ್ ನಷ್ಟಕ್ಕೆ 193 ರನ್ನು ಕಲೆ ಹಾಕಿದ್ದು ಭಾರತ ವಿರುದ್ಧ 263 ರನ್ನುಗಳ ಉತ್ತಮ ಮುನ್ನಡೆಯನ್ನು ಪಡೆದಿದೆ.
ಭಾರತದ ಮೊದಲ ಇನ್ನಿಂಗ್ಸನ್ನು 360ಕ್ಕೆ ಅಂತ್ಯಗೊಳಿಸಿ, 70 ರನ್ನುಗಳ ಮುನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಆಸಿಸ್ ಎಚ್ಚರಿಕೆಯುತ ಆಟವಾಡಿ, ತವರು ತಂಡದ ವಿರುದ್ಧ ಒಂದು ಉತ್ತಮ ಸವಾಲನ್ನು ಒಡ್ಡುವಲ್ಲಿ ಸಫಲವಾಗಿದೆ.
ಎರಡನೇ ಇನ್ನಿಂಗ್ಸನ್ನು ಆಡಲು ಪ್ರಾರಂಭಿಸಿದ ಆಸಿಸ್ ಹೇಡನ್ (13) ಮತ್ತು ನಾಯಕ ರಿಕಿ ಪಾಂಟಿಂಗ್ (17) ರೂಪದಲ್ಲಿ ಬಹು ಬೇಗ ವಿಕೆಟ್ ಕಳೆದುಕೊಂಡಿತು. ಹೇಡನ್ ಮತ್ತೊಮ್ಮೆ ಜಹೀರ್ ಖಾನ್ ಬೌಲಿಗೆ ಬಲಿಯಾದರೆ, ಪಾಂಟಿಂಗ್ ಇಶಾಂತ್ ಶರ್ಮಾರ ಬೌಲಿಗೆ ವಿಕೆಟ್ ಒಪ್ಪಿಸಿದರು.
ತದ ನಂತರ ಆರಂಭಿಕ ಆಟಗಾರ ಕಾಟಿಚ್ ಮತ್ತು ಮೈಕೆಲ್ ಹಸ್ಸೀ ಜೋಡಿ ಆಸಿಸ್ ತಂಡವನ್ನು ತುಸು ದೂರದ ವರೆಗೆ ಕೊಂಡೊಯ್ಯಿತು. ಅಂತಿಮವಾಗಿ ಹರ್ಭಜನ್ ಸಿಂಗ್ ಕಾಟಿಚ್ ವಿಕೆಟ್ ಕಿತ್ತು ಈ ಜೋಡಿಯ 50 ರನ್ನುಗಳ ಜತೆಯಾಟವನ್ನು ಮುರಿದು ಹಾಕಿದರು.
ಇದಾದ ನಂತರ ಕ್ರೀಸಿಗಿಳಿದ ಮೈಕೆಲ್ ಕ್ಲಾರ್ಕ್ (6) ಹೆಚ್ಚಿನ ಪ್ರತಿರೋಧ ತೋರದೆ, ಇಶಾಂತ್ ಶರ್ಮಾರ ಬೌಲಿಗೆ ಬಲಿಯಾದರು. ಕ್ಲಾರ್ಕ್ ಔಟಾದ ತುಸು ಹೊತ್ತಿನಲ್ಲೇ ಮೈಕೆಲ್ ಹಸ್ಸೀ (31)ಯವರೂ ಹರ್ಭಜನ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು.
ತರುವಾಯ ವಾಟ್ಸನ್ ಮತ್ತು ಹೇಡ್ಡಿನ್ ಜತೆಗೂಡಿ ಆಸಿಸ್ ತಂಡ ಮತ್ತಷ್ಟು ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡರು. ಈ ಇಬ್ಬರ ಜೋಡಿ ಭಾರತದ ಬಳಲಿದ ಬೌಲಿಂಗ್ ದಾಳಿಯ ಲಾಭ ಪಡೆದು, ಆಸಿಸ್ ತಂಡ ಒಂದು ಉತ್ತಮ ಸ್ಥಿತಿಗೆ ತಲುಪುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ನಾಲ್ಕನೇ ದಿನದ ಆಟ ಮುಗಿಯುವ ವೇಳೆ ವಾಟ್ಸನ್ 32 ಮತ್ತು ಹೇಡ್ಡಿನ್ 28 ರನ್ನುಗಳೊಂದಿಗೆ ಆಡುತ್ತಿದ್ದು, ಅತಿಥೇಯ ತಂಡವನ್ನು ಒಂದು ಸುಭದ್ರ ಸ್ಥಿತಿಯತ್ತ ಕೊಂಡೊಯ್ಯುತ್ತಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|