|
| ಮೊದಲ ಟೆಸ್ಟ್: ನಿಧಾನವಾಗಿ ಮುನ್ನಡೆಯುತ್ತಿರುವ ಆಸಿಸ್ |
| ಬೆಂಗಳೂರು, ಭಾನುವಾರ, 12 ಅಕ್ಟೋಬರ್ 2008 ( 15:55 IST ) | |
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 119 ರನ್ನುಗಳನ್ನು ಕಲೆ ಹಾಕಿದ್ದು, ಭಾರತ ವಿರುದ್ಧ 189 ರನ್ನುಗಳ ಮುನ್ನಡೆಯನ್ನು ಪಡೆದಿದೆ.
ಭಾರತದ ಮೊದಲ ಇನ್ನಿಂಗ್ಸ್‌ನ್ನು 360 ರನ್ನುಗಳಿಗೆ ಅಂತ್ಯಗೊಳಿಸಿ, 70 ರನ್ನುಗಳ ಮುನ್ನಡೆ ಪಡೆದ ಆಸಿಸ್ ತನ್ನ ಎರಡನೇ ಇನ್ನಿಂಗ್ಸ್‌ನ್ನು ಬಹಳ ಎಚ್ಚರಿಕೆಯುತವಾಗಿ ಆಡುತ್ತಿದೆ. ಆರಂಭಿಕ ಆಟಗಾರರಾಗಿ ಕ್ರೀಸಿಗಿಳಿದ ಹೇಡನ್ ಮತ್ತು ಕಾಟಿಚ್ ಉತ್ತಮ ಆರಂಭ ನೀಡುವಲ್ಲಿ ಸಫಲರಾಗಲಿಲ್ಲ. ಹೇಡನ್ (13) ಜಹೀರ್ ಖಾನ್ ಬೌಲಿಗೆ ಮತ್ತೊಮ್ಮೆ ಬಲಿಯಾಗುವುದರ ಮೂಲಕ ಆಸಿಸ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು.
ನಂತರ ಕಾಟಿಚ್ ಮತ್ತು ರಿಕಿ ಪಾಂಟಿಂಗ್ ಆಸಿಸ್‌ನ್ನು ನಿಧಾನವಾಗಿ ಮುನ್ನಡೆಸಲು ಪ್ರಾರಂಭಿಸಿದರು. ಆದರೆ ಮೊದಲ ಇನ್ನಿಂಗ್ಸ್‌ನ ಶತಕವೀರ ನಾಯಕ ಪಾಂಟಿಂಗ್ (17) ಇಶಾಂತ್ ಶರ್ಮಾರ ಬೌಲಿಗೆ ಬಲಿಯಾಗಿ ಆ ಆಟವನ್ನು ಮರುಕಳಿಸುವಲ್ಲಿ ವಿಫಲರಾದರು.
ನಂತರ ಕಾಟಿಚ್ ಮತ್ತು ಹಸ್ಸೀ ಜತೆಗೂಡಿ ಸವಧಾನಯುತ ಆಟವಾಡಿ ಸ್ಕೋರ್ ಬೋರ್ಡ್ ನಿಧಾನವಾಗಿ ಚಲಿಸುವಂತೆ ಮಾಡಿದರು. ನಂತರ ಹರ್ಭಜನ್ ಸಿಂಗ್ ಕಾಟಿಚ್ ವಿಕೆಟ್ ಕಿತ್ತು ಈ ಜೋಡಿಯ 50 ರನ್ನುಗಳ ಜತೆಯಾಟವನ್ನು ಮುರಿದು ಹಾಕಿದರು.
ಇದಾದ ನಂತರ ಕ್ರೀಸಿಗಿಳಿದ ಮೈಕೆಲ್ ಕ್ಲಾರ್ಕ್ (6) ಹೆಚ್ಚಿನ ಪ್ರತಿರೋಧ ತೋರದೆ, ಇಶಾಂತ್ ಶರ್ಮಾರ ಬೌಲಿಗೆ ಬಲಿಯಾದರು.
ಪ್ರಸಕ್ತ ಆಸಿಸ್ ಪಾರಿಯನ್ನು ಮೈಕೆಲ್ ಹಸ್ಸೀ (29) ಮತ್ತು ವಾಟ್ಸನ್ (1) ಮುನ್ನಡೆಸುತ್ತಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|