|
| ಟೆಸ್ಟ್: ಹರ್ಭಜನ್ ಅರ್ಧಶತಕ, ಭಾರತ 313/8 |
| ಬೆಂಗಳೂರು, 11 ಅಕ್ಟೋಬರ್ 2008 ( 17:48 IST ) | |
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬಾಲಂಗೋಚಿಗಳಾದ ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್‌ರ ಮಹತ್ವದ ಜತೆಯಾಟದ ನೆರವಿನೊಂದಿಗೆ ಮೂರನೇ ದಿನದ ಆಟ ಮುಗಿಯುವ ವೇಳೆಗೆ 8 ವಿಕೆಟ್ ನಷ್ಟಕ್ಕೆ 313 ರನ್ನುಗಳನ್ನು ಪೇರಿಸಲು ಸಾಧ್ಯವಾಯಿತು. ಈ ಮೂಲಕ ಭಾರತ ಆಸಿಸ್‌ನಿಂದ 117 ರನ್ನುಗಳ ಅಂತರದಲ್ಲಿ ಹಿಂದೆ ಇದೆ.
ಸೌರವ್ ಗಂಗೂಲಿ ಔಟಾಗುವುದರೊಂದಿಗೆ ಇನ್ನೇನು ಭಾರತ 250ರ ಗಡಿ ದಾಟುವುದೂ ಕಠಿಣ ಸಾಧ್ಯ ಎಂಬ ಆತಂಕ ಮೂಡಿತು. ಆದರೆ ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್ ಇದನ್ನು ಹುಸಿಗೊಳಿಸಿದರು. ಈ ಇಬ್ಬರು ಆಟಗಾರರು ಆಸಿಸ್ ಬೌಲರುಗಳನ್ನು ಎಚ್ಚರಿಕೆಯಿಂದ ಎದುರಿಸಿ ಜವಬ್ದಾರಿಯುತ ಆಟ ಆಡುವ ಮೂಲಕ ಭಾರತ 300ರ ಗಡಿ ದಾಟುವಂತೆ ಮಾಡಿದರು.
ಇವರಿಬ್ಬರು 8ನೇ ವಿಕೆಟಿಗೆ 80 ರನ್ನುಗಳ ಅತಿ ಮುಖ್ಯ ಜತೆಯಾಟ ನೀಡಿ, ಆಸಿಸ್ ಬೌಲರುಗಳು ತಲೆ ಚಚ್ಚುವಂತೆ ಮಾಡಿದರು. ಭಾರತದ ಅಗ್ರ ಕ್ರಮಾಂಕವನ್ನು ಛಿದ್ರಗೊಳಿಸಿದ ಆಸಿಸ್ ಬೌಲರುಗಳನ್ನು ಈ ಜೋಡಿ ಸಾವಧಾನಯುತವಾಗಿ ಎದುರಿಸಿ, ತಂಡದ ಮೊತ್ತ ಏರುವಂತೆ ಮಾಡಿದರು.
ವಿಶೇಷವಾಗಿ ಗಮನ ಸೆಳೆದ ಹರ್ಭಜನ್ ತಮ್ಮ ಕೆಲ ಆಕ್ರಮಣಕಾರಿ ಆಟ ಪ್ರದರ್ಶಿಸಿ ಟೆಸ್ಟ್ ಜೀವನದ 5ನೇ ಅರ್ಧಶತಕವನ್ನು ಭಾರಿಸಿ, ತಂಡದ ಚೇತರಿಕೆಗೆ ಬಹು ಮುಖ್ಯ ಕಾಣಿಕೆ ನೀಡಿದರು. ಇವರಿಗೆ ಬೌಲರ್ ಜಹೀರ್ ಖಾನ್ ಉತ್ತಮ ಸಾತ್ ನೀಡಿದರು. ಇನ್ನೇನು ಈ ಜೋಡಿ ಭಾರತವನ್ನು ಆಸಿಸ್‌ನ ಮೊದಲ ಇನ್ನಿಂಗ್ಸ್ ಮೊತ್ತದ ಸನಿಹಕ್ಕೆ ಕೊಂಡೊಯ್ಯುವುದು ಎಂದುಕೊಳ್ಳುವಷ್ಟರಲ್ಲಿ, ಹರ್ಭಜನ್ ಸಿಂಗ್ ವಾಟ್ಸನ್ ಬೌಲಿಗೆ ಬಲಿಯಾಗಿ, ನಿರಾಸೆ ಮೂಡಿಸಿದರು. ಹರ್ಭಜನ್ ಸಿಂಗ್ ತಮ್ಮ 54 ರನ್ನಿನ ಇನ್ನಿಂಗ್ಸ್‌ನಲ್ಲಿ 5 ಬೌಂಡರಿಯನ್ನು ಭಾರಿಸಿದ್ದರು.
ಪ್ರಸಕ್ತ ಭಾರತದ ಪಾರಿಯನ್ನು ಜಹೀರ್ ಖಾನ್ (35) ಮತ್ತು ನಾಯಕ ಅನಿಲ್ ಕುಂಬ್ಳೆ ಮುನ್ನಡೆಸುತ್ತಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|