ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಪದಕದ ಮೇಲೆ ಸೈನಾ ಕಣ್ಣು
ಪುಣೆ, ಶನಿವಾರ, 11 ಅಕ್ಟೋಬರ್ 2008   ( 17:00 IST )
ಕಾಮನ್‌ವೆಲ್ತ್ ಯುವ ಕೂಟದಲ್ಲಿ ಭಾರತದ ಪಾಲಿಗೆ ಪದಕ ನೆಚ್ಚಿನ ಆಟಗಾರರಾಗಿರುವ ಶಟ್ಲರ್ ಸೈನಾ ನೆಹ್ವಾಲ್ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

"ನಾನು ಈ ಮುಖಾಮುಖಿಗಾಗಿ ಎದುರು ನೋಡುತ್ತಿದ್ದೇನೆ ಮತ್ತು ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಇತ್ತೀಚೆಗೆ ಬೀಜಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೆ ಮತ್ತು ಇದೇ ಫಾರ್ಮ್ ಅನ್ನು ಕಾಮನ್‌ವೆಲ್ತ್ ಯುವ ಕೂಟದಲ್ಲೂ ಮುಂದುವರಿಸುವ ಭರವಸೆ ಇರಿಸಿಕೊಂಡಿದ್ದೇನೆ" ಎಂದು ಸೈನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

"ಆದರೆ ಇಲ್ಲಿ ವಿಜಯ ಸಾಧಿಸುವುದು ಅಷ್ಟೊಂದು ಸುಲಭಸಾಧ್ಯವಾಗಿರುವುದಿಲ್ಲ. ಜೂನಿಯರ್‌ಗಳು ನಿಜವಾಗಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮಲೇಷ್ಯಾ ಮತ್ತು ಸಿಂಗಪೂರ್‌ಗಳಿಂದ ಕಠಿಣ ಸ್ಪರ್ಧೆಗಳು ಎದುರಾಗಲಿವೆ. ನಾನು ಉತ್ತಮ ಪ್ರತಿಸ್ಪರ್ಧೆಯನ್ನು ನಿರೀಕ್ಷಿಸುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.

ಕಾಮನ್‌ವೆಲ್ತ್ ಯುವ ಕೂಟ ನಡೆಯುವ ತಾಣದಲ್ಲಿಯೇ ಜೂನಿಯರ್ ವಿಶ್ವಚಾಂಪಿಯನ್‌ಶಿಪ್ ನಡೆಯಲಿದ್ದು ಇದು ಖಂಡಿತವಾಗಿಯೂ ಭಾರತೀಯರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂಬುದು ಸೈನಾರ ಅಭಿಪ್ರಾಯ.

"ನಾವು ಇಲ್ಲಿನ ಅಂಗಣಗಳಿಗೆ ಹೊಂದಿಕೊಳ್ಳುವುದು ಸಾಧ್ಯವಾಗುತ್ತದೆ ಮತ್ತು ಒಂದು ವಾರ ಇಲ್ಲಿಯೇ ಉಳಿದುಕೊಳ್ಳುವುದರಿಂದ ನಾವು ಒಂದು ತಂಡವಾಗಿ ರೂಪುಗೊಳ್ಳುತ್ತೇವೆ. ಇದು ನಾವು ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯಕವಾಗುತ್ತದೆ. ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌, ಕಾಮನ್‌ವೆಲ್ತ್ ಯುವ ಕೂಟಕ್ಕಿಂತ ಹೆಚ್ಚು ಕಠಿಣವಾಗಿರುತ್ತದೆ ಏಕೆಂದರೆ ಅದರಲ್ಲಿ ಚೈನಾ ಮತ್ತು ಇಂಡೊನೇಷ್ಯಾದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ" ಎಂದಿದ್ದಾರೆ ಅವರು.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮೊದಲ ಟೆಸ್ಟ್: ಭಾರತ 7 ವಿಕೆಟ್‌ಗೆ 232
ಬಂಗಾಳಿ ಡೈಲಿ ಜತೆ ಸಂದರ್ಶನ: ಗಂಗೂಲಿ ನಕಾರ
ವಿಯೆನ್ನಾ ಒಪನ್: ಮೊನ್ಪಿಲ್ಸ್ ಸೆಮೀಸ್‌ಗೆ
ಮೊದಲ ಟೆಸ್ಟ್: ಸಂಕಷ್ಟದಲ್ಲಿ ಭಾರತ
2011ರಲ್ಲಿ ಭಾರತ ಎಫ್ 1 ಜಿಪಿ ಆತಿಥ್ಯ
ಆಸಿಸ್ ವಿರುದ್ಧದ ಸೋಲನ್ನು ದ್ವೇಷಿಸುತ್ತೇನೆ: ಭಜ್ಜಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...