|
| ಮೊದಲ ಟೆಸ್ಟ್: ಭಾರತ 7 ವಿಕೆಟ್‌ಗೆ 232 |
| ಬೆಂಗಳೂರು, ಶನಿವಾರ, 11 ಅಕ್ಟೋಬರ್ 2008 ( 15:35 IST ) | |
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೇ ದಿನದ ಆಟದಲ್ಲಿ ಭಾರತ ಆಸಿಸ್ ವಿರುದ್ಧದ 430 ರನ್ನುಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ 232 ರನ್ನುಗಳಿಗೆ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದೆ.
ನಿನ್ನೆಯ 68 ರನ್ನುಗಳಿಂದ ತನ್ನ ದಿನದ ಆಟ ಪ್ರಾರಂಭಿಸಿದ ಭಾರತ ಗಂಭೀರ್ ಮತ್ತು ಸೆಹ್ವಾಗ್ ರೂಪದಲ್ಲಿ ಬಹು ಬೇಗ ವಿಕೆಟ್ ಕಳೆದು ಕೊಂಡಿತು. ಗಂಭೀರ್ (21) ಬ್ರೇಟ್ ಲೀ ಬೌಲಿಗೆ ಬಲಿಯಾದರೆ, ಸೆಹ್ವಾಗ್ (45) ಜಾನ್ಸನ್ ಬೌಲಿಗೆ ಬಲಿಯಾದರು.
ಆದರೆ ಈ ಕಡೆ ಅನುಭವಿ ಆಟಗಾರರಾದ ಸಚಿನ್ ತೆಂಡುಲ್ಕರ್ (13) ಮತ್ತು ವಿವಿಎಸ್ ಲಕ್ಷ್ಮಣ್ (0)ರೂ ಹೆಚ್ಚಿನ ಪ್ರತಿರೋಧ ತೋರದೆ ಜಾನ್ಸನ್‌ಗೆ ವಿಕೆಟ್ ಒಪ್ಪಿಸಿ, ಭಾರತವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದರು.
ನಂತರ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಸ್ವಲ್ಪ ಮಟ್ಟಿನ ಪ್ರತಿರೋಧ ತೋರಿ ಭಾರತ ತ್ವರಿತ ಆಘಾತಕ್ಕೊಳಗಾಗುವುದನ್ನು ತಪ್ಪಿಸಿದರು. ಈ ಮಧ್ಯೆ ದ್ರಾವಿಡ್ ತಮ್ಮ ಟೆಸ್ಟ್ ಜೀವನದ 53ನೇ ಅರ್ಧಶತಕ ಭಾರಿಸಿದರು. ಇನ್ನೇನು ಈ ಜೋಡಿ ಭಾರತವನ್ನು ಅಪಾಯದಿಂದ ಪಾರು ಮಾಡುತ್ತದೆ ಎನ್ನುವಷ್ಟರಲ್ಲಿ ದ್ರಾವಿಡ್ (51) ವಾಟ್ಸನ್‌ಗೆ ವಿಕೆಟ್ ಒಪ್ಪಿಸಿ, ಭಾರತಕ್ಕೆ ಭಾರೀ ಆಘಾತ ಉಂಟಾಗುವಂತೆ ಮಾಡಿದರು.
ಇದರಿಂದ ತೆರವಾದ ಸ್ಥಾನವನ್ನು ತುಂಬಲು ಬಂದ ಧೋನಿ (9) ಕೂಡ ಹೆಚ್ಚು ಕಾಲ ನೆಲೆ ನಿಲ್ಲದೆ ಕ್ಲಾರ್ಕ್ ಬೌಲಿಗೆ ಬೌಲ್ಡ್ ಆದರು. ತದ ನಂತರ ಬಂದ ಹರ್ಭಜನ್ ಸಿಂಗ್ ಈ ಕಡೆ ಎಚ್ಚರಿಕೆಯುತವಾಗಿ ಆಡುತ್ತಿದ್ದ ಸೌರವ್ ಗಂಗೂಲಿ ಜತೆಗೂಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಯತ್ನಿಸಿದರು. ಆದರೆ ಸೌರವ್ ಗಂಗೂಲಿ (47) ಜಾನ್ಸನ್‌ರ ಎಲ್ಬಿ ಬಲೆಗೆ ಬಿದ್ದು ಭಾರತ ಪರವಾಗಿದ್ದ ಅತಿ ಚಿಕ್ಕ ಆಶಾಕಿರಣವೂ ಬತ್ತಿ ಹೋಯಿತು.
ಪ್ರಸಕ್ತ ಭಾರತದ ಮುಳುಗುತ್ತಿರುವ ದೋಣಿಯ ಹೊಣೆಯನ್ನು ಹರ್ಭಜನ್ ಸಿಂಗ್ (25) ಮತ್ತು ಜಹೀರ್ ಖಾನ್ ವಹಿಸಿಕೊಂಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|