ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಶ್ವ ಬಿಲಿಯರ್ಡ್ ಚಾಂಪಿಯನ್ ಪಂಕಜ್ ಶುಭಾರಂಭ
ಬೆಂಗಳೂರು, ಭಾನುವಾರ, 7 ಸೆಪ್ಟೆಂಬರ್ 2008   ( 15:12 IST )
file
ವಿಶ್ವ ಬಿಲಿಯರ್ಡ್ ಚಾಂಪಿಯನ್ ಆಗಿ ಹೊರಹೊಮ್ಮಿದ ಪಂಕಜ್ ಅಡ್ವಾಣಿ ಇದೀಗ ಮತ್ತೊಂದು ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಸಮಯ ಮಾದರಿ ಚಾಂಪಿಯನ್ ಶಿಪ್ ಮೊದಲ ಪಂದ್ಯದಲ್ಲಿ ಪ್ರೇಮ್ ಪ್ರಕಾಶ್‌ರನ್ನು ಮಣಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.

ವಿಶ್ವ ಬಿಲಿಯರ್ಡ್ ಚಾಂಪಿಯನ್ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆಗೈದ ಪಂಕಜ್, ಈ ಚಾಂಪಿಯನ್ನನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಪ್ರೇಮ್ ವಿರುದ್ದ 1735-703ರಿಂದ ಗೆಲುವು ದಾಖಲಿಸಿದರು.

ಈ ನಡುವೆ, 9 ಬಾರಿಯ ವಿಶ್ವ ಚಾಂಪಿಯನ್ ಸೇಥಿ, ಅಂಕ ಮಾದರಿಯ ಫೈನಲ್ಸ್‌ನಲ್ಲಿ ಪಂಕಜ್ ಎದುರು ಮಣಿದಿದ್ದರು. ಈ ಕಹಿಯೆಲ್ಲವನ್ನೂ ಮೆಟ್ಟಿ ನಿಂತ ಸೇಥಿ ಸಮಯ ಮಾದರಿ ಚಾಂಪಿಯನ್‌ಶಿಪ್ ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಐರ್ಲೆಂಡ್ ಐವಾನ್ ಮರ್ರೆ ವಿರುದ್ಧ ಸೇಥಿ 1939-167ರಿಂದ ಸುಲಭ ಜಯ ದಾಖಲಿಸಿದರು.

ಉಳಿದ ಪಂದ್ಯಗಳಲ್ಲಿ ದೇವೇಂದ್ರ ಜೋಷಿ, ಪೀಟರ್ ಗಿಲ್ ಕ್ರಿಸ್ಟ್, ರೂಪೇಶ್ ಶಾ ಮತ್ತು ಬಿ ಭಾಸ್ಕರ್ ತಮ್ಮ ಎದುರಾಳಿಗಳ ವಿರುದ್ಧ ಸುಲಭ ಜಯ ಗಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇರಾನಿ ಕಪ್‌ನಲ್ಲಿ ತೆಂಡೂಲ್ಕರ್ ಭಾಗಿ
ಆಸ್ಟ್ರೇಲಿಯ ವಿರುದ್ಧ ಬಾಂಗ್ಲಾಗೆ ಹೀನಾಯ ಸೋಲು
ಇರಾನಿ ಕಪ್‌ನಲ್ಲಿ ಆಡಲಿರುವ ಸಚಿನ್ ತೆಂಡುಲ್ಕರ್
400 ಮೀಟರ್ ದಾಖಲೆ ಕುರಿತು ಬೋಲ್ಟ್ ಇನ್ನೂ ಚಿಂತಿಸಿಲ್ಲ
ಇಬ್ಬರು ಒಲಿಂಪಿಕ್ ಪದಕವೀರರ ಪರೀಕ್ಷೆ ಧನಾತ್ಮಕ
ಚೆಸ್: ಟೊಪಲೋವ್ ವಿರುದ್ಧ ಆನಂದ್‌ಗೆ ಸೋಲು
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಖಜಾನೆಯಲ್ಲಿ ಹಣದ ಕೊರತೆ ಇಲ್ಲ: ಸಿಎಂ
ಬಜೆಟ್ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯ‌ೂರಪ್ಪ ...
ದಸರಾ ಹಬ್ಬಕ್ಕೆ ಏರ್‌ಶೋ ಪ್ರದರ್ಶನ: ಕರಂದ್ಲಾಜೆ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ
ಮುಂದೆ ಓದಿ|ಮತ್ತಷ್ಟು...