ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಆಸ್ಟ್ರೇಲಿಯ ವಿರುದ್ಧ ಬಾಂಗ್ಲಾಗೆ ಹೀನಾಯ ಸೋಲು
ಡಾರ್ವಿನ್, 7 ಸೆಪ್ಟೆಂಬರ್ 2008   ( 13:21 IST )
ಇಲ್ಲಿನ ಟಿಐಒ ಸ್ಟೇಡಿಯಂನಲ್ಲಿ ಶನಿವಾರ ನಡೆದ ಆಸ್ಟ್ರೇಲಿಯ ವಿರುದ್ಧ ಏಕದಿನದ ಸರಣಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಇನ್ನೊಂದು ಹೀನಾಯ ಸೋಲು ಅನುಭವಿಸುವ ಮ‌ೂಲಕ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ವಿಫಲರಾಗಿದ್ದಾರೆ. ಪ್ರವಾಸಿ ತಂಡವು ಆಸ್ಟ್ರೇಲಿಯವನ್ನು ನಿಗದಿತ 50 ಓವರುಗಳಲ್ಲಿ 198ಕ್ಕೆ 5 ವಿಕೆಟ್ ಕಬಳಿಸಿ ನಿಯಂತ್ರಿಸಿದ್ದರೂ, ಅದರಿಂದ ಲಾಭ ಪಡೆಯಲು ವಿಫಲವಾದ ಬಾಂಗ್ಲಾ ತಂಡ ಕೇವಲ 29.5 ಓವರುಗಳಲ್ಲಿ 125 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲಪ್ಪಿತು.

73 ರನ್ ಗೆಲುವಿನಿಂದ ಮ‌ೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯ ಬಾಂಗ್ಲಾದೇಶವನ್ನು ಧೂಳೀಪಟ ಮಾಡಿದ್ದು, ಬಾಂಗ್ಲಾ ಬ್ಯಾಟಿಂಗ್ ಅಂತಾರಾಷ್ಟ್ರೀಯ ತಂಡಕ್ಕೆ ಅಗತ್ಯವಾದ ಗುಣಮಟ್ಟಕ್ಕಿಂತ ಕಡಿಮೆಯಾಗಿದೆ. ಆಸ್ಟ್ರೇಲಿಯ ವಿರುದ್ಧ ಮೊದಲ ಪಂದ್ಯದಲ್ಲಿ ಬಾಂಗ್ಲಾ ಕೇವಲ 74 ರನ್‌ಗಳಿಗೆ ಔಟಾಗಿ 180 ರನ್‌ಗಳಿಂದ ಸೋಲನುಭವಿಸಿತು.

ಎರಡನೇ ಪಂದ್ಯದಲ್ಲಿ 117ರನ್‌ಗಳನ್ನು ಮಾತ್ರ ಗಳಿಸಿ 8 ವಿಕೆಟ್‌ಗಳ ಸೋಲನ್ನು ಅನುಭವಿಸಿದೆ.ಮ‌ೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯದ 198 ರನ್ ಮೊತ್ತವನ್ನು ಬೆಂಬೆತ್ತಿದ ಬಾಂಗ್ಲಾ ತಂಡವು ಆರಂಭದಲ್ಲಿಯೇ ಕುಸಿತ ಅನುಭವಿಸಿ 22ಕ್ಕೆ 3 ವಿಕೆಟ್ ಕಳೆದುಕೊಂಡಿತು. ಇಕ್ಬಾಲ್ ಮತ್ತು ಶಕೀಬ್ ಅಲ್ ಹಸನ್ 60ರನ್ ಜತೆಯಾಟ ಆಡಿ ಪಂದ್ಯಕ್ಕೆ ಸ್ವಲ್ಪ ಚೇತರಿಕೆ ಉಂಟುಮಾಡಿದರೂ, ಶಕೀಬ್ 27ರನ್‌ಗೆ ಔಟಾದ ಬಳಿಕ ಬಾಂಗ್ಲಾ ವಿಕೆಟ್‌ಗಳು ಒಂದರ ಹಿಂದೊಂದು ಬೀಳತೊಡಗಿದವು.

ಮೀಡಿಯಂ ವೇಗದ ಬೌಲರ್ ಜೈಮ್ಸ್ ಹೋಪ್ಸ್ ತನ್ನ ಪ್ರಥಮ ಓವರಿನಲ್ಲಿ 11 ರನ್ ನೀಡಿದರೂ ಬಳಿಕ ತಿರುಗಿಬಿದ್ದು, ಅಲ್ ಹಸನ್ ಮುಖ್ಯವಿಕೆಟ್ ಮತ್ತು ಇನ್ನೆರಡು ವಿಕೆಟ್‌ಗಳನ್ನು ಪಡೆದಾಗ 103ಕ್ಕೆ 8 ವಿಕೆಟ್‌ಗಳೊಂದಿಗೆ ಬಾಂಗ್ಲಾದ ಗೆಲ್ಲುವ ಆಸೆ ಮಣ್ಣುಪಾಲಾಯಿತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇರಾನಿ ಕಪ್‌ನಲ್ಲಿ ಆಡಲಿರುವ ಸಚಿನ್ ತೆಂಡುಲ್ಕರ್
400 ಮೀಟರ್ ದಾಖಲೆ ಕುರಿತು ಬೋಲ್ಟ್ ಇನ್ನೂ ಚಿಂತಿಸಿಲ್ಲ
ಇಬ್ಬರು ಒಲಿಂಪಿಕ್ ಪದಕವೀರರ ಪರೀಕ್ಷೆ ಧನಾತ್ಮಕ
ಚೆಸ್: ಟೊಪಲೋವ್ ವಿರುದ್ಧ ಆನಂದ್‌ಗೆ ಸೋಲು
ತುಫಾನು ಭೀತಿ: ಮೊದಲ ಪುರುಷರ ಸೆಮೀಸ್ ಬೇಗ ಆರಂಭ
ಗೋಲ್ಡನ್ ಲೀಗ್‌: ಪೋವೆಲ್‌ರನ್ನು ಸೋಲಿಸಿದ ಬೋಲ್ಟ್
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಖಜಾನೆಯಲ್ಲಿ ಹಣದ ಕೊರತೆ ಇಲ್ಲ: ಸಿಎಂ
ಬಜೆಟ್ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯ‌ೂರಪ್ಪ ...
ದಸರಾ ಹಬ್ಬಕ್ಕೆ ಏರ್‌ಶೋ ಪ್ರದರ್ಶನ: ಕರಂದ್ಲಾಜೆ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ
ಮುಂದೆ ಓದಿ|ಮತ್ತಷ್ಟು...