|
| ಇರಾನಿ ಕಪ್‌ನಲ್ಲಿ ಆಡಲಿರುವ ಸಚಿನ್ ತೆಂಡುಲ್ಕರ್ |
| ಮುಂಬೈ, ಶನಿವಾರ, 6 ಸೆಪ್ಟೆಂಬರ್ 2008 ( 15:17 IST ) | |
ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್‌ಗಳಲ್ಲಿನ ತಮ್ಮ ಕೆಟ್ಟ ಬ್ಯಾಟಿಂಗ್ ಪಾರ್ಮ್ ಬಳಿಕ ಮತ್ತೆ ಫಿಟ್ ಆಗಿರುವ ಸಚಿನ್ ತೆಂಡುಲ್ಕರ್ ಈ ತಿಂಗಳ ಅಂತ್ಯದಲ್ಲಿ ವಡೋದರಾದಲ್ಲಿ ನಡೆಯಲಿರುವ ದಿಲ್ಲಿ ವಿರುದ್ಧದ ಇತರೆ ಭಾರತ ತಂಡದ ಪರವಾಗಿ ಇರಾನಿ ಕಪ್‌ನಲ್ಲಿ ಭಾಗವಹಿಸುವ ಮೂಲಕ ತಮ್ಮ ವಾಪಸಾತಿ ಕಾಣಲಿದ್ದಾರೆ.
ತಾನು ಇರಾನಿ ಟ್ರೋಫಿಯಲ್ಲಿ ಭಾಗವಹಿಸುತ್ತಿದ್ದೇನೆ. ತಾನು ಈಗ ದೈಹಿಕವಾಗಿ ಆರೋಗ್ಯವಂತನಾಗಿದ್ದೇನೆ ಎಂದು ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ ಉತ್ಪನ್ನವೊಂದರ ಪ್ರಚಾರ ಕಾರ್ಯಕ್ರಮದ ವೇಳೆ ತಿಳಿಸಿದ್ದಾರೆ.
ಸೆಪ್ಟೆಂಬರ್ 24-28ರಲ್ಲಿ ಕಳೆದ ವರ್ಷದ ರಣಜಿ ಟ್ರೋಫಿ ಚಾಂಪಿಯನ್ (ದಿಲ್ಲಿ) ಮತ್ತು ಇತರೆ ಭಾರತದ ನಡುವೆ ನಡೆಯುವ ವಾರ್ಷಿಕ ಪಂದ್ಯಕ್ಕಾಗಿ ಆಯ್ಕೆದಾರರು ಸೋಮವಾರದಂದು ಬಹುತೇಕ ಟೆಸ್ಟ್ ಸ್ಕ್ವೇಡನ್ನು ಆಯ್ಕೆ ಮಾಡಲಿದೆ. ಇದರಲ್ಲಿ ಸಚಿನ್ ಆಯ್ಕೆಗೊಳ್ಳುವ ನಿರೀಕ್ಷೆ ಇದೆ.
ಶ್ರೀಲಂಕಾ ವಿರುದ್ಧದ ಅನಿಲ್ ಕುಂಬ್ಳೆ ನೇತೃತ್ವದ ಟೆಸ್ಟ್ ತಂಡದ ಭಾಗವಾಗಿದ್ದ ಸಚಿನ್ ಫೀಲ್ಡಿಂಗ್ ವೇಳೆ ಮೊಣಕೈ ಗಾಯ ಮಾಡಿಸಿದ ಕಾರಣ, ನಂತರದ 5 ಏಕದಿನ ಪಂದ್ಯ ಸರಣಿಯಿಂದ ಹೊರಗುಳಿಯಬೇಕಾಗಿ ಬಂದಿತ್ತು.
ಚಾಂಪಿಯನ್ ಬ್ಯಾಟ್ಸ್‌ಮನ್ ಶ್ರೀಲಂಕಾ ವಿರುದ್ಧದ 3 ಟೆಸ್ಟ್ ಸರಣಿಯಲ್ಲಿ ಪ್ರತಿ ಇನ್ನಿಂಗ್ಸ್ 15.83 ಸರಾಸರಿಯಲ್ಲಿ ಕೇವಲ 95 ರನ್ನುಗಳನ್ನಷ್ಟೇ ಕಲೆ ಹಾಕಲು ಸಾಧ್ಯವಾಗಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|