|
| 400 ಮೀಟರ್ ದಾಖಲೆ ಕುರಿತು ಬೋಲ್ಟ್ ಇನ್ನೂ ಚಿಂತಿಸಿಲ್ಲ |
| ಬ್ರುಸೆಲ್ಸ್, ಶನಿವಾರ, 6 ಸೆಪ್ಟೆಂಬರ್ 2008 ( 13:49 IST ) | |
ತಾನು 400 ಮೀಟರ್ ಸ್ಪರ್ಧೆಯಲ್ಲಿ ಓಡುವ ಬಗ್ಗೆ ಅಥವಾ ಮೈಕೆಲ್ ಜಾನ್ಸನ್‌ರ 9 ವರ್ಷಗಳ ವಿಶ್ವ ದಾಖಲೆಯನ್ನು ಮುರಿಯುವ ಬಗ್ಗೆ ಇನ್ನೂ ಚಿಂತಿಸಿಲ್ಲ ಎಂದು ಜಮೈಕಾದ ತ್ರಿವಳಿ ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ತಿಳಿಸಿದ್ದಾರೆ.
ಸದ್ಯಕ್ಕೆ ತಾನು 400 ಮೀಟರ್ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಬಗ್ಗೆ ಯೋಚಿಸುತ್ತಿಲ್ಲ ಎಂದು ಬೋಲ್ಟ್ ತಮ್ಮ 100 ಮೀಟರ್ ಗೆಲುವಿನ ನಂತರ ವರದಿಗಾರರಲ್ಲಿ ಮಾತನಾಡುತ್ತಾ ಹೇಳಿದರು.
ಬೋಲ್ಟ್, ಬೀಜಿಂಗ್ ಒಲಿಂಪಿಕ್‌ನ 100 ಮೀಟರ್‌ನಲ್ಲಿ ತಮ್ಮದೇ ದಾಖಲೆಯನ್ನು ಮುರಿದು ಮತ್ತು 200 ಮೀಟರ್‌ನಲ್ಲಿ ಅಮೆರಿಕದ ಜಾನ್ಸನ್‌ರ 12 ವರ್ಷದ ದಾಖಲೆಯನ್ನು ಮುರಿದು ಅವಳಿ ಚಿನ್ನ ಗೆದ್ದ ಮೊದಲ ಒಲಿಂಪಿಕ್ ಓಟಾಗಾರನಾಗಿದ್ದಾರೆ.
400 ಮೀಟರ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದರೆ ಎಷ್ಟು ವೇಗದಿಂದ ಓಡ ಬಹುದು ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಅವರು, ತಾನು ಆ ಬಗ್ಗೆ ಯೋಚಿಸುತ್ತಿಲ್ಲ. ಈ ವಿಷಯಗಳನ್ನು ತಾನು ತನ್ನ ಕೋಚ್‌ಗಳಿಗೆ ಬಿಟ್ಟಿದ್ದೇನೆ ಎಂದು ಉತ್ತರಿಸಿದರು.
ಬೋಲ್ಟ್ ತಮ್ಮ ಗಾತ್ರ ಮತ್ತು ಬಲದ ಕಾರಣ ಅಮೆರಿಕ ಮೈಕೆಲ್ ಜಾನ್ಸನ್‌ರ 43.18 ಸೆಕೆಂಡುಗಳ ದಾಖಲೆಯನ್ನು ಮುರಿಯಲು ಸಾಧ್ಯ ಎಂದು ಜಮೈಕಾದ 400 ಮೀಟರ್ ಕೋಚ್ ಬೆರ್ಟ್‌ಲ್ಯಾಂಡ್ ಕೆಮರೋನ್ ತಿಳಿಸಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|