|
| ಇಬ್ಬರು ಒಲಿಂಪಿಕ್ ಪದಕವೀರರ ಪರೀಕ್ಷೆ ಧನಾತ್ಮಕ |
| ಬ್ರುಸ್ಸೆಲ್ಸ್, ಶನಿವಾರ, 6 ಸೆಪ್ಟೆಂಬರ್ 2008 ( 12:34 IST ) | |
ಒಲಿಂಪಿಕ್ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡ ಈರ್ವ ಬೆಲಾರಸ್ ಸ್ಪರ್ಧಾಳುಗಳು ಉದ್ದೀಪನಾ ಪರೀಕ್ಷೆಯಲ್ಲಿ ಧನಾತ್ಮಕರಾಗಿ ಹೊರಹೊಮ್ಮಿದ್ದು, ಅವರನ್ನು ತಾತ್ಕಾಲಿಕವಾಗಿ ಅಮಾನತು ಗೊಳಿಸಲಾಗಿದೆ ಎಂದು ಐಎಎಎಫ್ ಮುಖ್ಯಸ್ಥ ತಿಳಿಸಿದ್ದಾರೆ.
ಬೀಜಿಂಗ್‌ನಲ್ಲಿ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದ ವಾದಿಂ ಡೆವ್ಯಟೊವ್ಸ್ಕಿ ಮತ್ತು ಇವಾನ್ ಟ್ಸಿಖಾನ್, ಒಲಿಂಪಿಕ್ಸ್‌ನಲ್ಲಿ ಉದ್ದೀಪನಾ ಔಷಧಿ ಸೇವನೆ ಅಪರಾಧಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಒಲಿಂಪಿಕ್ಸಲ್ ಸಮಿತಿಯಿಂದ ತನಿಖೆಗೊಳಪಡುತ್ತಿದ್ದಾರೆ ಮತ್ತು ತಮ್ಮ ಪದಕವನ್ನು ಕಿತ್ತುಕೊಳ್ಳುವಾಗಿನ ಆತಂಕದಲ್ಲಿದ್ದಾರೆ.
ಅವರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಧನಾತ್ಮಕವಾಗಿ ಹೊರಹೊಮ್ಮಿದ್ದಾರೆ. ಅವರು 'ಎ' ಮತ್ತು 'ಬಿ' ಸ್ಯಾಂಪಲನ್ನು ಹೊಂದಿದ್ದಾರೆ ಎಂದು ಐಎಎಎಫ್ ಅಧ್ಯಕ್ಷ ಲಮೈನ್ ಡಿಯಾಕ್ ತಿಳಿಸಿದ್ದಾರೆ. ಬೀಜಿಂಗ್‌ನಲ್ಲಿ ತೆಗೆದುಕೊಳ್ಳಲಾದ ಇವರ ಸ್ಯಾಪಲ್‌ನಲ್ಲಿ ಟೆಸ್ಟೊಸ್ಟಿರೋನೆ ಎಂಬ ಅಂಶವಿರುವುದು ಕಂಡುಬಂದಿದೆ ಎಂದು ಮತ್ತೊರ್ವ ಐಎಎಎಫ್ ಅಧಿಕಾರಿ ತಿಳಿಸಿದ್ದಾರೆ.
ಐಎಎಎಫ್‌ಗೆ ಇದು ಸ್ಪಷ್ಟವಾಗಿದೆ ಎಂದು ಹೇಳಿದ ಡಿಯಾಕ್, ಇನ್ನು ಇದು ಐಒಸಿ ಹಂತಕ್ಕೆ ಹೋಗುವುದು ಎಂದು ಹೇಳಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಐಒಸಿ ಈ ಪ್ರಕರಣವನ್ನು ವಿಚಾರಣೆ ನಡೆಸುವ ನಿರೀಕ್ಷೆ ಇದೆ. ತನ್ನ ನಿರ್ಧಾರ ತೆಗೆದುಕೊಳ್ಳುವ ಮುನ್ನ ಐಒಸಿ ಸ್ವಲ್ಪ ಕಾಲ ಕಾಯಲಿದೆ ಎಂದು ಡಿಯಾಕ್ ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|