|
| ಚೆಸ್: ಟೊಪಲೋವ್ ವಿರುದ್ಧ ಆನಂದ್‌ಗೆ ಸೋಲು |
| ಬಿಲ್ಬಾವೊ, ಶನಿವಾರ, 6 ಸೆಪ್ಟೆಂಬರ್ 2008 ( 12:13 IST ) | |
ಬಿಲ್ಬಾವೊ ಗ್ರಾಂಡ್ ಸ್ಲ್ಯಾಮ್ ಫೈನಲ್ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ವಿಶ್ವನಾಥ್ ಆನಂದ್ ಬಲ್ಗೇರಿಯಾದ ವೆಸೆಲಿನ್ ಟೊಪಲೋವ್ ವಿರುದ್ಧ ಸೋಲು ಕಂಡಿದ್ದಾರೆ.
ಎಲ್ಲಾ ಮೂರು ನಿರ್ಣಾಯಕ ಪಂದ್ಯಗಳನ್ನು ಕಂಡಿರುವ ದಿನದ ಆಟದಲ್ಲಿ, 17 ವರ್ಷದ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್ ಎದುರಾಳಿ ಅಜೆರ್ಬೈಜನ್‌ರನ್ನು ಟೀಮೌರ್ ರಾಡ್ಜಬೋವ್‌ರನ್ನು ಸೋಲಿಸಿ ಅನಧಿಕೃತ ವಿಶ್ವ ನಂಬರ್ 1 ಆಗಿ ಹೊರಹೊಮ್ಮಿದರು.
ದಿನದ ಇತರ ಪಂದ್ಯದಲ್ಲಿ ಅರ್ಮೇನಿಯಾದ ಲೆವೋನ್ ಅರೋನಿಯನ್ ಎದುರಾಳಿ ಉಕ್ರೇನಿನ ವಸ್ಸಿಲಿ ಇವಾನ್ಚುಕ್‌ರನ್ನು ಸೋಲಿಸಿದರು. ಮಾಜಿ ವಿಶ್ವ ಚಾಂಪಿಯನ್ ಟೊಪಲೋವ್ ತಮ್ಮ ಪೂರ್ಣ ಅಂಕವನ್ನು ಉಳಿಸಿಕೊಂಡಿದ್ದು, ಕಾರ್ಲ್‌ಸನ್‌ರಿಂದ ಮುನ್ನಡೆ ಪಡೆದಿದ್ದಾರೆ.
ಟೂರ್ನಿಯಲ್ಲಿ ಇನ್ನೂ 6 ಸುತ್ತುಗಳು ಉಳಿದುಕೊಂಡಿದ್ದು, ಬಲ್ಗೇರಿಯಾ ಆಟಗಾರ 8 ಅಂಕಗಳನ್ನು ಗಳಿಸಿದ್ದರೆ, ಅರೋನಿಯನ್ ಆಟಗಾರ 5 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ರಾಡ್ಜಬೋವ್, ಇವಾನ್ಚುಕ್ ಮತ್ತು ಆನಂದ್ ಈವರೆಗೆ ಒಂದೂ ಜಯವನ್ನು ಗಳಿಸಿಲ್ಲ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|