|
| ಗೋಲ್ಡನ್ ಲೀಗ್: ಪೋವೆಲ್‌ರನ್ನು ಸೋಲಿಸಿದ ಬೋಲ್ಟ್ |
| ಬ್ರುಸ್ಸೆಲ್ಸ್, ಶನಿವಾರ, 6 ಸೆಪ್ಟೆಂಬರ್ 2008 ( 11:35 IST ) | |
ತಮ್ಮ ನಾಗಾಲೋಟವನ್ನು ಮುಂದುವರಿಸಿರುವ ತ್ರಿವಳಿ ಒಲಿಂಪಿಕ್ ಚಾಂಪಿಯನ್ ಉಸೈನ್ ಬೋಲ್ಟ್ ಗೋಲ್ಡನ್ ಲೀಗ್‌ನಲ್ಲಿ 9.77 ಸೆಕೆಂಡುಗಳ ಅವಧಿಯಲ್ಲಿ ಗುರಿ ಮುಟ್ಟಿ ತಮ್ಮ ನಿಕಟ ಪ್ರತಿಸ್ಪರ್ಧಿ ಅಸಫ ಪೋವೆಲ್ಲ್‌ರನ್ನು ಸೋಲಿಸಿ, 100 ಮೀಟರ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಜಮೈಕಾದ ಈ ಶರವೇಗಿ ಕಳೆದ ತಿಂಗಳ ಬೀಜಿಂಗ್‌ನಲ್ಲಿನ 9.69 ಸೆಕೆಂಡುಗಳ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗದಿದ್ದರೂ, ಇದು ಪೋವೆಲ್‌ರ ಸವಾಲನ್ನು ಅಂತ್ಯ ಗೊಳಿಸುವಲ್ಲಿ ಸಾಕಾಯಿತು. ತೇವ ಹಾಗೂ ಗಾಳಿಯುತ ವಾತಾವರಣದಲ್ಲಿ ಪೋವೆಲ್ 9.83 ಸೆಕೆಂಡುಗಳಲ್ಲಿ ತಮ್ಮ ಗುರಿ ಮುಟ್ಟುವಲ್ಲಿ ಸಾಧ್ಯವಾಯಿತು. ಜಮೈಕಾದ ನೆಸ್ಟಾ ಕಾರ್ಟರ್ 10.07 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನವನ್ನು ಪಡೆದರು.
ಅಸಫ ಒಬ್ಬ ಅದ್ಭುತ ವ್ಯಕ್ತಿ ಮತ್ತು ಸ್ಪರ್ಧೆಯ ಬಳಿಕ ತಾನು ಅವರಲ್ಲಿ ಸ್ನೇಹಪೂರ್ವಕವಾಗಿ ಮಾತನಾಡಿದೆ ಎಂದು ಹೇಳಿದ ಬೋಲ್ಟ್, ತಾವು ಟ್ರ್ಯಾಕ್‌ನಲ್ಲಿ ಪ್ರತಿಸ್ಪರ್ಧಿಗಳು, ಆದರೆ ಹೊರಗಡೆ ತಾವು ಉತ್ತಮ ಸ್ನೇಹಿತರಾಗಿದ್ದೇವೆ. ಗೆಲುವಿನೊಂದಿಗೆ ವರ್ಷವನ್ನು ಮುಕ್ತಾಯಗೊಳಿಸುವುದು ಕುಷಿ ಕೊಟ್ಟಿದೆ. ತಾನು ಕೆಟ್ಟ ಆರಂಭ ಕಂಡಿದ್ದರಿಂದ ಈ ತೇವ ವಾತಾವರಣದಲ್ಲಿ 9.77 ಸೆಕೆಂಡುಗಳಿಗೇ ತೃಪ್ತಿ ಪಡಬೇಕಾಯಿತು. ಉತ್ತಮ ವಾತಾವರಣವಿದ್ದಿದ್ದರೆ ತಾನು ಇದಕ್ಕಿಂತ ವೇಗದ ಅವಧಿಯಲ್ಲಿ ಗುರಿ ಮುಟ್ಟುತ್ತಿದ್ದೆ ಎಂದು ಹೇಳಿದರು.
ಜುಲೈನಲ್ಲಿನ ಸ್ಟಾಕ್‌ಹೋಮ್‌ನಲ್ಲಿ ಬೋಲ್ಟ್‌ರನ್ನು ಮಣಿಸಿದ್ದ ಪೋವೆಲ್ ಮಾತನಾಡಿ, ತಾನು ಉತ್ತಮ ಆರಂಭ ಕಂಡಿದ್ದೆ, ಆದರೆ ಉಸೇನ್ ತನಗಿಂತ ಉತ್ತಮ ಪ್ರದರ್ಶನ ನೀಡಿದರು. ತಾನು ಬೋಲ್ಟ್‌ಗೆ ಬಹಳ ನಿಕಟದಲ್ಲಿದ್ದೆ ಆದರೂ ಅವರು ತನ್ನನ್ನು ಸೋಲಿಸಿದರು. ಇನ್ನು ತಾನು ಕಠಿಣ ಅಭ್ಯಾಸ ನಡೆಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|