|
| ಸೆರೇನಾ ಯುಎಸ್ ಒಪನ್ ಫೈನಲಿಗೆ |
| ನ್ಯೂಯಾರ್ಕ್, ಶನಿವಾರ, 6 ಸೆಪ್ಟೆಂಬರ್ 2008 ( 11:07 IST ) | |
ತಮ್ಮ ಅಕ್ಕ ವೀನಸ್‌ನ ಕೆಲ ಕೋಚಿಂಗ್ ಟಿಪ್ಸ್‌ನ್ನು ಅಳವಡಿಸಿದ ಸೆರೇನಾ ವಿಲಿಯಮ್ಸ್ ಸೆಮಿ-ಫೈನಲಿನಲ್ಲಿ 6ನೇ ಶ್ರೇಯಾಂಕಿತೆ ದಿನಾರ ಸಫೀನಾರನ್ನು 6-3, 6-2ದಲ್ಲಿ ಸೋಲಿಸಿ ಯುಎಸ್ ಒಪನ್ ಫೈನಲ್ ಪ್ರವೇಶ ಪಡೆದಿದ್ದಾರೆ.
ವೀನಸ್ ತಮಗೆ ಅನೇಕ ಟಿಪ್ಸ್‌ನ್ನು ನೀಡಿದರು ಎಂದು ಪಂದ್ಯದ ಬಳಿಕ ಸೆರೇನಾ ಹೇಳಿದರು. ವೀನಸ್ ವಿಲಿಯಮ್ಸ್ ಆಟಗಾರರ ಬಾಕ್ಸ್‌ನಿಂದ ತಂಗಿಯನ್ನು ಹುರುದುಂಬಿಸುತ್ತಿದ್ದರು. ಏನು ಮಾಡುವುದು ಮತ್ತು ಹೇಗೆ ಆಡುವುದು ಎಂಬುದರ ಬಗ್ಗೆ ಆಕೆ ತನಗೆ ಕೆಲ ಸಲಹೆಯನ್ನು ನೀಡಿದರು ಎಂದು ತಿಳಿಸಿದರು.
ವೀನಸ್ ನಿಜವಾಗಿಯೂ ಬುದ್ಧಿವಂತಿಕೆಯ ಆಟಗಾರ್ತಿಯಾಗಿದ್ದು, ಆಕೆಗೆ ತಮ್ಮ ಎದುರಾಳಿಯನ್ನು ಉತ್ತಮವಾಗಿ ಗ್ರಹಿಸಬಲ್ಲ ಕಲೆ ಇದೆ. ಆಕೆ ತನಗೆ ಯಾವ ರೀತಿ ಆಡಬೇಕು, ಹೇಗೆ ಆಡ ಬೇಕು ಮತ್ತು ಏನನ್ನು ನಿರೀಕ್ಷಿಸ ಬೇಕು ಎಂಬುದರ ಬಗ್ಗೆ ಕೆಲ ಸಲಹೆ ನೀಡಿದರು ಎಂದು ವಿವರಿಸಿದರು.
ವೀನಸ್ ತನ್ನ ಅತ್ಯಂತ ಕಠಿಣ ಪ್ರತಿಸ್ಪರ್ಧಿಯಾಗಿದ್ದಾರೆ. ತನಗೆ ದಿನರಾರ ಬಗ್ಗೆ ಏನು ತಿಳಿದಿಲ್ಲ. ಆಕೆ ನಿಜವಾಗಲೂ ಅದ್ಭುತವಾಗಿ ಆಡಿದರು ಎಂಬುದು ತನ್ನ ಅನಿಸಿಕೆ. ಆದರೆ ತನ್ನ ಪ್ರಕಾರ ವೀನಸ್ ಓರ್ವ ವಿಸ್ಮಯ ಆಟಗಾರ್ತಿಯಾಗಿದ್ದಾರೆ ಎಂದು ತಿಳಿಸಿದರು.
ನಾಲ್ಕನೇ ಶ್ರೇಯಾಂಕಿತೆ ಸೆರೇನಾರ ದಿನಾರರ ವಿರುದ್ಧದ ಗೆಲುವು ಅವರನ್ನು 2002ರ ನಂತರ ಮೊದಲ ಭಾರಿಗೆ ಯುಎಸ್ ಒಪನ್ ಫೈನಲ್‌ಗೆ ಕೊಂಡೊಯ್ದಿದೆ. ಸರ್ಬಿಯಾದ ಜೆಲೆನಾ ಜಂಕೋವಿಕ್ ವಿರುದ್ಧದ ಚಾಂಪಿಯನ್‌ಶಿಪ್ ಗೆಲುವು ಅವರನ್ನು 5 ವರ್ಷಗಳ ಬಳಿಕ ಮತ್ತೊಮ್ಮೆ ನಂಬರ್ 1 ಶ್ರೇಯಾಂಕಕ್ಕೆ ಕೊಂಡೊಯ್ಯಲಿದೆ.
ಸದ್ಯಕ್ಕೆ ನಂಬರ್ 1 ತನ್ನ ಗುರಿಯಲ್ಲ ಎಂದು ಹೇಳಿದ ಸೆರೇನಾ, ಒಂದು ವೇಳೆ ತಾನೂ ಟೂರ್ನಮೆಂಟುಗಳನ್ನು ಆಡುತ್ತಿದ್ದರೆ ಅದನ್ನು ಅಂತಿಮವಾಗಿ ಗಳಿಸಲಿದ್ದೇನೆ ಎಂಬುದು ತನಗೆ ತಿಳಿದಿದೆ. ಗ್ರಾಂಡ್ ಸ್ಲ್ಯಾಮ್‌ನ್ನು ಗೆಲ್ಲುವುದನ್ನು ತಾನು ಬಯಸುತ್ತೇನೆ ಮತ್ತು ಆರೋಗ್ಯವಾಗಿ ಉಳಿಯಲು ಇಚ್ಚಿಸುತ್ತೇನೆ. ಶ್ರೇಯಾಂಕ ಖಂಡಿತವಾಗಿಯೂ ಬರುವುದು ಎಂಬುದು ತನ್ನ ಅನಿಸಿಕೆ ಎಂದು ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|