|
| ತ್ರಿಕೋನ ಸರಣಿ ಪ್ರಸ್ತಾಪಕ್ಕೆ ದ.ಆಫ್ರಿಕಾ ನಕಾರ |
| ಕರಾಚಿ, ಶನಿವಾರ, 6 ಸೆಪ್ಟೆಂಬರ್ 2008 ( 10:34 IST ) | |
ಪಾಕಿಸ್ತಾನ ಮತ್ತು ಶ್ರೀಲಂಕಾ ಒಳಗೊಂಡ ತ್ರಿಕೋನ ಸರಣಿಯ ಆತಿಥ್ಯ ವಹಿಸುವಾಗಿನ ಪ್ರಸ್ತಾಪವನ್ನು ದಕ್ಷಿಣ ಆಫ್ರಿಕಾ ತಿರಸ್ಕರಿಸಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಮತ್ತೊಂದು ಹಿನ್ನಡೆ ಪಡೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸುದೀರ್ಘ ಸರಣಿಯ ನಂತರ ತಮ್ಮ ಆಟಗಾರರಿಗೆ ಬಿಡುವಿನ ಅಗತ್ಯವಿರುವ ಕಾರಣ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಈ ಪ್ರಸ್ತಾಪವನ್ನು ನಿರಾಕಿರಸಿದೆ ಎಂದು ಪಿಸಿಬಿಯಲ್ಲಿನ ಮೂಲವೊಂದು ತಿಳಿಸಿದೆ.
ಸೆಪ್ಟೆಂಬರ್ ದ್ವಿತೀಯಾರ್ಧದಲ್ಲಿ ತ್ರಿಕೋನ ಸರಣಿಯ ಆತಿಥ್ಯ ವಹಿಸುವಂತೆ ಪಿಸಿಬಿ ಸಿಎಸ್ಎಗೆ ಪ್ರಸ್ತಾಪ ಮಾಡಿತ್ತು. ಸೆಪ್ಟೆಂಬರ್ 12-28 ರವರೆಗೆ ನಡೆಯ ಬೇಕಿದ್ದ ಚಾಂಪಿಯನ್ಸ್ ಟ್ರೋಫಿಯನ್ನು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟ ಬಳಿಕ ಪಾಕಿಸ್ತಾನ ಕೆಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ತವಕದಲ್ಲಿದ್ದಾರೆ.
ಈ ನಿಟ್ಟಿನಲ್ಲಿ ಪಾಕಿಸ್ತಾನ ಸರಣಿಯೊಂದರ ಆತಿಥ್ಯ ವಹಿಸುವಂತೆ ದಕ್ಷಿಣ ಆಫ್ರಿಕಾವನ್ನು ಮನವಿ ಮಾಡಿತ್ತು. ಈ ಸರಣಿಯಿಂದ ಪಿಸಿಬಿ ಸುಮಾರು 1 ದಶಲಕ್ಷ ಡಾಲರ್ ಲಾಭ ಗಳಿಸುತ್ತಿತ್ತು. ಆದರೆ ದಕ್ಷಿಣ ಆಫ್ರಿಕಾದ ಈ ನಿರಾಕರಣೆಯಿಂದ ಪಿಸಿಬಿ ಅಧಿಕಾರಿಗಳು ಈಗ ಅಬು ದಬಿ ಅಥವಾ ತವರು ನೆಲದಲ್ಲೇ ತ್ರಿಕೋನ ಸರಣಿ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಈ ನಿಟ್ಟಿನಲ್ಲಿನ ನಿರ್ಧಾರವನ್ನು ಮುಂದಿನ ವಾರ ತೆಗೆದುಕೊಳ್ಳಲಾಗುವುದು ಎಂದು ಪಿಸಿಬಿ ತಿಳಿಸಿದೆ. ಇದೇ ವೇಳೆ, ದಕ್ಷಿಣ ಆಫ್ರಿಕಾ ಕೋಚ್ ಮಿಕ್ಕಿ ಆರ್ಥರ್ ಸಿಎಸ್ಎಯ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ವರ್ಷ ಅನೇಕ ಮಂದಿ ಹಿರಿಯ ಆಟಗಾರರು ಹಲವು ಕ್ರಿಕೆಟನ್ನು ಆಡಿದ್ದು, ಇದು ಅವರ ಮೇಲೆ ಪ್ರಭಾವ ಬೀರಿದೆ ಮತ್ತು ಅವರಿಗೆ ಬಿಡುವಿನ ಅಗತ್ಯವಿದೆ ಎಂದು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|