ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಯುಸ್ ಒಪನ್ ಡಬಲ್ಸ್ ಫೈನಲ್: ಪೇಸ್-ಡ್ಲೌಹಿಗೆ ಸೋಲು
ನ್ಯೂಯಾರ್ಕ್, ಶನಿವಾರ, 6 ಸೆಪ್ಟೆಂಬರ್ 2008   ( 09:34 IST )
ಲಿಯಾಂಡರ್ ಪೇಸ್ ಮತ್ತು ಅವರ ಜೆಕ್ ಸಹವರ್ತಿ ಲುಕಾಸ್ ಡ್ಲೌಹಿ ಜೋಡಿ ಯುಎಸ್ ಒಪನ್‌ನ ಪುರುಷರ ಡಬಲ್ಸ್ ಫೈನಲಿನಲ್ಲಿ ಅಮೆರಿಕ ಸಹೋದರರಾದ ಮೈಕ್ ಮತ್ತು ಬಾಬ್ ಬ್ರಿಯಾನ್ ವಿರುದ್ಧ 7-6, 7-6ರಲ್ಲಿ ಸೋಲು ಕಾಣುವ ಮೂಲಕ, ಪೇಸ್‌ಗೆ 1999ರ ವಿಂಬಲ್ಡನ್ ಸಾಧನೆಯನ್ನು ಪುನರುಚ್ಚರಿಸಲು ಸಾಧ್ಯವಾಗಲಿಲ್ಲ.

ಇದು ಬ್ರಿಯಾನ್ ಸಹೋದರರ 6ನೇ ಗ್ರಾಂಡ್ ಸ್ಲ್ಯಾಮ್ ಮತ್ತು ಎರಡನೇ ಯುಎಸ್ ಒಪನ್ ಕಿರೀಟವಾಗಿದೆ. ಟೂರ್ನಿಯಾದ್ಯಂತ ಒಂದೂ ಸೆಟ್ ಸೋಲು ಕಾಣದ ಈ ಜೋಡಿ ಇದಕ್ಕೂ ಮುಂಚೆ 2003ರ ರೋಲ್ಯಾಂಡ್ ಗರ್ರೋಸ್, 2005 ಯುಎಸ್ ಒಪನ್, 2006ರ ವಿಂಬಲ್ಡನ್ ಮತ್ತು 2006, 2007ರ ಆಸ್ಟ್ರೇಲಿಯಾ ಒಪನ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಈ ಸೋಲು ಪೇಸ್‌ರ ಯುಎಸ್ ಒಪನ್ ಡಬಲ್ಸ್ ಡಬಲ್ಸ್ ಅವಕಾಶವನ್ನು ಕಸಿದುಕೊಂಡಿತು. ಪೇಸ್ ಈ ಮುಂಚೆ 1999 ವಿಂಬಲ್ಡನ್ ಮತ್ತು ಪ್ರೆಂಚ್ ಒಪನ್‌ನಲ್ಲಿ ಮಿಶ್ರ ಡಬಲ್ಸ್ ಮತ್ತು ಪುರುಷರ ಡಬಲ್ಸ್‌ ಕಿರೀಟವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದರು.

ಪಂದ್ಯದ ಬಳಿಕ ಮಾತನಾಡಿದ ಪೇಸ್, ತಾನು ಯುವ ವಯಸ್ಸಿನಲ್ಲಿದ್ದಾಗ ಪುರುಷರ ಮತ್ತು ಮಿಶ್ರ ಡಬಲ್ಸ್‌ನ ಎರಡೂ ಫೈನಲ್‌ಗೆ ತಲುಪಿದ್ದೆನು. ಆದರೆ 35ರ ಈ ವಯಸ್ಸಿನಲ್ಲಿ ಅದನ್ನು ಮರುಕಳಿಸಿರುವುದು ತನಗೆ ಸಂತೋಷ ನೀಡಿದೆ ಎಂದು ವಿವರಿಸಿದ್ದಾರೆ.

ತಾನು 5 ಒಲಿಂಪಿಕ್‌ನಲ್ಲಿ ಆಡುತ್ತೇನೆ ಎಂದು ಯೋಚಿಸಿರಲಿಲ್ಲ ಆದರೆ ತಾನು ಅದನ್ನು ಮಾಡಿದೆ. ತಾನು ಇಷ್ಟು ಗ್ರಾಂಡ್ ಸ್ಲ್ಯಾಮ್‌ ಗೆಲ್ಲುತ್ತೇನೆ ಎಂಬುದನ್ನು ತಾನು ಯೋಚಿಸಿರಲೇ ಇಲ್ಲ ಆದರೆ ತಾನು ಅದನ್ನು ಮಾಡಿದೆ. ತಾನು ಈ ಕ್ರೀಡೆಯ ಬಗ್ಗೆ ಗಾಢಾನುರಕ್ತನಾಗಿದ್ದೇನೆ ಎಂದು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಂಕಜ್ ಅಡ್ವಾಣಿಗೆ ಮತ್ತೊಮ್ಮೆ ವಿಶ್ವ ಬಿಲಿಯರ್ಡ್ಸ್ ಕಿರೀಟ
ಚೆಸ್: ಡ್ರಾ ಸಾಧಿಸಿದ ಹಂಪಿ, ಹರಿಕಾ
ಸಿಮಂಡ್ಸ್ ಗೈರು ಉದ್ವಿಗ್ನತೆಯನ್ನು ತಗ್ಗಿಸಬಹುದು: ಕ್ರಸ್ಟನ್
ಚೆಸ್: ಮತ್ತೆ ಡ್ರಾ ಕಂಡ ಆನಂದ್
ಈಜು ಚಾಂಪಿಯನ್ ಸ್ಪೆಫೆನ್ ಕಣ್ಣು ರೋಮ್ ವಿಶ್ವ ಕಿರೀಟದತ್ತ
ಟೆನ್ನಿಸ್‌ಗೆ ಅಲಿಶಿಯಾ ಮೊಲಿಕ್ ನಿವೃತ್ತಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...