ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಚೆಸ್: ಡ್ರಾ ಸಾಧಿಸಿದ ಹಂಪಿ, ಹರಿಕಾ
ನಲ್ಚಿಕ್, ಶುಕ್ರವಾರ, 5 ಸೆಪ್ಟೆಂಬರ್ 2008   ( 14:07 IST )
ಗ್ರಾಂಡ್‌ಮಾಸ್ಟರ್ ಕೊನೇರು ಹಂಪಿ ವಿಶ್ವ ಮಹಿಳಾ ಚೆಸ್ ಚಾಂಪಿಯನ್‌ಶಿಪ್‌ನ ಮೊದಲ ಪ್ರೀ ಕ್ವಾಟರ್ಸ್ ಫೈನಲಿನಲ್ಲಿ ಕರಿ ಕಾಯಿಯೊಂದಿಗೆ ಎದುರಾಳಿ ಹಂಗೇರಿಯಾದ ಹಾಂಗ್ ತಾನ್ಹ್ ಟ್ರಾಂಗ್ ಎದುರು ಸುಲಭ ಡ್ರಾ ಸಾಧಿಸಿದರು.

ಎರಡನೇ ಸುತ್ತಿನಲ್ಲಿ ಬೈ ಪಡೆದು 16ನೇ ಸುತ್ತಿಗೆ ಪ್ರವೇಶ ಪಡೆದ ಭಾರತದ ಅಗ್ರ ಶ್ರೇಯಾಂಕಿತೆ ಹಂಪಿ, ಟ್ರಾಂಗ್‌ರ ನೀರಸ ಪ್ರದರ್ಶನದ ಬಳಿಕ ತಮ್ಮನ್ನು ತಾವು ಒತ್ತಡಕ್ಕೀಡು ಮಾಡಲಿಲ್ಲ. ಪಂದ್ಯದ ಫಲಿತಾಂಶದಿಂದ ಕೊನೇರು ಹಂಪಿ ಸಂತೋಷ ಗೊಂಡಂತೆ ಕಂಡುಬಂತು.

17ನೇ ಮೂವ್‌ನಲ್ಲಿ ರಾಣಿಗಳು ಮಣೆಯಿಂದ ಕೆಳಗಿಳಿದವು ತದನಂತರ ಪಂದ್ಯದ ಫಲಿತಾಂಶದ ಕುರಿತು ತುಸು ಅನುಮಾನ ವ್ಯಕ್ತವಾಯಿತು. ತರುವಾಯ ಶೀಘ್ರದಲ್ಲಿ ಇನ್ನಷ್ಟು ವಿನಿಮಯ ನಡೆಯಿತು. ನಂತರ ಆಟಗಾರರು ರೂಕ್ ಮತ್ತು ಪಾನ್ ಅಂತ್ಯಆಟಕ್ಕೆ ತಲುಪಿದರು. 31 ಮೂವ್‌ಗಳ ನಂತರ ಯುದ್ಧವಿರಾಮಕ್ಕೆ ಸಹಿ ಹಾಕಲಾಯಿತು.

ಮತ್ತೊರ್ವ ಭಾರತೀಯ ಆಟಗಾರ್ತಿ ಕಿರಿಯ ಹುಡುಗಿಯರ ವಿಶ್ವ ಚಾಂಪಿಯನ್ ಡಿ ಹರಿಕಾ ಎದುರಾಳಿ ಅರ್ಮೇನಿಯಾದ ಲಿಲಿಟ್ ವಿರುದ್ಧದ ತಮ್ಮ ಮೂರನೇ ಸುತ್ತಿನ ಪಂದ್ಯವನ್ನು ಡ್ರಾ ಮಾಡಿದರು. ಹರಿಕಾ ತಮ್ಮ ಹೆಚ್ಚುವರಿ ಕಾಯಿಯೊಂದಿಗೆ ತೀವ್ರ ಪ್ರತಿರೋಧ ತೋರಿದರು ಆದರೆ ಲಿಲಿಟ್ ದೃಢ ನಿಶ್ಚಿತರಾಗಿದ್ದರು. 83ನೇ ಮೂವ್‌ಗಳ ನಂತರ ಅಂಕವನ್ನು ಪರಸ್ಪರ ವಿಭಜಿಸಲು ಈರ್ವರೂ ಒಪ್ಪಿಕೊಂಡರು.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಿಮಂಡ್ಸ್ ಗೈರು ಉದ್ವಿಗ್ನತೆಯನ್ನು ತಗ್ಗಿಸಬಹುದು: ಕ್ರಸ್ಟನ್
ಚೆಸ್: ಮತ್ತೆ ಡ್ರಾ ಕಂಡ ಆನಂದ್
ಈಜು ಚಾಂಪಿಯನ್ ಸ್ಪೆಫೆನ್ ಕಣ್ಣು ರೋಮ್ ವಿಶ್ವ ಕಿರೀಟದತ್ತ
ಟೆನ್ನಿಸ್‌ಗೆ ಅಲಿಶಿಯಾ ಮೊಲಿಕ್ ನಿವೃತ್ತಿ
ಮುಂದಿನ ಹೆಜ್ಜೆ ನಿರ್ಧರಿಸಲು ಕಾಲಾವಕಾಶದ ಬೇಕು: ಸಿಮಂಡ್ಸ್
ಯುಎಸ್ ಒಪನ್ ಮಿಶ್ರ ಡಬಲ್ಸ್ ಕಿರೀಟ ಪೇಸ್-ಬ್ಲ್ಯಾಕ್ ಮುಡಿಗೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...