ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಸಿಮಂಡ್ಸ್ ಗೈರು ಉದ್ವಿಗ್ನತೆಯನ್ನು ತಗ್ಗಿಸಬಹುದು: ಕ್ರಸ್ಟನ್
ಮೆಲ್ಬೋರ್ನ್, ಶುಕ್ರವಾರ, 5 ಸೆಪ್ಟೆಂಬರ್ 2008   ( 13:18 IST )
ಆಂಡ್ರ್ಯೂ ಸಿಮಂಡ್ಸ್‌ರ ಸಂಭಾವ್ಯ ಗೈರಿನಿಂದ ಭಾರತಕ್ಕೆ ಮುಂದಿನ ತಿಂಗಳು ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ತಂಡ ಅನುಭವದ ಕೊರತೆಯನ್ನು ಎದುರಿಸಬಹುದು ಮತ್ತು ಇದೇ ವೇಳೆ, ಇದು ಉನ್ನತ ದರ್ಜೆಯ ಸರಣಿಯಲ್ಲಿನ ಉದ್ವಿಗ್ನತೆಯನ್ನು ಕಡಮೆಗೊಳಿಸಬಹುದು ಎಂಬುದು ಕೋಚ್ ಗ್ಯಾರಿ ಕ್ರಸ್ಟನ್‌ರ ಅಭಿಪ್ರಾಯ.

ಸಿಮಂಡ್ಸ್ ಮತ್ತು ಭಾರತೀಯ ಆಟಗಾರರು ಹಾಗೂ ಪ್ರೇಕ್ಷಕರ ನಡುವಿನ ಸಂಬಂಧ ಅಷ್ಟಕಷ್ಟೇ. ಭಾರತದಲ್ಲಿ ಪ್ರೇಕ್ಷಕರ ಕುಚೋದ್ಯ ಮತ್ತು ಪರಿಹಾಸ್ಯಕ್ಕೊಳಗಾಗಿರುವ ಅವರು, ಕಳೆದ ಬೇಸುಗೆಯ ಹರ್ಭಜನ್ ಸಿಂಗ್ ಜತೆಗಿನ ಸಿಡ್ನಿ ಜನಾಂಗೀಯ ಬಿಕ್ಕಟ್ಟಿನಲ್ಲಿನ ಪ್ರಮುಖ ವ್ಯಕ್ತಿಯಾಗಿದ್ದರು.

ವಿಚಲಿತರಾಗಿರುವ ಆಲ್-ರೌಂಡರ್ ಸಿಮಂಡ್ಸ್ ಭಾರತ ಪ್ರವಾಸದಿಂದ ಹೊರಗುಳಿಯುವ ಸಾಧ್ಯತೆ ಇದ್ದು, ಕ್ರಸ್ಟನ್ ಅಭಿಪ್ರಾಯದಂತೆ, ಇದು ಭಾರತ-ಆಸಿಸ್ ಸರಣಿ ಸುತ್ತಲಿನ ಉದ್ವಿಗ್ನತೆಯನ್ನು ಕಡಮೆ ಗೊಳಿಸಲು ಸಹಕರಿಸಲಿದೆ.

ಅವರ ಸುತ್ತ ಭಾರೀ ಊಹಾಪೋಹಳು ಇದ್ದು, ಅವರೊಬ್ಬರು ಗುಣಮಟ್ಟದ ಆಟಗಾರರಾಗಿದ್ದಾರೆ ಮತ್ತು ಕಳೆದ ಸರಣಿಯಲ್ಲಿನ ಘಟನೆಗಳಿಂದ ಅನೇಕ ಉದ್ವಿಗ್ನತೆ ಸೃಷ್ಟಿಯಾಗಿದೆ ಎಂಬ ಕ್ರಸ್ಟನ್ ಉಲ್ಲೇಖ ದಿ ಏಜ್‌ನಲ್ಲಿ ವರದಿಯಾಗಿದೆ.

ಅವರಿಲ್ಲದಿರುವುದರಿಂದ ಅದು ತಗ್ಗುವುದೇ? ಅದು ಉತ್ತಮ ವಾತಾವರಣವನ್ನು ಸೃಷ್ಠಿಸುವುದೇ? ಎಂಬ ಬಗೆಗಿನ ಉತ್ತರ ತನಗೆ ತಿಳಿದಿಲ್ಲ. ಆದರೆ ಇದು ಟೆಸ್ಟ್ ಸರಣಿಯ ಹೊರಹೊಳಪನ್ನು ತೆಗೆಯುವುದಿಲ್ಲ ಎಂಬುದು ತನ್ನ ಅನಿಸಿಕೆ ಎಂದು ತಿಳಿಸಿದ್ದಾರೆ. ವ್ಯಕ್ತಿಗಿಂತ ಕ್ರೀಡೆ ಯಾವತ್ತೂ ಶ್ರೇಷ್ಠ ಎಂಬುದನ್ನು ಎಲ್ಲರೂ ಅರಿತುಕೊಳ್ಳಲೇ ಬೇಕು ಎಂದು ಕ್ರಸ್ಟನ್ ಹೇಳಿದ್ದಾರೆ.

ಸಿಮಂಡ್ಸ್ ಪ್ರವಾಸದಿಂದ ಹೊರಗುಳಿಯಬೇಕೇ ಎಂಬ ಪ್ರಶ್ನೆಗೆ ಕ್ರಸ್ಟನ್, ಆಸ್ಟ್ರೇಲಿಯಾ ಅನನುಭವಿ ಆಟಾಗರರನ್ನು ಸಿದ್ಧಗೊಳಿಸುವುದಾದರೆ, ಭಾರತ ಅದರ ಲಾಭ ಪಡೆಯಲು ಎಲ್ಲವನ್ನೂ ಪ್ರಯತ್ನಿಸುತ್ತದೆ ಎಂದು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚೆಸ್: ಮತ್ತೆ ಡ್ರಾ ಕಂಡ ಆನಂದ್
ಈಜು ಚಾಂಪಿಯನ್ ಸ್ಪೆಫೆನ್ ಕಣ್ಣು ರೋಮ್ ವಿಶ್ವ ಕಿರೀಟದತ್ತ
ಟೆನ್ನಿಸ್‌ಗೆ ಅಲಿಶಿಯಾ ಮೊಲಿಕ್ ನಿವೃತ್ತಿ
ಮುಂದಿನ ಹೆಜ್ಜೆ ನಿರ್ಧರಿಸಲು ಕಾಲಾವಕಾಶದ ಬೇಕು: ಸಿಮಂಡ್ಸ್
ಯುಎಸ್ ಒಪನ್ ಮಿಶ್ರ ಡಬಲ್ಸ್ ಕಿರೀಟ ಪೇಸ್-ಬ್ಲ್ಯಾಕ್ ಮುಡಿಗೆ
ಯುಎಸ್ ಒಪನ್: ಡ್ಜೊಕೊವಿಕ್ ಸೆಮೀಸ್‌ಗೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...