ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಚೆಸ್: ಮತ್ತೆ ಡ್ರಾ ಕಂಡ ಆನಂದ್
ಸ್ಪೈನ್, ಶುಕ್ರವಾರ, 5 ಸೆಪ್ಟೆಂಬರ್ 2008   ( 12:52 IST )
ವಿಶ್ವ ಚಾಂಪಿಯನ್ ವಿಶ್ವನಾಥ್ ಆನಂದ್ ಬಿಲ್ಬಾವೊ ಗ್ರಾಂಡ್ ಸ್ಲ್ಯಾಮ್ ಫೈನಲಿನ ಮೂರನೇ ಸುತ್ತಿನಲ್ಲಿ ಎದುರಾಳಿ ಅರ್ಮೇನಿಯಾದ ಲೆವೋನ್ ಆರೋನಿಯನ್ ವಿರುದ್ಧ ಡ್ರಾ ಸಾಧಿಸುವ ಮೂಲಕ ಒಂದರಮೇಲೊಂದರಂತೆ ತಮ್ಮ ಮೂರನೇ ಡ್ರಾವನ್ನು ಸಾಧಿಸಿದರು.

ಹೊಸ ಅಂಕ ವ್ಯವಸ್ಥೆಯಲ್ಲಿ ಆನಂದ್ ಮೂರು ಅಂಕಗಳೊಂದಿಗೆ ಜಂಟಿ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಈ ಹೊಸ ಅಂಕದ ಪ್ರಕಾರ ಗೆಲುವಿಗೆ 3 ಅಂಕ ಮತ್ತು ಡ್ರಾ ಸಾಧಿಸಿದರೆ ಒಂದು ಅಂಕ ನೀಡಲಾಗುತ್ತದೆ. ಪ್ರಸಕ್ತ ಆನಂದ್ ಟೂರ್ನಿಯ ಮುಂಚೂಣಿಯಲ್ಲಿನ ಬಲ್ಗೇರಿಯಾದ ವೆಸೆಲಿನ್ ಟೊಪಲೋವ್‌ರಿಂದ 2 ಅಂಕ ದೂರ ಇದ್ದರೆ, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ರಿಂದ ಒಂದು ಅಂಕ ಹಿಂದೆ ಇದ್ದಾರೆ.

ಇತರ ಎರಡು ಪಂದ್ಯಳಲ್ಲಿ , ಟೊಪಲೋವ್ ಎದುರಾಳಿ ಕಾರ್ಲ್‌ಸನ್‌ರನ್ನು ಸೋಲಿಸಿದರೆ, ಅಜೆರ್ಬೈಜಾನಿ ಟೀಮೌರ್ ರಾಡ್ಜಬೋವ್ ಎದುರಾಳಿ ಉಕ್ರೇನಿನ ವಾಸ್ಸಿಲಿ ಇವಾನ್ಚುಕ್ ಎದುರು ಡ್ರಾ ಸಾಧಿಸಿದರು.

ಈ ಟೂರ್ನಿಯಲ್ಲಿ ಇನ್ನೂ 7 ಸುತ್ತುಗಳು ಆಡಬೇಕಾಗಿದ್ದು, ಟೊಪಲೋವ್ ಒಂದು ಜಯ ಮತ್ತು ಡ್ರಾ ನೊಂದಿಗೆ 5 ಅಂಕಗಳನ್ನು ಹೊಂದಿದ್ದರೆ, ಕಾರ್ಲ್‌ಸನ್ ಒಂದು ಜಯ ಮತ್ತು ಒಂದು ಸೋಲು ಹಾಗೂ ಒಂದು ಡ್ರಾ ನೊಂದಿಗೆ 4 ಅಂಕ ಗಳಿಸಿದ್ದಾರೆ. ಆನಂದ್ ಇವಾನ್ಚುಕ್ ಮತ್ತು ರಾಡ್ಜಬೋವ್ ಜತೆ ಮೂರು ಅಂಕಗಳೊಂದಿಗೆ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಅರೋನಿಯನ್ ಎರಡು ಡ್ರಾಗಳೊಂದಿಗೆ 2 ಅಂಕ ಗಳಿಸಿ ಕೆಳ ಸ್ಥಾನದಲ್ಲಿದ್ದಾರೆ.

ಟೂರ್ನಮೆಂಟಿನಲ್ಲಿನ ತಮ್ಮ ಮೊದಲ ಕರಿ ಕಾಯಿಯನ್ನು ಆಡುತ್ತಿರುವ ಆನಂದ್ ಸ್ಲಾವ್ ರಕ್ಷಣಾ ಪಂದ್ಯದಲ್ಲಿ ಅರೋನಿಯನ್ ವಿರುದ್ಧ ಸದೃಢ ಪ್ರದರ್ಶನವನ್ನು ನೀಡಿದರಾದರೂ, ಎದುರಾಳಿ ಅರೋನಿಯನ್ ತೀವ್ರ ಪತಿರೋಧ ತೋರಿ ಅಂತಿಮವಾಗಿ ಡ್ರಾಗೆ ತೃಪ್ತಿ ಪಡಬೇಕಾಯಿತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಈಜು ಚಾಂಪಿಯನ್ ಸ್ಪೆಫೆನ್ ಕಣ್ಣು ರೋಮ್ ವಿಶ್ವ ಕಿರೀಟದತ್ತ
ಟೆನ್ನಿಸ್‌ಗೆ ಅಲಿಶಿಯಾ ಮೊಲಿಕ್ ನಿವೃತ್ತಿ
ಮುಂದಿನ ಹೆಜ್ಜೆ ನಿರ್ಧರಿಸಲು ಕಾಲಾವಕಾಶದ ಬೇಕು: ಸಿಮಂಡ್ಸ್
ಯುಎಸ್ ಒಪನ್ ಮಿಶ್ರ ಡಬಲ್ಸ್ ಕಿರೀಟ ಪೇಸ್-ಬ್ಲ್ಯಾಕ್ ಮುಡಿಗೆ
ಯುಎಸ್ ಒಪನ್: ಡ್ಜೊಕೊವಿಕ್ ಸೆಮೀಸ್‌ಗೆ
ಪೆಡರರ್ ಯುಎಸ್ ಒಪನ್ ಸೆಮೀಸ್‌ಗೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಸೋನಿಯಾ ಇದ್ದ ವಿಮಾನ ತುರ್ತು ಭೂಸ್ಪರ್ಶ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕಂಡು ಬಂದ ತಾಂತ್ರಿಕ ...
ಸರ್ಕಾರಕ್ಕೀಗ ನೂರರ ಸಂಭ್ರಮ
ಸಿಎಂ ವಾಪಸ್: ಇಂದು ಸಚಿವ ಸಂಪುಟ ಸಭೆ
ಮನರಂಜನೆ
ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...