|
| ಈಜು ಚಾಂಪಿಯನ್ ಸ್ಪೆಫೆನ್ ಕಣ್ಣು ರೋಮ್ ವಿಶ್ವ ಕಿರೀಟದತ್ತ |
| ಬರ್ಲಿನ್, ಶುಕ್ರವಾರ, 5 ಸೆಪ್ಟೆಂಬರ್ 2008 ( 12:32 IST ) | |
ನಿವೃತ್ತಿಯಾಗಿನ ಊಹಾಪೋಹಗಳನ್ನು ನಿರಾಕರಿಸಿರುವ ಉಭಯ ಒಲಿಂಪಿಕ್ ಚಾಂಪಿಯನ್ ಈಜುಗಾರ್ತಿ ಬಿಟ್ಟ ಸ್ಟೆಫೆನ್, ಮುಂದಿನ ಬೇಸುಗೆಯ ರೋಮ್‌ನಲ್ಲಿನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವತ್ತ ಕಣ್ಣು ಹಾಯಿಸಿದ್ದಾರೆ.
24 ವರ್ಷದ ಅವರು ಬೀಜಿಂಗ್ ಒಲಿಂಪಿಕ್‌ನಲ್ಲಿ 50 ಮೀಟರ್ ಮತ್ತು 100 ಮೀಟರ್ ಫ್ರೀಸ್ಟೈಲ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು ಮತ್ತು 2009 ಜುಲೈ 18ರಿಂದ ಅಗಸ್ಟ್ 2ರ ವರೆಗೆ ನಡೆಯಲಿರುವ ರೋಮ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇನ್ನೂ ಹೆಚ್ಚಿನ ಸ್ವರ್ಣ ಗೆಲ್ಲುವತ್ತ ಎದುರು ನೋಡುತ್ತಿದ್ದಾರೆ.
ತಾನು ಈಜು ಮುಂದುವರಿಸಲಿದ್ದೇನೆ ಆದರೆ ಮುಂದಿನ 6 ತಿಂಗಳು ತಾನು ತನ್ನ ವಿದ್ಯಾಭ್ಯಾಸಕ್ಕೆ ಮರಳಲು ಇಚ್ಚಿಸುತ್ತೇನೆ ಎಂದು ಇಂಜಿನಿಯರ್ ವಿದ್ಯಾರ್ಥಿ ಸ್ಟೆಫೆನ್ ಜರ್ಮನ್ ಟಿವಿ ಸ್ಟೇಷನ್‌ನಲ್ಲಿ ತಿಳಿಸಿದ್ದಾರೆ.
ಒಂದು ಸಾರಿ ತಾನು ಫೆಬ್ರವರಿಯಲ್ಲಿ ತನ್ನ ಪರೀಕ್ಷೆಯನ್ನು ಮುಗಿಸಿದ ಕೂಡಲೆ, ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಸಿದ್ಧತೆ ನಡೆಸಲು ಆರು ಎಂಟು ವಾರಗಳ ಕಾಲ ಆಸಿಸ್‌ಗೆ ಹೋಗಲಿದ್ದೇನೆ ಎಂದು ತಿಳಿಸಿದ್ದಾರೆ.
ಒಲಿಂಪಿಕ್ ನಂತರ ಸ್ಟೆಫೆನ್ ನಿವೃತ್ತಿಯಾಗಲಿದ್ದಾರೆ ಎಂಬ ಕೆಲ ಊಹಾಪೋಹಗಳು ಎದ್ದಿದ್ದವು ಆದರೆ ಸ್ಪೆಫೆನ್ ತಾವು ಇನ್ನೂ ಯಶಸ್ಸಿನ ತವಕದಲ್ಲಿದ್ದೇನೆ ಎಂದು ಹೇಳಿದ್ದಾರೆ. ತಾನು ಈಗಲೂ ವಿಶ್ವ ಚಾಂಪಿಯನ್ ಆಗಲು ಇಚ್ಚಿಸುತ್ತೇನೆ. ಒಂದು ವೇಳೆ ಅದು ಸಂಭವಿಸಿದರೆ, ತಾನು ಒಂದೇ ಸಮಯದಲ್ಲಿ ಎಲ್ಲಾ ಕಿರೀಟವನ್ನು ಗೆದ್ದಂತಾಗುವುದು ಎಂದು ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಹಿಂದಿಯ ಫೂಂಕ್ ಚಿತ್ರದಲ್ಲಿ ಅಳವಡಿಸಲಾಗಿರುವ ಅದ್ಬುತ ಸೌಂಡ್ ಎಫೆಕ್ಟ್ ಸಿಸ್ಟಮ್ ಅನ್ನು ಇದೀಗ ಕನ್ನಡದಲ್ಲೂ ಬಳಸಿಕೊಳ್ಳಲು ನಿರ್ದೇಶಕ ಪದ್ಮನಾಭ ನಿರ್ಧರಿಸಿದ್ದಾರೆ. ತಮ್ಮ ಮುಂದಿನ ಚಿತ್ರ 'ನಿಷೇಧಾಜ್ಞೆ'ಗೆ ಇದೀಗ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ. |
| |
|
|
|
|
|
|
|