|
| ಒಲಿಂಪಿಕ್ಸ್‌ಗೆ ವಿಜೃಂಭಣೆಯ ಚಾಲನೆ |
| ಬೀಜಿಂಗ್, ಶುಕ್ರವಾರ, 8 ಆಗಸ್ಟ್ 2008 ( 20:24 IST ) | |
ಅಭೂತಪೂರ್ವ ಭದ್ರತೆಯ ನಡುವೆ ಬೀಜಿಂಗ್ ಒಲಿಂಪಿಕ್ಸ್ -08 ಕ್ರೀಡಾಕೂಟಕ್ಕೆ 'ಹಕ್ಕಿಗೂಡು' (ಬರ್ಡ್ಸ್ ನೆಸ್ಟ್) ಎಂದೇ ಕರೆಯಲಾಗುವ ವಿಶಿಷ್ಟ ಆಕಾರವುಳ್ಳ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ಅದ್ದೂರಿಯ ಚಾಲನೆ ನೀಡಿದೆ.
08ನೇ ಇಸವಿ, 08ನೇ ತಿಂಗಳು, 08ನೇ ದಿನಾಂಕ, 08ನೇ ಗಂಟೆ, 08ನೇ ನಿಮಿಷಕ್ಕೆ ಈ ಚತುರ್ವಾರ್ಷಿಕ ವಿಶ್ವ ಕ್ರೀಡಾಕೂಟವು ವೈಭವಯುತವಾಗಿ ಅನಾವರಣಗೊಂಡಿದ್ದು, ಆಗಸ್ಟ್ 24ರವರೆಗೆ ನಡೆಯುವ ವೈವಿಧ್ಯಮಯ ಕ್ರೀಡಾ ಪ್ರಕಾರಗಳಲ್ಲಿ ವಿಶ್ವದ 205 ರಾಷ್ಟ್ರಗಳ ಸುಮಾರು 70 ಸಾವಿರದಷ್ಟು ಅಥ್ಲೀಟ್‌ಗಳು ತಮ್ಮ ತಮ್ಮ ರಾಷ್ಟ್ರಗಳ ಕ್ರೀಡಾ ಶಕ್ತಿ ಪ್ರದರ್ಶಿಸಲಿದ್ದಾರೆ.
ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆ (ಅಂದರೆ ಗ್ರೀನ್ವಿಚ್ ಕಾಲಮಾನ 12 ಗಂಟೆ)ಗೆ ಬಾನಂಗಳದಲ್ಲಿ ಸುಡುಮದ್ದುಗಳ ಬಣ್ಣಬಣ್ಣದ ಚಿತ್ತಾರವು ಚಿತ್ತಾಕರ್ಷಕವಾಗಿ ಮೂಡಿಬರುವುದರೊಂದಿಗೆ 29ನೇ ಒಲಿಂಪಿಯಾಡ್ ಅದ್ದೂರಿಯ ಚಾಲನೆ ಪಡೆದುಕೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಳುಗಳು, ದೇಶವಿದೇಶಗಳ ಅತಿಥಿಗಳು, ಕ್ರೀಡಾಪ್ರೇಮಿಗಳು ಸೇರಿದಂತೆ ಸುಮಾರು 1.60 ಲಕ್ಷ ಮಂದಿ ಭಾಗವಹಿಸಿದ್ದು, ಚೀನಾದ ಸಾಂಸ್ಕೃತಿಕ ವೈಭವ, ಆಕರ್ಷಕ ಸುಡುಮದ್ದಿನ ಪ್ರದರ್ಶನ, ಲೇಸರ್ ಬೆಳಕಿನಾಟದೊಂದಿಗೆ ಕಣ್ಮನ ತಣಿಸಿದ ಕ್ರೀಡಾಹಬ್ಬದ ಚಾಲನೆಗೆ ಸಾಕ್ಷಿಯಾದರು.
ಸುಮಾರು 15 ಸಾವಿರ ಮಂದಿ ಕಲಾವಿದರು, 29 ಸಾವಿರ ಸುಡುಮದ್ದುಗಳು ಈ ಕ್ರೀಡಾಕೂಟಕ್ಕೆ ವರ್ಣಮಯ, ಅದ್ದೂರಿಯ ಆರಂಭ ನೀಡಿದ್ದು, ಒಂದು ಕಾಲದಲ್ಲಿ ಚೀನಾದಿಂದ ನಿಷೇಧಿತರಾಗಿದ್ದ ಚಿತ್ರ ನಿರ್ದೇಶಕ ಝಾಂಗ್ ಯಿಮೊಯು ಅವರು, ಚೀನಾದ 5000 ವರ್ಷಗಳ ಇತಿಹಾಸವನ್ನು ಒಂದು ಪ್ರದರ್ಶನಕ್ಕೆ ಇಳಿಸುವ ಹೊಣೆಯೊಂದಿಗೆ ವಿಶಿಷ್ಟ ಪ್ರದರ್ಶನವೊಂದನ್ನು ಪ್ರಸ್ತುತಪಡಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮನಸ್ಸಿನ ಬಯಕೆ ಗಳಿಸಲು ಕೌಟುಂಬಿಕ ಸಂಬಂಧಗಳು ಪ್ರಮುಖ ಪಾತ್ರವಹಿಸುತ್ತವೆ. ಒಳ್ಳೆಯ ಕ್ಷಣಗಳಿಗಾಗಿ ತವಕಿಸುವ ನಿಮ್ಮ ಆಸೆ ಇಂದು ಮೇರುಮಟ್ಟಕ್ಕೇರುತ್ತದೆ. ಹೊಸ ಕೆಲಸ ಅಥವಾ ಯೋಜನೆ ಆರಂಭಿಸಲು ಸಂದರ್ಭಗಳು ಏರ್ಪಡುತ್ತವೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಂದೊಮ್ಮೆ ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಾಯಕಿಯಾಗಿ ಮಿಂಚಿದ ಸುಧಾರಾಣಿ ಈಗ ಕಾನನದಲ್ಲಿದ್ದಾರೆ. ಆಶ್ಚರ್ಯವೇ? ಅರಣ್ಯಗಳ ವಿನಾಶದ ಬಗ್ಗೆ, ಅರಣ್ಯ ರಕ್ಷಣೆ ಸಂಬಂಧಿಸಿದಂತೆ ಪರಿಸರ ಕಾಳಜಿಯುಳ್ಳ ಡಾ. ಸರಸ್ವತಿ |
| |
|
|
|
|
|
|
|