|
| ನಾಟಿಂಗ್‌ಶೈರ್‌ನಿಂದ ವಿವಿಎಸ್‌ಗೆ ಅಂತಿಮ ಗಡು |
| ಲಂಡನ್, 24 ಜುಲೈ 2008 ( 13:03 IST ) | |
ಕೌಂಟಿಯನ್ನು ಸೇರುತ್ತಾರೋ ಇಲ್ಲವೊ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ನಾಟಿಂಗ್‌ಶೈರ್ ಭಾರತದ ವಿವಿಎಸ್ ಲಕ್ಷ್ಮಣ್‌ಗೆ ಶುಕ್ರವಾರದವರೆಗೆ ಸಮಯ ನೀಡಿದೆ.
ತಾವು ಈಗಾಗಲೇ ಎರಡು ಆಟಗಾರರಲ್ಲಿ ಮಾತನಾಡಿದ್ದು, ಒಂದು ವೇಳೆ ವಿವಿಎಸ್ ಲಕ್ಷ್ಮಣ್ ಬರದಿದ್ದರೆ, ತಾವು ಅವರನ್ನು ಪುನಃ ಸಂಪರ್ಕಿಸಲಿದ್ದೇವೆ ಎಂದು ನಾಟಿಂಗ್‌ಶೈರ್ ಕ್ರಿಕೆಟ್ ನಿರ್ದೇಶಕ ಮಿಕ್ ನೆವೆಲ್ಲ್ ತಿಳಿಸಿದ್ದಾರೆ. ತಾನು ಈ ಬಗ್ಗೆ ಶುಕ್ರವಾರದ ಒಳಗೆ ತಿಳಿಯಲು ಇಚ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ಲೀಗ್ ಆಟಗಾರರನ್ನು ಹೊಂದಿರುವ ಕೌಂಟಿಗಳಲ್ಲಿ ಪಾಲ್ಗೊಳ್ಳದಿರುವಂತೆ ಲಕ್ಷ್ಮಣ್ ಮತ್ತು ಪೀಯುಶ್ ಚಾವ್ಲಾರಲ್ಲಿ ಬಿಸಿಸಿಐ ಕೋರಿದ್ದು, ಈ ಹಿನ್ನೆಲೆಯಲ್ಲಿ ಲಕ್ಷ್ಮಣ್ ಪಾಲ್ಗೊಳ್ಳುವ ಸಂಭವವಿಲ್ಲ. ಆಸ್ಟ್ರೇಲಿಯಾದ ಆಡಂ ವೊಗ್ಸ್ ಬದಲಿಯಾಗಿ ಲಕ್ಷ್ಮಣ್ ಕ್ಲಬ್‌ನ್ನು ಸೇರಬೇಕಾಗಿತ್ತು.
ತಾವು ವಿವಿಎಸ್ ಜತೆ ಒಡಂಬಡಿಕೆ ಮಾಡಿದ್ದೇವೆ ಎಂದಾಗಿ ಯೋಚಿಸಿದ್ದೆವು ಮತ್ತು ಬಿಸಿಸಿಐಯ ಅನುಮತಿ ಇದೆ ಎಂದು ತಿಳಿದಿದ್ದೆವು, ಆದರೆ ಈಗ ಅವರು ಸಂಪೂರ್ಣ ಒಪ್ಪಂದವನ್ನು ಪ್ರಶ್ನಿಸುತ್ತಿದ್ದಾರೆ ಎಂದು ನೆವೆಲ್ಲ್ ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | pti |
| | |
| |
|
|
|
|
|
| ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ. |
| |
|
|
|
|
|
|
|