|
| ಇಡಬ್ಲ್ಯುಬಿ ಕ್ಲಾಸಿಕ್: ಸಾನಿಯಾ ಔಟ್ |
| ಲಾಸ್ ಏಂಜಲೀಸ್, ಗುರುವಾರ, 24 ಜುಲೈ 2008 ( 11:10 IST ) | |
ಈಸ್ಟ್ ವೆಸ್ಟ್ ಬ್ಯಾಂಕ್ (ಇಡಬ್ಲ್ಯುಬಿ) ಕ್ಲಾಸಿಕ್ ಟೂರ್ನೆಮೆಂಟಿನಲ್ಲಿನ ಎರಡನೇ ಸುತ್ತಿನ ಪಂದ್ಯದಲ್ಲಿ ಎದುರಾಳಿ ಚೀನಾದ ಮೆಂಗ್ ಯೌನ್ ವಿರುದ್ಧ ನೇರ ಸೆಟ್ಟುಗಳ ಸೋಲು ಕಾಣುವುದರೊಂದಿಗೆ ಭಾರತದ ಸಾನಿಯಾ ಮಿರ್ಜಾ ತಮ್ಮ ಎರಡನೇ ಸುತ್ತಿನಲ್ಲಿನ ಸೋಲಿನ ಚಾಳಿಯನ್ನು ಮುಂದುವರಿಸಿದ್ದಾರೆ.
16ನೇ ಶ್ರೇಯಾಕಿತೆ ಭಾರತೀಯ ಆಟಗಾರ್ತಿ ಶ್ರೇಯಾಂಕ ರಹಿತ ಚೀನಾ ಆಟಗಾರ್ತಿ ವಿರುದ್ಧ 4-6 3-6ದಲ್ಲಿ ಸೋಲು ಅನುಭವಿಸಿ, ಹಾರ್ಡ್ ಕೋರ್ಟ್ ಟೂರ್ನಿಯಿಂದ ಹೊರ ಬಿದ್ದರು. ಯೌನ್‌ರ ಸರ್ವ್‌ನ್ನು ಒಂದು ಸಾರಿ ಮುರಿದ ಸಾನಿಯಾ, ತಮ್ಮದೇ ಸರ್ವ್‌ನ್ನು ಎರಡು ಬಾರಿ ಕಳೆದುಕೊಳ್ಳುವ ಮೂಲಕ ಮೊದಲ ಸೆಟ್ಟಿನಲ್ಲಿ ಹಿನ್ನಡೆ ಅನುಭವಿಸಿದರು.
ಎರಡನೇ ಸೆಟ್ಟಿನಲ್ಲಿ ಸಾನಿಯಾ 6 ಬ್ರೇಕ್ ಪಾಯಿಂಟುಗಳಲ್ಲಿ ಕೇವಲ ಮೂರು ಬ್ರೇಕ್ ಪಾಯಿಂಟುಗಳನ್ನು ಪರಿವರ್ತಿಸುವಲ್ಲಿ ಸಫಲರಾದರೆ, ಎದುರಾಳಿ ತಮ್ಮ ಪರ ಬಂದ ಎಲ್ಲಾ 5 ಬ್ರೇಕ್ ಪಾಯಿಂಟುಗಳನ್ನು ಪರಿವರ್ತಿಸಿ ಪಂದ್ಯವನ್ನು ತಮ್ಮದಾಗಿಸಿದರು.
ಕಳೆದ ತಿಂಗಳ ವಿಂಬಲ್ಡನ್ ಸಿಂಗಲ್ಸ್, ಬರ್ಮಿಂಗ್ಯಾಮ್, ಹೆರ್ಟೊಗೆನ್‌ಬೋಸ್ಕ್‌ನಲ್ಲಿನ ಡಬ್ಲ್ಯುಟಿಎ ಟೂರ್ನಿಯಲ್ಲಿ ಸಾನಿಯಾ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲು ಕಂಡಿದ್ದರು. ಕಳೆದ ವಾರ ಸಾನಿಯಾ ಸ್ಟ್ಯಾಂಡ್‌ಫೋರ್ಡ್ ಟೂರ್ನಿಯಲ್ಲಿ ಬ್ರಿಟೀಷ್ ಎದುರಾಳಿ ವಿರುದ್ಧ ಮೊದಲ ಸುತ್ತಿನ ಸೋಲು ಕಂಡಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು. |
| |
|
|
|
|
 | | pti |
| | |
| |
|
|
|
|
|
| ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ. |
| |
|
|
|
|
|
|
|